ಬೆಂಗಳೂರು: ಮೂವರು ಡ್ರಗ್ಸ್ ಪೆಡ್ಲರ್ ಬಂಧನ; ₹90 ಲಕ್ಷದ ಡ್ರಗ್ಸ್‌ ಜಪ್ತಿ!

ನಗರದಲ್ಲಿ ಡ್ರಗ್ಸ್ ದಂಧೆಕೋರರ ಮೇಲೆ ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸಿ ಇಬ್ಬರು ವಿದೇಶಿ ಪ್ರಜೆಗಳು ಸೇರಿದಂತೆ ಮೂವರನ್ನು ಯಲಹಂಕ ಉಪನಗರ ಹಾಗೂ ಸಂಪಂಗಿ ರಾಮನಗರ ಪೊಲೀಸರು ಸೆರೆ ಹಿಡಿದಿದ್ದಾರೆ.

3 drug peddlers arrested Drugs worth 90 lakh seized at bengaluru rav

ಬೆಂಗಳೂರು (ಮಾ.2): ನಗರದಲ್ಲಿ ಡ್ರಗ್ಸ್ ದಂಧೆಕೋರರ ಮೇಲೆ ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸಿ ಇಬ್ಬರು ವಿದೇಶಿ ಪ್ರಜೆಗಳು ಸೇರಿದಂತೆ ಮೂವರನ್ನು ಯಲಹಂಕ ಉಪನಗರ ಹಾಗೂ ಸಂಪಂಗಿ ರಾಮನಗರ ಪೊಲೀಸರು ಸೆರೆ ಹಿಡಿದಿದ್ದಾರೆ.

ನೈಜೀರಿಯಾ ದೇಶದ ಜೋಸೆಫ್‌, ಬ್ಯಾರಿ ಹಾಗೂ ಲಗ್ಗೆರೆಯ ಕಿಶನ್‌ ರಾಮ್ ಬಂಧಿತರಾಗಿದ್ದು, ಆರೋಪಿಗಳಿಂದ ₹90 ಲಕ್ಷ ಮೌಲ್ಯದ ಡ್ರಗ್ಸನ್ನು ಜಪ್ತಿ ಮಾಡಲಾಗಿದೆ. ಮಿಷನ್ ರಸ್ತೆ ಹಾಗೂ ವೀರಸಾಗರದ ಜಾರಕಬಂಡೆ ಕಾವಲು ಮುಖ್ಯ ರಸ್ತೆಯ ಡ್ರಗ್ಸ್ ಮಾರಾಟಕ್ಕೆ ಆರೋಪಿಗಳು ಯತ್ನಿಸಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

 

ಆರ್ಯನ್​ ಖಾನ್​ ಡ್ರಗ್ಸ್​ ಕೇಸ್​: ಅಪ್ಪ ಶಾರುಖ್​ ಕುರಿತು ತನಿಖಾಧಿಕಾರಿ ವಾಂಖೆಡೆಯಿಂದ ಭಾರಿ ಹೇಳಿಕೆ!

ಆರು ತಿಂಗಳ ಹಿಂದೆ ಬ್ಯುಸಿನೆಸ್ ವೀಸಾದಡಿ ಭಾರತಕ್ಕೆ ಬಂದಿದ್ದ ನೈಜೀರಿಯಾ ಜೋಸೆಫ್ ಹಾಗೂ ಬ್ಯಾರಿ, ಬಳಿಕ ಯಲಹಂಕ ಉಪನಗರ ಸಮೀಪದ ಎಂ.ಎಸ್.ಪಾಳ್ಯದಲ್ಲಿ ನೆಲೆಸಿದ್ದರು. ವಿದೇಶ ಡ್ರಗ್ಸ್ ಮಾಫಿಯಾ ಮೂಲಕ ಕಡಿಮೆ ಬೆಲೆಗೆ ಡ್ರಗ್ಸ್ ಖರೀದಿ ನಗರದಲ್ಲಿ ದುಬಾರಿ ಬೆಲೆಗೆ ಅವರು ಮಾರಾಟ ಮಾಡುತ್ತಿದ್ದರು. ಈ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು, ವೀರಸಾಗರದ ಜಾರಕಬಂಡೆ ಕಾವಲು ಮುಖ್ಯರಸ್ತೆ ಬಳಿ ಗ್ರಾಹಕರಿಗೆ ಡ್ರಗ್ಸ್ ಮಾರಾಟ ಮಾಡುವ ವೇಳೆ ದಾಳಿ ನಡೆಸಿದ್ದಾರೆ. 

