ಚಿತ್ರದುರ್ಗ: ಗಾಂಜಾ ಬೆಳೆದಿದ್ದ ಹೊಲಕ್ಕೆ ದಿಢೀರ್ ದಾಳಿ, ಜಮೀನು ಮಾಲೀಕ ಅರೆಸ್ಟ್‌

ಆರೋಪಿಯು ತನ್ನ ಜಮೀನಿನಲ್ಲಿ ಯಾರಿಗೂ ಅನುಮಾನ ಬರದಂತೆ ಹತ್ತಿ ಬೆಳೆಯ ನಡುವೆ ಗಾಂಜಾ ಗಿಡಗಳನ್ನು ಬೆಳೆಸಿದ್ದ. ಖಚಿತ ಮಾಹಿತಿಯನ್ನಾಧರಿಸಿ ಅಬಕಾರಿ ಉಪ ಆಯುಕ್ತ ಬಿ.ಮಾದೇಶ ನೇತೃತ್ವ ತಂಡ ಜಮೀನಿಗೆ ದಿಢೀರನೆ ದಾಳಿ ನಡೆಸಿದ್ದಾರೆ. ಈ ವೇಳೆ ಹತ್ತಿ ಬೆಳೆಯ ನಡುವೆ ಹೂ, ಕಾಯಿ ಬಿಟ್ಟಿದ್ದ 4.5 ಲಕ್ಷ ಅಂದಾಜಿನ 89 ಕೆಜಿ ತೂಕದ 18 ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ. 

89 KG Marijuana Siezed in Chitradurga grg

ಮೊಳಕಾಲ್ಮುರು(ಸೆ.28): ರಾಯಾಪುರದಲ್ಲಿ ಗಾಂಜಾ ಬೆಳೆದಿದ್ದ ಹೊಲಕ್ಕೆ ದಿಢೀರ್ ದಾಳಿ ನಡೆಸಿರುವ ಅಬಕಾರಿ ಇಲಾಖೆ ಅಧಿಕಾರಿಗಳ ತಂಡ 89 ಕೆಜಿ ಗಾಂಜಾ ವಶಪಡಿಸಿಕೊಂಡು, ಜಮೀನು ಮಾಲೀಕನನ್ನು ವಶಕ್ಕೆ ಪಡೆದಿರುವ ಘಟನೆ ಬುಧವಾರ ಸಂಜೆ ನಡೆದಿದೆ.

ಬಂಧಿತ ಜಮೀನಿನ ಮಾಲೀಕ ಬೈರಯ್ಯ(53) ಎಂದು ಗುರುತಿಸಲಾಗಿದೆ. ಆರೋಪಿಯು ತನ್ನ ಜಮೀನಿನಲ್ಲಿ ಯಾರಿಗೂ ಅನುಮಾನ ಬರದಂತೆ ಹತ್ತಿ ಬೆಳೆಯ ನಡುವೆ ಗಾಂಜಾ ಗಿಡಗಳನ್ನು ಬೆಳೆಸಿದ್ದ. ಖಚಿತ ಮಾಹಿತಿಯನ್ನಾಧರಿಸಿ ಅಬಕಾರಿ ಉಪ ಆಯುಕ್ತ ಬಿ.ಮಾದೇಶ ನೇತೃತ್ವ ತಂಡ ಜಮೀನಿಗೆ ದಿಢೀರನೆ ದಾಳಿ ನಡೆಸಿದ್ದಾರೆ. ಈ ವೇಳೆ ಹತ್ತಿ ಬೆಳೆಯ ನಡುವೆ ಹೂ, ಕಾಯಿ ಬಿಟ್ಟಿದ್ದ 4.5 ಲಕ್ಷ ಅಂದಾಜಿನ 89 ಕೆಜಿ ತೂಕದ 18 ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧವಾಗಿ ನಾರ್ಕೋಟಿಕ್ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ದೊಡ್ಡಬಳ್ಳಾಪುರ: ಸಿಮೆಂಟ್ ರೆಡಿ ಮಿಕ್ಸ್ ಪ್ಲಾಂಟ್‌ನಲ್ಲಿ ಗಾಂಜಾ ಬೆಳೆದಿದ್ದ ಖದೀಮರು

ಈ ವೇಳೆ ಅಬಕಾರಿ ನಿರೀಕ್ಷಕ ಮೊಹಮದ್ ಸಾದತ್ ಉಲ್ಲಾ, ಸಿಬ್ಬಂದಿ ಈರಣ್ಣ, ವೀರೇಶ, ಮಲ್ಲಿಕಾರ್ಜುನಯ್ಯ, ವಾಹನ ಚಾಲಕ ಪರುಶುರಾಮ್, ಅರುಣ್ ಕುಮಾರ್, ಶಿವಮೂರ್ತಿ, ಶರಣಯ್ಯ ಇದ್ದರು.

Latest Videos
Follow Us:
Download App:
  • android
  • ios