Asianet Suvarna News Asianet Suvarna News

ಕೊಡಗು: ಗುಂಡು ಹಾರಿಸಿಕೊಂಡು ವೃದ್ಧೆ ಆತ್ಮಹತ್ಯೆ

ಲಾಕ್‌ಡೌನ್ ಮಧ್ಯೆ ವೃದ್ಧೆಯೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಭವಿಸಿದೆ.

75 Year old woman commits suicide-by-shooting-herself in Kodagu
Author
Bengaluru, First Published May 2, 2020, 4:48 PM IST
  • Facebook
  • Twitter
  • Whatsapp

ಕೊಡಗು, (ಮೇ.02): ಜೀವನದಲ್ಲಿ ಜುಗುಪ್ಸೆಗೊಂಡ ವೃದ್ಧೆಯೊಬ್ಬರು ಕೋವಿಯಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವೀರಾಜಪೇಟೆ ತಾಲ್ಲೂಕಿನ ಗೋಣಿಕೊಪ್ಪ ಸಮೀಪದ ಹೈಸೊಡ್ಲೂರಿನಲ್ಲಿ ನಡೆದಿದೆ.

ಕಾಫಿ ಬೆಳೆಗಾರ ಬಯವಂಡ ಪಿ ಲಕ್ಷ್ಮಣ ಎಂಬುವವರ ಪತ್ನಿ ತಾರಾ (75) ಎಂಬುವವರೇ ಆತ್ಮಹತ್ಯೆ ಮಾಡಿಕೊಂಡವರು. ಇಂದು (ಶನಿವಾರ) ಬೆಳಿಗ್ಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಒಂಟಿ ನಳಿಗೆಯ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ನವ ವಿವಾಹಿತ ದಂಪತಿ ಆತ್ಮಹತ್ಯೆಗೆ ಶರಣು!

ಇವರ ಪತಿ ಎರಡು ವರ್ಷಗಳ ಹಿಂದಷ್ಟೇ ನಿಧನರಾಗಿದ್ದರು. ಅವರ ಪತಿ ನಿಧನದ ನಂತರ ಇವರು ಮಾನಸಿಕ ಖಿನ್ನತೆಯಿಂದ ಬಳಲುತಿದ್ದರೆಂದು ಕೌಟುಂಬಿಕ ಮೂಲಗಳು ತಿಳಿಸಿವೆ.  ಈ ಬಗ್ಗೆ ಶ್ರೀಮಂಗಲ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Follow Us:
Download App:
  • android
  • ios