ಇನ್ಫೋಸಿಸ್ ನಾರಾಯಣ ಮೂರ್ತಿ ಡೀಪ್ ಫೇಕ್ ವಿಡಿಯೋ ಬಳಸಿ ಮಹಿಳೆಗೆ 67.11 ಲಕ್ಷ ವಂಚನೆ

ಸೈಬರ್ ವಂಚಕರು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಹೆಸರಿನಲ್ಲಿ ಡೀಪ್ ಫೇಕ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಷೇರು ಹೂಡಿಕೆ ನೆಪದಲ್ಲಿ ಅಧಿಕ ಲಾಭದ ಆಸೆ ತೋರಿಸಿ ಮಹಿಳೆಯೊಬ್ಬರಿಂದ ಬರೋಬ್ಬರಿ 267.11 ಲಕ್ಷ ವರ್ಗಾಯಿಸಿ ಕೊಂಡು ಬಳಿಕ ವಂಚಿಸಿರುವ ಘಟನೆ ನಡೆದಿದೆ.
 

67 11 Lakh fraud to Woman Using Infosys Narayana Murthy Deep Fake Video gvd

ಬೆಂಗಳೂರು (ನ.06): ಸೈಬರ್ ವಂಚಕರು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಹೆಸರಿನಲ್ಲಿ ಡೀಪ್ ಫೇಕ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಷೇರು ಹೂಡಿಕೆ ನೆಪದಲ್ಲಿ ಅಧಿಕ ಲಾಭದ ಆಸೆ ತೋರಿಸಿ ಮಹಿಳೆಯೊಬ್ಬರಿಂದ ಬರೋಬ್ಬರಿ 267.11 ಲಕ್ಷ ವರ್ಗಾಯಿಸಿ ಕೊಂಡು ಬಳಿಕ ವಂಚಿಸಿರುವ ಘಟನೆ ನಡೆದಿದೆ. ಬನಶಂಕರಿ ಎರಡನೇ ಹಂತದ ಕೆ.ಜಿ.ವೀಣಾ ಅವರು ವಂಚನೆಗೆ ಒಳಗಾದವರು. ಇವರು ನೀಡಿದ ದೂರಿನ ಮೇರೆಗೆ ದಕ್ಷಿಣ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಅಪರಿಚಿತರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಏನಿದು ಪ್ರಕರಣ?: ಇತ್ತೀಚೆಗೆ ಸೈಬರ್ ವಂಚಕರು ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರು “ಎಫ್‌ಎಕ್ಸ್‌ ರೋಡ್ ಪ್ಲಾಟ್‌ಫಾರ್ಮ್ ಟ್ರೇಡಿಂಗ್' ಬಗ್ಗೆ ಮಾಹಿತಿ ನೀಡಿರುವಂತೆ ಡೀಪ್ ಫೇಕ್ ವಿಡಿಯೋ ಸೃಷ್ಟಿಸಿ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ಗೆ ಹಾಕಿದ್ದಾರೆ. ಬಳಿಕ 'ಇನ್ಫೋ ಅಟ್ ಎಫ್‌ಎಕ್ ರೋಡ್ ಡಾಟ್ ಕಾಮ್' ಎಂಬ ಇ-ಮೇಲ್ ಐಡಿಯಿಂದ ದೂರುದಾರೆ ವೀಣಾ ಅವರ ಇ-ಮೇಲ್ ಐಡಿಗೆ ತಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಹಣಹೂಡಿಕೆ ಮಾಡಿದರೆ ಹೆಚ್ಚಿನಲಾಭಪಡೆಯಬಹುದು ಎಂಬ ಸಂದೇಶ ಕಳುಹಿಸಿದ್ದಾರೆ. ಇದನ್ನು ನಂಬಿದ ವೀಣಾ ಅವರು ತಮ್ಮ ಕ್ರೆಡಿಟ್ ಕಾರ್ಡ್‌ನಿಂದ ಕ1.39 ಲಕ್ಷ ವರ್ಗಾಯಿಸಿ ಹೂಡಿಕೆ ಮಾಡಿದ್ದಾರೆ. ಬಳಿಕ ಸೈಬರ್ ವಂಚಕರು 28,363 ವನ್ನು ಲಾಭದ ರೂಪದಲ್ಲಿ ವಾಪಸ್ ನೀಡಿದ್ದಾರೆ. ಬಳಿಕ ವೀಣಾ ಅವರು ವಿವಿಧ ಹಂತಗಳಲ್ಲಿ 86.71 ಲಕ್ಷ ಹೂಡಿಕೆ ಮಾಡಿದ್ದಾರೆ. ನಂತರ ವಂಚಕರು ಯಾವುದೇ ಲಾಭಾಂಶ ನೀಡಿಲ್ಲ.

