Asianet Suvarna News Asianet Suvarna News

ವೋಟರ್‌ ಲಿಸ್ಟ್‌ ಎಫೆಕ್ಟ್‌, 27 ವರ್ಷದ ಹಿಂದೆ ವಂಚಿಸಿ ಎಸ್ಕೇಪ್‌ ಆಗಿದ್ದ ವ್ಯಕ್ತಿ ಸಿಕ್ಕಿಬಿದ್ದ!

ವಂಚನೆ ಪ್ರಕರಣದಲ್ಲಿ ತಲೆಮಲೆಸಿಕೊಂಡಿದ್ದ 68 ವರ್ಷದ ಆರೋಪಿಯನ್ನು  ಬರೋಬ್ಬರಿ 27 ವರ್ಷಗಳ ನಂತರ ಮುಂಬೈನಲ್ಲಿ ಬಂಧಿಸಲಾಗಿದೆ. ಈತ ಸಿಕ್ಕಿ ಬೀಳಲು ಕಾರಣ ಮತದಾರ ಪಟ್ಟಿ ಎಂಬುದೇ ವಿದೇಶ.

68-year-old arrested after being on the run for 27 years in cheating case gow
Author
First Published Mar 24, 2023, 4:34 PM IST

ಮುಂಬೈ (ಮಾ.24): ವಂಚನೆ ಪ್ರಕರಣದಲ್ಲಿ ತಲೆಮಲೆಸಿಕೊಂಡಿದ್ದ ಆರೋಪಿಯನ್ನು  ಬರೋಬ್ಬರಿ 27 ವರ್ಷಗಳ ನಂತರ ಮುಂಬೈನಲ್ಲಿ ಬಂಧಿಸಲಾಗಿದೆ. 68 ವರ್ಷದ ವೀರೇಂದ್ರ ಪ್ರವೀಣಚಂದ್ರ ಸಾಂಘ್ವಿ ಅಕಾ ಮಹೇಶ್ ಶಾ  ಎಂಬಾತ ವಂಚನೆ ಪ್ರಕರಣ ಸಂಬಂಧ ತಲೆ ಮರೆಸಿಕೊಂಡಿದ್ದ ಈತನ ಬಂಧನಕ್ಕೆ ಕಳೆದ 27 ವರ್ಷಳಿಂದ ಪೊಲೀಸರು ಸತತ ಪ್ರಯತ್ನ ಮಾಡಿ ಮತದಾರರ ಪಟ್ಟಿಯನ್ನು ಪರಿಶೀಲಿಸಿ ಆತ ಇರುವ ಸ್ಥಳವನ್ನು ಪತ್ತೆ ಹಚ್ಚಲು ಡಿಬಿ ಮಾರ್ಗ್ ಪೊಲೀಸರು ತಿಂಗಳ ಕಾಲ ನಡೆಸಿದ ಪ್ರಯತ್ನಗಳ ನಂತರ ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಮತದಾರರ ಪಟ್ಟಿಯನ್ನು ಪರಿಶೀಲಿಸಿ  ಅವನ ಫೋನ್ ನಂಬರ್ ಪಡೆದುಕೊಂಡು, ಅವನ ವಿಳಾಸವನ್ನು ಕಂಡುಹಿಡಿದು, ಉದ್ಯೋಗಿಯಂತೆ ಫೋಸ್ ಕೊಟ್ಟ ಪೊಲೀಸರು ಅವನು ಬಾಡಿಗೆಗೆ ಪಡೆದ ಮನೆಗೆ ಭೇಟಿ ನೀಡಿ ಬಂಧಿಸಿದರು.

