Asianet Suvarna News Asianet Suvarna News

ಮನೆಮುಂದೆ ಆಟವಾಡ್ತಿದ್ದ ಮಗು ಏಕಾಏಕಿ ಸಾವು; ಕೊಂದಳ ಮಲತಾಯಿ?

ರೋಗ್ಯವಾಗಿದ್ದ ಮಗು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಬೆಳಗಾವಿ ನಗರದ ಎಪಿಎಂಸಿ ಯಾರ್ಡ್ ಬಳಿ ಇರೋ ರಾಯಣ್ಣ ನಾವಿ ಮನೆಯಲ್ಲಿ ನಡೆದಿದ್ದು, ಮಗುವನ್ನ ಮಲತಾಯಿಯೇ ಕೊಂದ ಆರೋಪ ಕೇಳಿಬಂದಿದೆ.

4 year-old child dies suspiciously in apmc at belagavi city rav
Author
First Published May 20, 2024, 12:12 PM IST

ಬೆಳಗಾವಿ (ಮೇ.20): ಆರೋಗ್ಯವಾಗಿದ್ದ ಮಗು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಬೆಳಗಾವಿ ನಗರದ ಎಪಿಎಂಸಿ ಯಾರ್ಡ್ ಬಳಿ ಇರೋ ರಾಯಣ್ಣ ನಾವಿ ಮನೆಯಲ್ಲಿ ನಡೆದಿದ್ದು, ಮಗುವನ್ನ ಮಲತಾಯಿಯೇ ಕೊಂದ ಆರೋಪ ಕೇಳಿಬಂದಿದೆ.

4 ವರ್ಷದ ಮಗು ಮನೆಮುಂದೆ ಆಟವಾಡುತ್ತಿದ್ದಾಗ ಏಕಾಏಕಿ ಆರೋಗ್ಯ ಗಂಭೀರವಾಗಿದೆ. ಚಿಕಿತ್ಸೆಗೆ ಬೆಳಗಾವಿ ಬೀಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬರುವಾಗಲೇ ಮಗು ದಾರಿ ಮಧ್ಯೆ  ಮೃತಪಟ್ಟಿದೆ. ಮಗು ಮೃತಪಟ್ಟ ಸುದ್ದಿ ಕೇಳಿ ಆಸ್ಪತ್ರೆಗೆ ದಾವಿಸಿ ಬಂದ ಮಗುವಿನ ಅಜ್ಜ, ಅಜ್ಜಿ ಅಕ್ರಂದನ ಮುಗಿಲುಮುಟ್ಟಿದೆ. 

ಅಂಜಲಿ, ನೇಹಾ ಹಂತಕರನ್ನು ಎನ್‌ಕೌಂಟರ್‌ ಮಾಡಿ: ಬೆಸ್ತ ಸಮಾಜ ಸಂಘದಿಂದ ಪ್ರತಿಭಟನೆ

ಈ ವೇಳೆ ಮೊಮ್ಮಗಳನ್ನ ಮಲತಾಯಿಯೇ ಕೊಂದಿದ್ದಾಳೆ ಎಂದು ಗಂಭೀರ ಆರೋಪ ಮಾಡಿರುವ ಮಗುವಿನ ಅಜ್ಜಿ. ಮಗುವಿನ ತಂದೆ ರಾಯಣ್ಣ ನಾವಿ ಸಿಆರ್‌ಪಿಎಫ್‌ನ ಯೋಧರಾಗಿದ್ದಾರೆ. ಮಗುವಿನ ತಾಯಿ 2021ರಲ್ಲಿ ವರದಕ್ಚಿಣೆ ಕಿರುಕುಳ ಕೊಟ್ಟು ಕೊಲೆ ಮಾಡಲಾಗಿತ್ತು. ಇದೀಗ ನಾಲ್ಕು ವರ್ಷದ ಮೊಮ್ಮಗಳನ್ನ ಮಲತಾಯಿಯೇ ಕೊಂದಿದ್ದಾಳೆ ಮೃತ ಬಾಲಕಿಯ ಅಜ್ಜಿ ಆರೋಪಿಸಿದ್ದಾರೆ. ಆದರೆ ಮಗುವಿನ ತಂದೆ ಬರುವವರೆಗೆ ಕೇಸ್ ದಾಖಲಿಸಿಕೊಳ್ಳಲು ಪೊಲೀಸರು ಹಿಂದೇಟು ಹಾಕಿದ್ದಾರೆ. ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Latest Videos
Follow Us:
Download App:
  • android
  • ios