ಈ ವೇಳೆ ಪೆಡ್ಲರ್‌ಗಳಿಂದ 1.025 ಕೇಜಿ ಕೊಕೇನ್ ಹಾಗೂ 50 ಗ್ರಾಂ ತೂಕದ ಎಂಡಿಎಂಎ ಕ್ರಿಸ್ಟೇಲ್‌ ಸೇರಿ ₹67.5 ಲಕ್ಷ ಮೌಲ್ಯ ಡ್ರಗ್ಸ್ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಎಲೆಕ್ಟ್ರಿಕಲ್‌ ವ್ಯಾಪಾರಿ. ಮಿಷನ್‌ ರಸ್ತೆಯಲ್ಲಿ ಎಸ್‌ಎಸ್‌ ನಗರ ಠಾಣೆ ಪೊಲೀಸರ ಬಲೆಗೆ ಮತ್ತೊಂದು ಪೆಡ್ಲರ್‌ ಬಿದ್ದಿದ್ದಾನೆ. ಲಗ್ಗೆರೆ ನಿವಾಸಿ ಕಿಶನ್ ರಾಮ್‌ ಬಂಧಿತನಾಗಿದ್ದು, ಆರೋಪಿಯಿಂದ ₹3.5 ಲಕ್ಷ ಮೌಲ್ಯದ ಆಫೀಮು ಜಪ್ತಿ ಮಾಡಲಾಗಿದೆ. ರಾಜಸ್ಥಾನ ಮೂಲದ ಕಿಶನ್‌, ಈ ಮೊದಲು ನಗರದಲ್ಲಿ ಎಲೆಕ್ಟ್ರಿಕಲ್‌ ಅಂಗಡಿ ಇಟ್ಟುಕೊಂಡಿದ್ದ. ಆದರೆ ಸುಲಭವಾಗಿ ಹಣ ಸಂಪಾದನೆಗೆ ಆತ ಡ್ರಗ್ಸ್ ದಂಧೆಗಳಿಗಿದ್ದ.

ಅರಬ್ಬಿ ಸಮುದ್ರದಲ್ಲಿ ಭರ್ಜರಿ ಕಾರ್ಯಾಚರಣೆ : ಏಕಕಾಲಕ್ಕೆ 2000 ಕೋಟಿ ಮೌಲ್ಯದ 3300 ಕೇಜಿ ಡ್ರಗ್ಸ್‌ ವಶ

ಇತ್ತೀಚಿಗೆ ಮಿಷನ್ ರಸ್ತೆಯ ಕೆನರಾ ಬ್ಯಾಂಕ್ ಬಳಿ ಗಸ್ತು ಮಾಡುತ್ತಿದ್ದಾಗ ಶಂಕೆ ಮೇರೆಗೆ ಕಿಶನ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಡ್ರಗ್ಸ್ ಮಾರಾಟ ಕೃತ್ಯ ಬೆಳಕಿಗೆ ಬಂದಿದೆ. ತಾನು ರಾಜಸ್ಥಾನದಿಂದ ಆಫೀಮು ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದಾಗಿ ವಿಚಾರಣೆ ವೇಳೆ ಆರೋಪಿ ಬಾಯ್ಬಿಟ್ಟಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Latest Videos
Follow Us:
Download App:
  • android
  • ios