Asianet Suvarna News Asianet Suvarna News

ಮಂಗಳೂರಲ್ಲಿ 38 ಮಂದಿ ಶ್ರೀಲಂಕಾ ಪ್ರಜೆಗಳ ಬಂಧನ

* ಮಾನವ ಕಳ್ಳ ಸಾಗಾಟ ಜಾಲ ಪತ್ತೆ
* ತಮಿ​ಳು​ನಾ​ಡು ಮೂಲ​ಕ ಮಂಗ​ಳೂ​ರಿ​ಗೆ ಬಂದು ಅಕ್ರ​ಮ​ವಾ​ಗಿ ನೆಲೆಸಿದ್ದ ಲಂಕಾ ಪ್ರಜೆಗಳು
* ತಮಿ​ಳು​ನಾ​ಡು ಗು​ಪ್ತ​ಚ​ರ ಇಲಾ​ಖೆ​ಯಿಂದ ಬಂದ ಮಾಹಿ​ತಿ

38 Sri Lankan Citizens Arrested in Mangaluru grg
Author
Bengaluru, First Published Jun 12, 2021, 8:08 AM IST

ಮಂಗಳೂರು(ಜೂ.12): ಉದ್ಯೋ​ಗ ಅರ​ಸಿ ಕೆನ​ಡಾ ತೆರ​ಳು​ವ ಯತ್ನ​ದ​ಲ್ಲಿ ತಮಿ​ಳು​ನಾ​ಡು ಮೂಲ​ಕ ಮಂಗ​ಳೂ​ರಿ​ಗೆ ಬಂದು ಅಕ್ರ​ಮ​ವಾ​ಗಿ ಆಶ್ರ​ಯ ಪಡೆ​ದಿ​ದ್ದ 38 ಮಂದಿ ಶ್ರೀಲಂಕಾ​ ಪ್ರಜೆ​ಗ​ಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

"

ನಗರ ಪೊಲೀಸ್‌ ಕಮಿಷನರ್‌ ಶಶಿಕುಮಾರ್‌ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾನವ ಕಳ್ಳ​ಸಾ​ಗಾ​ಟ​ದ ​ಗಂಭೀ​ರ ಪ್ರಕ​ರ​ಣ ಇದಾ​ಗಿ​​ದ್ದು, ​ವಶ​ಕ್ಕೆ ಪಡೆ​ಯ​ಲಾ​ದವರು ಉತ್ತ​ರ ಶ್ರೀಲಂಕಾ​ದ ನಿ​ವಾ​ಸಿ​ಗಳು. ಇವರು ಸೀ ಪೋರ್ಟ್‌ ​ಹಾ​ಗೂ ಮಂಗ​ಳೂ​ರು ರಾವ್‌ ಆ್ಯಂಡ್‌ ರಾವ್‌ ಸರ್ಕ​ಲ್‌ ಬಳಿ​ಯ ಸಿಟಿ ಲಾ​ಡ್ಜ್‌​ ಹಾಗೂ ಕಸ​ಬಾ ಬೆಂಗ​ರೆ​ಯ ಮನೆ​ಯೊಂದ​ರ​ಲ್ಲಿ ​ಕೂ​ಲಿ​ ಆಳೆಂದು ಹೇಳಿ​ಕೊಂಡು ನೆಲೆ​ಸಿ​ದ್ದರು. ಇವ​ರ ವಿರು​ದ್ಧ ಪಾಂಡೇ​ಶ್ವ​ರ ಠಾಣೆ​ಯ​ಲ್ಲಿ ವಿದೇ​ಶಿ ಕಾಯ್ದೆ, ಐ​ಪಿ​ಸಿ ಸೆಕ್ಷ​ನ್‌ 14ರ ವಿದೇ​ಶಿ​ಯ​ರ ಕಾಯ್ದೆ 1964 ಸೆಕ್ಷ​ನ್‌ 12 (1) (ಎ​)​ ಪಾಸ್‌​ಪೋ​ರ್ಟ್‌ ಕಾಯ್ದೆ 1967ರಂತೆ​ ಪ್ರಕ​ರ​ಣ ದಾಖ​ಲಾ​ಗಿ​ದೆ ಎಂದರು.

ಬೆಳಗಾವಿ: ಲಾಕ್‌ಡೌನ್ ವೇಳೆ ಹಣ ಸುಲಿಗೆ, ಪೊಲೀಸಪ್ಪನ ಬಂಧನ

ಶ್ರೀ​ಲಂಕಾ ಏಜೆಂಟ​ರ ಮೂಲ​ಕ ಕೆನ​ಡಾ​ದ​ಲ್ಲಿ ಉದ್ಯೋ​ಗ​ ಭ​ರ​ವ​ಸೆ​ಯೊಂದಿ​ಗೆ 6ರಿಂದ 10 ಲಕ್ಷದ ಶ್ರೀ​​ಲಂಕಾ ಕರೆ​ನ್ಸಿ​ ಪಡೆದು ಖಾಸ​ಗಿ ಬೋಟ್‌ ಮೂಲ​ಕ ಮಾ.17ರಂದು ಚೆನ್ನೈ​ಯ ತೂತು​ಕು​ಡಿ​ಗೆ ಕರೆತರ​ಲಾ​ಗಿ​ತ್ತು. ​​ಆದ​ರೆ ಅಲ್ಲಿ ಚುನಾ​ವ​ಣೆ ಹಿನ್ನೆ​ಲೆ​ಯ​ಲ್ಲಿ ಬಿಗಿ ತಪಾ​ಸ​ಣೆ ಆರಂಭ​ಗೊಂ​ಡಾ​ಗ ಬಂಧ​ನ ಭೀತಿ​ಯ​ಲ್ಲಿ ಬೆಂಗ​ಳೂ​ರಿ​ಗೆ ಬಸ್‌​ನ​​ಲ್ಲಿ ಕಳು​ಹಿ​ಸಿ ಅಲ್ಲಿಂದ ಮಂಗ​ಳೂ​ರಿ​ಗೆ ಸಾಗಿ​ಸ​ಲಾ​ಗಿ​ತ್ತು.

ಇವರು ಮಂಗ​ಳೂ​ರಿ​ನ​ಲ್ಲಿ ಒಂದೂ​ವ​ರೆ ತಿಂಗ​ಳಿ​ನಿಂದ ವಾಸ​ವಾ​ಗಿದ್ದರು. ತಮಿ​ಳು​ನಾ​ಡು ಗು​ಪ್ತ​ಚ​ರ ಇಲಾ​ಖೆ​ಯಿಂದ ಬಂದ ಮಾಹಿ​ತಿ ಮೇರೆ​ಗೆ 78 ಗಂಟೆ​ಗ​ಳ ಕಾರ್ಯಾ​ಚ​ರ​ಣೆ​ ನಡೆಸಿ ವಶಕ್ಕೆ ಪಡೆಯಲಾಗಿದೆ ಎಂದು ಕಮಿಷನರ್‌ ತಿಳಿಸಿದರು.
 

Follow Us:
Download App:
  • android
  • ios