ಬೆಂಗಳೂರಿನಲ್ಲಿ ವೈದ್ಯರೊಬ್ಬರಿಗೆ ಅಪರಿಚಿತ ಮಹಿಳೆಯಿಂದ ಆಘಾತಕಾರಿ ಮೆಸೇಜ್ ಬಂದಿದೆ. ತನ್ನ ಅತ್ತೆಯನ್ನು ಕೊಲ್ಲಲು ಮಾತ್ರೆ ಬರೆದುಕೊಡುವಂತೆ ಮಹಿಳೆ ವೈದ್ಯರಲ್ಲಿ ಮನವಿ ಮಾಡಿದ್ದಾಳೆ. ಈ ವಿಚಿತ್ರ ಘಟನೆ ಸಂಜಯನಗರ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು (ಫೆ.20):ತನಗೆ ಕಾಡುತ್ತಿರುವ ಅತ್ತೆಯನ್ನು ಕೊಲ್ಲಲು ಮಾತ್ರೆ ಬರೆದುಕೊಡುವಂತೆ ವೈದ್ಯರೊಬ್ಬರಿಗೆ ಅಪರಿಚಿತ ಮಹಿಳೆ ಮೆಸೇಜ್ ಮಾಡಿ ನೆರವು ಕೋರಿರುವ ವಿಚಿತ್ರ ಘಟನೆ ಸಂಜಯನಗರ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಳೆದ 2 ದಿನಗಳ ಹಿಂದೆ ಭದ್ರಪ್ಪ ಲೇಔಟ್‌ನ ವೈದ್ಯ ಡಾ.ಸುನೀಲ್ ಕುಮಾರ್ ಅವರಿಗೆ ಅನಾಮಧೇಯ ಹೆಸರಿನಲ್ಲಿ ವಾಟ್ಸಪ್‌ ಮೆಸೇಜ್‌ ಬಂದಿದ್ದು, ಈ ಬಗ್ಗೆ ಸಂಜಯನಗರ ಠಾಣೆಗೆ ಅವರು ದೂರು ದಾಖಲಿಸಿದ್ದಾರೆ. ಅದರನ್ವಯ ತನಿಖೆಗಿಳಿದಿರುವ ಪೊಲೀಸರು, ಆರೋಪಿ ಮಹಿಳೆ ಪತ್ತೆಗೆ ಹುಡುಕಾಟ ಶುರು ಮಾಡಿದ್ದಾರೆ.

ಇದನ್ನೂ ಓದಿಜಗಳವಾಡಬೇಡಿ ಎಂದ ಅತ್ತೆಯ ಸುತ್ತಿಗೆಯಲ್ಲಿ ಬಡಿದು ಕೊಂದ ಅಳಿಯ

ನನಗೆ ಸೋಮವಾರ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ನಿರಂತವಾಗಿ ಮೆಸೇಜ್‌ಗಳು ಬಂದಿದ್ದವು. "ನಮ್ಮ ಅತ್ತೆ ತುಂಬಾ ಹಿಂಸೆ ಕೊಡುತ್ತಾರೆ. ಆದ ಕಾರಣ ನಮ್ಮ ಅತ್ತೆಯನ್ನು ಸಾಯಿಸಲು ಎರಡು ಮಾತ್ರೆಗಳನ್ನು ಬರೆದುಕೊಡಿ " ಎಂದು ಆಕೆ ಮೆಸೇಜ್‌ನಲ್ಲಿ ಕೋರಿದ್ದರು ಎಂದು ದೂರಿನಲ್ಲಿ ವೈದ್ಯರು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಅತ್ತೆ ಒಂದು ದಿನವೂ ಬೈದಿಲ್ಲ ಅಂದ್ರು ಬಿಎಸ್‌ವೈ ಹಿರಿ ಸೊಸೆ | MP Raghavendra | Home Minister | Suvarna News