ಬೆಂಗಳೂರು (ನ.24): ಕರ್ನಾಟಕ ರಾಜ್ಯ ಸಶಸ್ತ್ರ ಮೀಸಲು ಪಡೆ (ಕೆಎಸ್‌ಆರ್‌ಪಿ) ನೇಮಕಾತಿ ಪರೀಕ್ಷೆಯಲ್ಲಿ ಬ್ಲೂಟುತ್‌ ಬಳಸಿ ನಕಲು ಮಾಡುತ್ತಿದ್ದ ಅಭ್ಯರ್ಥಿಗಳನ್ನು ಬೆಂಗಳೂರು ಮತ್ತು ಬಾಗಲಕೋಟೆಯಲ್ಲಿ ಬಂಧಿಸಿದ್ದರೆ, ಅಭ್ಯರ್ಥಿಗಳ ಬದಲಿಗೆ ಪರೀಕ್ಷೆ ಬರೆಯುತ್ತಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರಿನಲ್ಲಿ ಮತ್ತು ಒಬ್ಬ ಆರೋಪಿಯನ್ನು ಚಿತ್ರದುರ್ಗದಲ್ಲಿ ಬಂಧಿಸಲಾಗಿದೆ.

 ಬ್ಲೂಟುತ್‌ ಬಳಸಿದ್ದ ಜಮಖಂಡಿಯ ಹನುಮಂತ ಗಂಗಪ್ಪ ಬಿಲ್ಲೂರ್‌ ಬೆಂಗಳೂರಿನ ಇಂದಿರಾನಗರದ ಕೆಎಸ್‌ಇಇ ಶಾಲೆಯ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದ. ಅದೇ ರೀತಿ ಬಾಗಲಕೋಟೆ ನಗರದ ವಿದ್ಯಾಗಿರಿಯ ಪಬ್ಲಿಕ್‌ ಶಾಲೆಯಲ್ಲಿ ಜಮಖಂಡಿ ತಾಲೂಕಿನ ಮೈಗೂರು ಗ್ರಾಮದ ಶ್ರೀಮಂತ ಸದಲಗಿ ಕೂಡ ಬ್ಲೂಟುತ್‌ ಬಳಸಿ ಪರೀಕ್ಷೆ ಬರೆಯುತ್ತಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಉಪನ್ಯಾಸಕರ ಹುದ್ದೆ ನೇಮಕಾತಿ: ಆದೇಶ ಸಿಕ್ಕರೂ ಸೇವಾ ಭದ್ರತೆ ಇಲ್ಲ..! . 

ಅಭ್ಯರ್ಥಿಗಳ ಬದಲಿಗೆ ಪರೀಕ್ಷೆ ಬರೆಯುತ್ತಿದ್ದ ಆರೋಪಿಗಳಾದ ಗೋಕಾಕ್‌ನ ಗುರುನಾಥ್‌ (20) ಮತ್ತು ಮಹಾಂತೇಶ್‌ (24) ಅವರನ್ನು ಬೆಂಗಳೂರಿನಲ್ಲಿ, ಗೋಕಾಕ್‌ನ ಮಲ್ಲಪ್ಪ (26) ಅವರನ್ನು ಚಿತ್ರದುರ್ಗದಲ್ಲಿ ಬಂಧಿಸಲಾಗಿದೆ.