ಮಧುರೈ, (ಫೆ.24): ತನ್ನ ತಾಯಿಯ ಅಕ್ರಮ ಸಂಬಂಧವನ್ನ ತಂದೆಗೆ ಹೇಳಿದ್ದಕ್ಕೆ ಅಪ್ರಾಪ್ತ ಬಾಲಕನನ್ನು ಕೊಲೆಗೈದ ದುರ್ಘಟನೆಯೊಂದು ತಮಿಳುನಾಡಿನ ಮಧುರೈ ಹತ್ತಿರದ ತಿರುನೆಲ್ವೇಲಿ ಎಂಬಲ್ಲಿ ನಡೆದಿದೆ.

ಲೋಕೇಶ್(4) ಕೊಲೆಯಾದ ಮಗು. ಸೂರಿಮುತ್ತು ಹಾಗೂ ಕೊಲೆಯಾದ ಬಾಲಕನ ತಾಯಿ ದೀಪಾಳ ಮಧ್ಯೆ ಅಕ್ರಮ ಸಂಬಂಧವಿತ್ತು. ಈ ವಿಚಾರವನ್ನು ಬಾಲಕ ತನ್ನ ತಂದೆಯ ಬಳಿ ಹೇಳಿದ್ದಾನೆ.

ತವರು ಮನೆಗೆ ಹೋಗಲು ಬಿಡದ ಪತಿಯ ಮರ್ಮಾಂಗವನ್ನೇ ಕತ್ತರಿಸಿದ್ಲು ಪತ್ನಿ

ಬಳಿಕ ತನ್ನ ಅಕ್ರಮ ಸಂಬಂಧ ಬಯಲು ಮಾಡಿದ್ದಕ್ಕೆ ಸೂರಿಮುತ್ತು, ಲೋಕೇಶ್‌ನನ್ನ ಹೊಡೆದ ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಸದ್ಯ ಪೊಲೀಸರು ಸೂರಿಮುತ್ತುಗಾಗಿ ಹುಡುಕಾಟ ನಡೆಸುತ್ತಿದ್ದಾರೆ. 

ರಂಗೀನಾಟದ ಹಿನ್ನೆಲೆ
ಕೊಯಂಬತ್ತೂರಿನ ಪೊಲ್ಲಾಚಿ ನಿವಾಸಿಯಾಗಿರುವ ದೀಪಾಳಿಗೆ 2005ರಲ್ಲಿ ಆಂಟೋನಿ ಪ್ರಕಾಶ್ ಎಂಬಾತನ ಜೊತೆ ವಿವಾಹವಾಗಿದ್ದು, ದಂಪತಿಗೆ ಗಂಡು ಮಗು ಸಹ ಇದೆ. 

ದೀಪಾಳಿಗೆ ಸೂರಿಮುತ್ತು ಮೇಲೆ ಮನಸ್ಸಾಗಿದೆ. ಅಲ್ಲದೇ ಆತನ ಜತೆ ಫೋನ್‌ನಲ್ಲಿ ಮಾತನಾಡುತ್ತಿದ್ದರು. ಅಲ್ಲದೇ  ಪ್ರಕಾಶ್ ಇಲ್ಲದಿದ್ದಾಗ ಸೂರಿಮುತ್ತುನನ್ನ ದೀಪಾ ಮನೆಗೆ ಕರೆಯಿಸಿಕೊಂಡು ಚಕ್ಕಂದವಾಡುತ್ತಿದ್ದಳು.

ಇಬ್ಬರು ಶಿಕ್ಷಕರಿಗೆ ಅದೇ ವಿದ್ಯಾರ್ಥಿನಿ ಬೇಕು: ಇದು ಟೀಚರ್ಸ್ ಪ್ರೇಮ್ ಕಹಾನಿ

ಹೀಗೆ ಒಂದು ದಿನ ಗಂಡ ಮನೆಯಲ್ಲಿ ಇಲ್ಲದಿದ್ದಾಗ ಇಬ್ಬರು ಲಾಡ್ಜ್‌ಗೆ ಹೋಗಿದ್ದಾರೆ. ಜತೆಗೆ ಲೋಕೇಶ್‌ನನ್ನ ಜತೆಗೆ ಕರೆದುಕೊಂಡು ಹೋಗಿ, ಕೈಗೆ ಮೊಬೈಲ್ ಕೊಟ್ಟು ರೂಮ್‌ನ ಆಚೆ ಕೂರಿಸಿದ್ದಾರೆ.

ಆದ್ರೆ, ಇತ್ತ ಗಂಡ ಪ್ರಕಾಶ್ ಮನೆಗೆ ಬಂದಿದ್ದಾನೆ. ಈ ವೇಳೆ ಮನೆಯಲ್ಲಿ ಹೆಂಡ್ತಿ ಹಾಗೂ ಮಗು ಇಲ್ಲದಿದ್ದಾಗ ಪ್ರಕಾಶ್‌ಗೆ ಅನುಮಾನ ಬಂದಿದ್ದು, ಕೂಡಲೇ ದೀಪಾಳ ಫೋನ್‌ಗೆ ಕರೆ ಮಾಡಿದ್ದಾನೆ. 

ಕರೆಯನ್ನ ಪುತ್ರ ಲೋಕೇಶ್ ಪಿಕ್ ಮಾಡಿದ್ದು, ತಾಯಿಯ ರಹಸ್ಯ ಆಟವನ್ನ ವಿವರಿಸಿದ್ದಾನೆ. ಬಾಲಕ ತನ್ನ ತಂದೆಯ ಬಳಿ ಹೇಳಿದ್ದೆಲ್ಲವನ್ನೂ ಕೇಳಿಸಿಕೊಂಡ ಸೂರಿಮುತ್ತು, ಆತನಿಗೆ ಚೆನ್ನಾಗಿ ಥಳಿಸಿದ್ದಾನೆ. 

ಪರಿಣಾಮ ಬಾಲಕ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಕೂಡಲೇ ಆತನನ್ನು ತಿರುನೆಲ್ವೆಲ್ಲಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿತ್ತಾದರೂ ಬಾಲಕ ಉಳಿಯಲಿಲ್ಲ. ಮತ್ತೊಂದೆಡೆ ಆರೋಪಿ ಸೂರಿಮುತ್ತು ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ಸದ್ಯ ದೀಪಾಳನ್ನ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಒಟ್ಟಿನಲ್ಲಿ ತಾಯಿಯೊಬ್ಬಳು ತನ್ನ ತೀಟೆಗಾಗಿ 4 ವರ್ಷದ ಪುತ್ರನನ್ನ ಕಳೆದುಕೊಂಡಿದ್ದಾಳೆ.