1995ರಲ್ಲಿ ರಾಜೀವ್ ಖಂಡೇಲ್‌ವಾಲ್‌ ಎಂಬಾತನ ದೂರಿನ ಮೇರೆಗೆ ಮಹೇಶ್ ಶಾ ವಿರುದ್ಧ ವಂಚನೆ ಮತ್ತು ಫೋರ್ಜರಿ ಪ್ರಕರಣ ದಾಖಲಿಸಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಖಂಡೇಲ್‌ವಾಲ್‌ಗೆ ವಿವಿಧ ಕಂಪನಿಗಳ ಷೇರುಗಳನ್ನು ನೀಡುವುದಾಗಿ ಭರವಸೆ ನೀಡಿ, ಸುಮಾರು  20 ಲಕ್ಷ ರೂ ಮೌಲ್ಯದ ಹಾಗೂ ನಕಲಿ ಷೇರು ವರ್ಗಾವಣೆ ಪ್ರಮಾಣ ಪತ್ರ ನೀಡಿ ವಂಚಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣ ಸಂಬಂಧ ಮಹೇಶ್ ಶಾ ನನ್ನು ಬಂಧಿಸಲಾಯಿತು, ಆದರೆ  1996 ರಲ್ಲಿ ಜಾಮೀನು ಪಡೆದಿದ್ದ, ನಂತರ ಅಲ್ಲಿಂದ ಪರಾರಿಯಾಗಿದ್ದ. ಪ್ರಕರಣದಲ್ಲಿ ಅದಾಗಲೇ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು, ಆದಾಗ್ಯೂ,  ಮಹೇಶ್ ಶಾ ಎಂದಿಗೂ ನ್ಯಾಯಾಲಯದ ಮುಂದೆ ಹಾಜರಾಗಲಿಲ್ಲ ಮತ್ತು ಆದ್ದರಿಂದ ಗಿರ್ಗಾಂವ್ ನ್ಯಾಯಾಲಯವು ಆತನ ವಿರುದ್ಧ ಹಲವಾರು ಜಾಮೀನು ಮತ್ತು ಜಾಮೀನು ರಹಿತ ವಾರಂಟ್‌ಗಳನ್ನು ಹೊರಡಿಸಿದ ನಂತರ ಸಕಾರಾತ್ಮಕ ಫಲಿತಾಂಶಗಳನ್ನು ನೀಡದ ನಂತರ ಅವನನ್ನು 'ಘೋಷಿತ ಅಪರಾಧಿ' ಎಂದು ಹೇಳಿತು.

ಸೊಸೆ ಕೆಲಸಕ್ಕೆ ಹೋಗಬಾರದೆಂದು ಇಟ್ಟಿಗೆಯಿಂದ ಹಲ್ಲೆ ನಡೆಸಿದ ಮಾವ!

ಆರೋಪಿ  ವಿಳಾಸ ಬದಲಿಸಿ ಬೇರೆ ವಿಳಾಸಕ್ಕೆ ಕಡೆ ಸ್ಥಳಾಂತರಗೊಂಡಿದ್ದರಿಂದ ಆತನನ್ನು ಪತ್ತೆ ಮಾಡುವುದು ಸವಾಲಿನ ಕೆಲಸವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಡಿ.ಬಿ.ಮಾರ್ಗ್ ಪೊಲೀಸರ ತಂಡಗಳು ಆತನ ಪತ್ತೆಗೆ ಪ್ರಯತ್ನಿಸಿದರೂ ಆತ ಇರುವ ಬಗ್ಗೆ ಯಾವುದೇ  ಮಾಹಿತಿ ಸಿಕ್ಕಿರಲಿಲ್ಲ.

ವಿಜಯಪುರ: ರಾಜಧಾನಿ ಲಾಡ್ಜ್‌ನಲ್ಲಿ ಎರಡು ಮೃತದೇಹಗಳು ಪತ್ತೆ: ಸಾವು ನಿಗೂಢ!

ಮತದಾರರ ಪಟ್ಟಿಯ ಮೂಲಕ, ಪೊಲೀಸರು ಇತ್ತೀಚೆಗೆ ಅತನ ಮೊಬೈಲ್ ಸಂಖ್ಯೆಯನ್ನು ಕಂಡುಕೊಂಡಿದ್ದರು.  ವಿವರಗಳನ್ನು ಪರಿಶೀಲಿಸಿ ಆತನ ಮೊಬೈಲ್ ಅನ್ನು ಅಧ್ಯಯನ ಮಾಡಿದ ನಂತರ ಆತನಿಗೆ ನಿರ್ದಿಷ್ಟ ಬ್ಯಾಂಕ್‌ನಿಂದ ಸಂದೇಶಗಳು ಬಂದಿವೆ ಎಂದು ತಿಳಿದು ಬಂದಿದೆ ಎಂದು ಡಿಬಿ ಮಾರ್ಗ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಪಾಂಡುರಂಗ್ ಸನಾಸ್ ಮಾಹಿತಿ ನೀಡಿದ್ದಾರೆ.

Follow Us:
Download App:
  • android
  • ios