Asianet Suvarna News Asianet Suvarna News

ಬೆಂಗಳೂರು: ಬೆಟ್ಟಿಂಗ್ ಗೀಳು, ಸಾಲ ತೀರಿಸಲಾಗದೆ ಯುವಕ ಆತ್ಮಹತ್ಯೆ

ಸಾಲಗಾರರು ಕೊಟ್ಟ ಹಣವನ್ನು ಹಿಂತಿರುಗಿಸುವಂತೆ ಕೇಳುತ್ತಿದ್ದರು. ಇದರಿಂದಾಗಿ ಸಾಲ ತೀರಿಸಲು ಹಣವನ್ನು ಹೊಂದಿಸಲಾಗದೆ ಚಿಂತಿಗೀಡಾಗಿದ್ದನು. ತಾಯಿ ಕೆಲಸಕ್ಕೆಂದು ಹೊರ ಹೋದಾಗ ಕೀಟನಾಶಕ ಔಷಧ ಕುಡಿದು ಆತ್ಮಹತ್ಯೆಗೆ ಶರಣಾದ ರಾಜು

32 Year Old Young Man Committed Suicide in Bengaluru grg
Author
First Published Oct 4, 2023, 4:30 AM IST

ದಾಬಸ್‌ಪೇಟೆ(ಅ.04):  ಆನ್‌ಲೈನ್ ಬೆಟ್ಟಿಂಗ್‌ ಚಟಕ್ಕೆ ಬಿದ್ದು ಮಾಡಿದ ಸಾಲ ತೀರಿಸಲಾಗದೆ ಯುವಕನೊಬ್ಬ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸೋಂಪುರ ಹೋಬಳಿಯ ಅರಳಿಮರದಪಾಳ್ಯ ಗ್ರಾಮದ ಯುವಕ ರಾಜು (32) ಮೃತ ದುರ್ದೈವಿ. 

ಈತ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಈತ ಇತ್ತೀಚೆಗೆ ಆನ್‌ಲೈನ್‌ ಬೆಟ್ಟಿಂಗ್‌ ಚಟಕ್ಕೆ ಬಿದ್ದು ಸಿಕ್ಕ ಸಿಕ್ಕವರ ಬಳಿ ಸಾಲ ಮಾಡಿದ್ದನು ಎನ್ನಲಾಗಿದೆ. 

ಬೀದರ್‌: ಖಾಸಗಿ ಫೋಟೋ ಲೀಕ್‌, ಯುವಕನ ಕಿರುಕುಳ ತಾಳದೆ ಬಾಲಕಿ ಆತ್ಮಹತ್ಯೆ

ಸಾಲಗಾರರು ಕೊಟ್ಟ ಹಣವನ್ನು ಹಿಂತಿರುಗಿಸುವಂತೆ ಕೇಳುತ್ತಿದ್ದರು. ಇದರಿಂದಾಗಿ ಸಾಲ ತೀರಿಸಲು ಹಣವನ್ನು ಹೊಂದಿಸಲಾಗದೆ ಚಿಂತಿಗೀಡಾಗಿದ್ದನು. ತಾಯಿ ಕೆಲಸಕ್ಕೆಂದು ಹೊರ ಹೋದಾಗ ಕೀಟನಾಶಕ ಔಷಧ ತಂದು ಕುಡಿದಿದ್ದಾನೆ. ಬಳಿಕ ಅಕ್ಕ-ಪಕ್ಕದ ಜನರು ಗಮನಿಸಿ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ.

Follow Us:
Download App:
  • android
  • ios