ಬಿಡಿಎ ಕೇಸ್ ಕ್ಲೋಸ್ ಮಾಡಲು ಕೆಎಎಸ್ ಆಫೀಸರ್‌ನಿಂದ 55 ಲಕ್ಷ ಲಂಚ ಪಡೆದ ಆರೋಪ: ಸಿಸಿಬಿ ಸಿಬ್ಬಂದಿ ಅಮಾನತು

ಬಿಡಿಎ ನಿವೇಶನ ಹಂಚಿಕೆ ಹಗರಣದಲ್ಲಿ ಕೆಎಎಸ್ ಅಧಿಕಾರಿ ಮಂಗಳಾ ಹೆಸರನ್ನು ಕೇಸ್ ನಿಂದ ಕೈ ಬಿಡಿಸಲು ಸುಮಾರು 55 ಲಕ್ಷ ರೂಪಾಯಿ ಲಂಚ ಪಡೆದ ಆರೋಪದ ಮೇಲೆ ಸಿಸಿಬಿಯ ಪೊಲೀಸ್ ಹೆಡ್ ಕಾನ್‌ಸ್ಟೆಬಲ್‌ನನ್ನು ಅಮಾನತು ಮಾಡಲಾಗಿದೆ. 

55 Lakh Deal For Bda Illegal Accused Escape Ccb Head Constable Suspended gvd

ಕಿರಣ್.ಕೆ.ಎನ್, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು

ಬೆಂಗಳೂರು (ಜು.13): ನಗರದ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ 2022ರಲ್ಲಿ ದಾಖಲಾಗಿದ್ದ , ಬಿಡಿಎ ನಿವೇಶನ ಹಂಚಿಕೆ ಹಗರಣದಲ್ಲಿ ಕೆಎಎಸ್ ಅಧಿಕಾರಿ ಮಂಗಳಾ ಹೆಸರನ್ನು ಕೇಸ್ ನಿಂದ ಕೈ ಬಿಡಿಸಲು ಸುಮಾರು 55 ಲಕ್ಷ ರೂಪಾಯಿ ಲಂಚ ಪಡೆದ ಆರೋಪದ ಮೇಲೆ ಸಿಸಿಬಿಯ ಪೊಲೀಸ್ ಹೆಡ್ ಕಾನ್‌ಸ್ಟೆಬಲ್‌ನನ್ನು ಅಮಾನತು ಮಾಡಲಾಗಿದೆ. ಸಿಸಿಬಿಯ ವಿಶೇಷ ತನಿಖಾ ತಂಡದ ಹೆಡ್ ಕಾನ್ಸ್ ಟೇಬಲ್  ಯತೀಶ್ ನನ್ನ ಅಮಾನತು ಮಾಡಿ ಸಿಸಿಬಿ ಮುಖ್ಯಸ್ಥರು ಆದೇಶಿಸಿದ್ದಾರೆ. ನಕಲಿ ದಾಖಲಾತಿಗಳನ್ನ ಸೃಷ್ಟಿಸಿದ ಆರೋಪ ಹಿನ್ನೆಲೆ 2022ರಲ್ಲಿ ಬಿಡಿಎ ಅಧಿಕಾರಿಗಳ ವಿರುದ್ಧ ಶೇಷಾದ್ರಿಪುರ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿತ್ತು. 

ಈ ಪ್ರಕರಣವನ್ನ ಬೆಂಗಳೂರಿನ ಅಂದಿನ ಕಮಿಷನರ್ ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು. ತನಿಖೆ ಇನ್ನೂ ಬಾಕಿಯಲ್ಲಿದ್ದು, ಈ ಹಂತದಲ್ಲೆ ಕೆ ಎಎಸ್ ಅಧಿಕಾರಿಯಾಗಿದ್ದ ಮಂಗಳ ಅವರಿಗೆ ಸಹಾಯ ಮಾಡೋದಾಗಿ ಹೇಳಿ ಯತೀಶ್ 55 ಲಕ್ಷ ಹಣ ಪಡೆದಿದ್ದಾರಂತೆ. ನೀವು ಯಾರ ಬಳಿಯೂ ಮಾತನಾಡಬೇಡಿ ನಾನು ಈ ಕೇಸ್ ನ ನೋಡಿಕೊಳ್ಳೋದಾಗಿ ಯತೀಶ್ ಹಣ ಪಡೆದಿದ್ದಾರೆ. ಇತ್ತಿಚ್ಚೆಗೆ ಹಳೇ ಕೇಸ್ ಕ್ಲಿಯರ್ ಮಾಡುವಂತೆ ಸಿಸಿಬಿ ಮುಖ್ಯಸ್ಥ ಆಯುಕ್ತ ಚಂದ್ರಗುಪ್ತ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆ ಅಧಿಕಾರಿಗಳು ಹಳೇ ಪ್ರಕರಣದ ಆರೋಪಿಗಳಿಗೆ ನೋಟೀಸ್ ನೀಡಿದ್ದಾರೆ. 

ಸಿಎಂ ಸಿದ್ಧರಾಮಯ್ಯಗೆ ರೈತರು ಹಾಗೂ ಸಾರ್ವಜನಿಕರು ನೀಡಿದ್ದ ಮನವಿ ಪತ್ರ ಕಸದ ರಾಶಿಯಲ್ಲಿ!

ಈ ವೇಳೆ ಕೆ ಎಎಸ್ ಅಧಿಕಾರಿ  ಹಣ ನೀಡಿರೋ ವಿಚಾರವನ್ನ ಸಿಸಿಬಿ ಆಯುಕ್ತರ ಗಮನಕ್ಕೆ ತಂದಿದ್ದಾರೆ. ಹೆಚ್ಚುವರಿ ಆಯುಕ್ತ ಚಂದ್ರಗುಪ್ತ ಈ ಬಗ್ಗೆ ವಿಚಾರಿಸಿದಾಗ ಸಿಸಿಬಿ ಸಿಬ್ಬಂದಿ ಯತೀಶ್ ಹಣ ತಗೆದುಕೊಂಡಿರೋದ ಬೆಳಕಿಗೆ ಬಂದಿದೆ. ಹಿರಿಯ ಅಧಿಕಾರಿಗಳು ತರಾಟೆ ತೆಗೆದುಕೊಳ್ಳುತ್ತಿದ್ದಂತೆ. ಸದ್ಯ ಕೋಲಾರದಲ್ಲಿರೋ ಕೆ ಎ ಎಸ್ ಅಧಿಕಾರಿ ಮಂಗಳ ಅವರಿಗೆ 30 ಲಕ್ಷ ವಾಪಸ್ ನೀಡಿ ಬಾಕಿ 25 ಲಕ್ಷ ಹಣ ಇಲ್ಲ.  ಹಿರಿಯ ಅಧಿಕಾರಿಗಳಿಗೆ ಪೂರ್ತಿ ಹಣ ವಾಪಸ್ ನೀಡಿರೋದಾಗಿ ಹೇಳಿ ಎಂದು ಕೈಕಾಲು ಹಿಡಿದಿದ್ದಾನೆ. ಸದ್ಯ ವಿಚಾರ ಗೊತ್ತಾತ್ತಿದ್ದಂತೆ ಹೆಡ್ ಕಾನ್ಸ್ಟೇಬಲ್ ಯತೀಶ್ ನ ಅಮಾನತು ಮಾಡಿ ಇಲಾಖಾ ತನಿಖೆಗೆ ಅಧಿಕಾರಿಗಳು ಒಳಪಡಿಸಿದ್ದಾರೆ.

Latest Videos
Follow Us:
Download App:
  • android
  • ios