ಪ್ರಾಡಕ್ಟ್ ರೇಟಿಂಗ್ ಹೆಸರಿನಲ್ಲಿ ಆಮಿಷ: ಈ ನಡುವೆ ವೀಣಾ ಅವರು ಇನ್ಸ್‌ಸ್ಟಾಗ್ರಾಮ್ ಆ್ಯಪ್‌ನಲ್ಲಿ ವರ್ಕ್ ಪ್ರಮ್ ಹೋಂ ಜಾಹೀ ರಾತು ನೋಡಿದ್ದಾರೆ. ಬಳಿಕ ಜಾಹೀರಾತಿನಲ್ಲಿ ನೀಡಲಾಗಿದ್ದ ಲಿಂಕ್‌ವೊಂದನ್ನು ಕ್ಲಿಕ್ ಮಾಡಿ ದ್ದಾರೆ. ಟೆಲಿಗ್ರಾಮ್ ಆ್ಯಪ್ ಮುಖಾಂತರ ವೀಣಾ ಅವರನ್ನು ಸಂಪರ್ಕಿಸಿರುವ ವಂಚಕರು, 'ಎಎಸ್‌ಒಎಸ್ ಪ್ಲಾಟ್‌ಫಾರ್ಮ್'ನಲ್ಲಿ ಪ್ರಾಡ ಕೈಗಳಿಗೆ ರೇಟಿಂಗ್ ನೀಡುವ ಮುಖಾಂತರ ಹಣ ಗಳಿಸಬಹುದು ಎಂದು ತಿಳಿಸಿದ್ದಾರೆ. ಬಳಿಕ ವೀಣಾ ಅವರನ್ನು ಸಂಪರ್ಕಿಸಿರುವ ವಂಚಕರು, ಪ್ರಾಡಕ್ಟ್ ರೇಟಿಂಗ್ ಟಾಸ್ಕ್‌ ನೀಡಿ ಕ779 ನಂತೆ ಎರಡು ಬಾರಿ ಹಣವನ್ನೂ ಹಾಕಿದ್ದಾರೆ.

ನಾನು ತಪ್ಪು ಮಾಡಿದೆ ಅಂತ ಹೇಳುವ ಯೋಗ್ಯತೆ ಯಾರಿಗೂ ಇಲ್ಲ: ಮಾಜಿ ಪ್ರಧಾನಿ ದೇವೇಗೌಡ

ಆರಂಭದಲ್ಲಿ ಲಾಭಾಂಶ ನೀಡಿ ಬಳಿಕ ವಂಚನೆ: ನಂತರ ಇದರಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಪಡೆಯಬಹುದು ಎಂದು ವೀಣಾ ಅವರಿಗೆ ಅಮಿಷವೊಡ್ಡಿದ್ದಾರೆ. ಇದಕ್ಕೆ ಒಪ್ಪಿದ ವೀಣಾ ಅವರು ಆರಂಭದಲ್ಲಿ ಸ್ವಲ್ಪ ಹಣ ಹೂಡಿಕೆ ಮಾಡಿ ಲಾಭವನ್ನೂ ಪಡೆದಿದ್ದಾರೆ. ಬಳಿಕ ವಂಚಕರು ನೀಡಿದ ಬ್ಯಾಂಕ್ ಖಾತೆಗಳು ಹಾಗೂ ಯುಪಿಐ ಐಡಿಗಳಿಗೆ ವಿವಿಧ ಹಂತಗಳಲ್ಲಿ ಒಟ್ಟು ‍57.18 ಲಕ್ಷವರ್ಗಾಯಿಸಿ ದ್ದಾರೆ. ಬಳಿಕ ವಂಚಕರು ಲಾಭದ ರೂಪದಲ್ಲಿ ಕ55 ಸಾವಿರ ಹಣ ನೀಡಿದ್ದಾರೆ. ಬಳಿಕ ವಂಚಕರು ಸಂಪರ್ಕ ಕಡಿತಗೊಳಿಸಿಕೊಂಡು ಉಳಿದ 67.11 ಲಕ್ಷ ಹೂಡಿಕೆ ಹಣ ವಾಪಾಸ್ ನೀಡದೆ ವೀಣಾ ಅವರಿಗೆ ವಂಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios