Asianet Suvarna News Asianet Suvarna News

ಪ್ರತ್ಯೇಕ ಘಟನೆ: ನೀರಿನಲ್ಲಿ ಮುಳುಗಿ ಒಟ್ಟು ನಾಲ್ವರು ಸಾವು

ಪ್ರತ್ಯೇಕ ಘಟನೆಯಲ್ಲಿ ಮೀನು ಹಿಡಿಯಲು ಹೋಗಿದ್ದ ಇಬ್ಬರು ಕೆರೆ ಪಾಲಾದ್ರೆ, ಇನ್ನಿಬ್ಬರು ಕಾವೇರಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಎಲ್ಲೆಲ್ಲಿ?

4 drowned Into lake River in 2 separate incidents Kodagu and Kalaburagi
Author
Bengaluru, First Published Mar 4, 2020, 6:59 PM IST

ಕಲಬುರಗಿ/ಕೊಡಗು,(ಮಾ.04): ಮೀನು ಹಿಡಿಯಲು ಹೋಗಿದ್ದ ಯುವಕರಿಬ್ಬರು ನೀರುಪಾಲಾಗಿರುವ ಘಟನೆ ಜೇವರ್ಗಿ ತಾಲೂಕಿನ ಹಾಲಗಡ್ಲಾ ಕೆರೆಯಲ್ಲಿ ಈ ದುರ್ಘಟನೆ ನಡೆದಿದೆ. 

ಬಸಣ್ಣ (24), ನಾಗಣ್ಣ (18) ಮೃತ ಯುವಕರು. ಜೇವರ್ಗಿ ಹರಣೂರ ಗ್ರಾಮದ ನಿವಾಸಿಗಳಾದ ಇವರು, ಇಂದು (ಬುಧವಾರ) ಬೆಳಗ್ಗೆ ಹಾಲಗಡ್ಲಾ ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಕೊರೊನಾಗೆ ಡೋಂಟ್ ವರಿ, ಐಪಿಎಲ್ ಪ್ರಶಸ್ತಿ ಮೊತ್ತಕ್ಕೆ ಕತ್ತರಿ; ಮಾ.04ರ ಟಾಪ್ 10 ಸುದ್ದಿ! 

ವಿಷಯ ತಿಳಿದು ಸ್ಥಳಕ್ಕೆ ಆಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು, ಗ್ರಾಮಸ್ಥರ ಸಹಾಯದಿಂದ ಯುವಕರ ಮೃತ ದೇಹ ಹೊರತೆಗೆದಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಕಾವೇರಿ‌ ನದಿಯಲ್ಲಿ ಮುಳುಗಿ ವಿದ್ಯಾರ್ಥಿಗಳಿಬ್ಬರ ದುರ್ಮರಣ
ಮತ್ತೊಂದೆಡೆ ಕೊಡಗಿನಲ್ಲಿ ಇಬ್ಬರು ವಿದ್ಯಾರ್ಥಿಗಳು ಕಾವೇರಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ದುಬಾರೆಯಲ್ಲಿ ಈ ಘಟನೆ ಸಂಭವಿಸಿದೆ.

ಶ್ರೇಯಸ್(14), ಲೆನಿನ್(14) ಮೃತ ವಿದ್ಯಾರ್ಥಿಗಳು. ಮೃತರು ಗೋಣಿಕೊಪ್ಪ ಲಯನ್ಸ್ ಶಾಲೆ ವಿದ್ಯಾರ್ಥಿಗಳಾಗಿದ್ದಾರೆ. ಶಾಳೆಯಿಂದ ಪಿಕ್ನಿಕ್‌ ಹೋಗಿದ್ದು, ದುಬಾರೆ ಆನೆ ಕ್ಯಾಂಪ್‌ ವೀಕ್ಷಿಸಿ ಮರಳುವಾಗ ದುರ್ಘಟನೆ ನಡೆದಿದೆ. ನದಿ ದಾಟುವಾಗ ಆಳವಾದ ಜಾಗಕ್ಕೆ ತೆರಳಿದ ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"

 

Follow Us:
Download App:
  • android
  • ios