Asianet Suvarna News Asianet Suvarna News

ಬೀದರ್: ಗಾಳಿಯಲ್ಲಿ ಗುಂಡು ಹಾರಿಸಿ ಕಾಂಗ್ರೆಸ್ ಮುಖಂಡನಿಂದ 3.5 ಕೋಟಿ ದರೋಡೆ

ಉಮಾಪತಿ ಎಂಬುವರಿಂದ 3.5 ಕೋಟಿ ರೂಪಾಯಿ ಹಣವನ್ನ ಕಾಂಗ್ರೆಸ್ ಮುಖಂಡ ಗುಂಡು ರೆಡ್ಡಿ ಸುಲಿಗೆ ಮಾಡಿದ್ದಾರೆ. ಉಮಾಪತಿ ಆಂಧ್ರಪ್ರದೇಶದ ತಿರುಪತಿಯಿಂದ ಪಂಡರಾಪುರಕ್ಕೆ ಹೊರಟಿದ್ದರು. ಹಾಲು ಖರೀದಿಸಿದ ರೈತನಿಗೆ ಹಣ ನೀಡಲು ಉಮಾಪತಿ ಹೊರಟ್ಟಿದ್ದರು. ದಾರಿ ಮಧ್ಯೆ 9 ಗಂಟೆ ಸುಮಾರಿಗೆ ಪನ್ನೀರಿ ಪ್ಯಾಕ್ಟರಿ ಹತ್ತಿರ ರಿಫ್ರೆಶ್ ಆಗಲು ಉಮಾಪತಿ ನಿಂತಿದ್ದರು. ಈ ವೇಳೆ ಬೈಕ್ ಮೇಲೆ ಆಗಮಿಸಿದ ಗುಂಡು ರೆಡ್ಡಿ ಸೇರಿ ನಾಲ್ವರ ತಂಡ ದರೋಡೆ ಮಾಡಿದೆ ಎಂದು ಆರೋಪಿಸಲಾಗಿದೆ. 

3.5 Crore rs Robbery by Congress Leader in Bidar grg
Author
First Published Nov 30, 2023, 3:00 AM IST

ಬೀದರ್(ನ.30): ಕಾಂಗ್ರೆಸ್ ಮುಖಂಡನೊಬ್ಬ ಗಾಳಿಯಲ್ಲಿ ಗುಂಡು ಹಾರಿಸಿ ದರೋಡೆ ಮಾಡಿದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 65ರ ಹಣಮಂತವಾಡಿ ಬಳಿ ನಿನ್ನೆ(ಬುಧವಾರ) ನಡೆದಿದೆ. 

ಉಮಾಪತಿ ಎಂಬುವರಿಂದ 3.5 ಕೋಟಿ ರೂಪಾಯಿ ಹಣವನ್ನ ಕಾಂಗ್ರೆಸ್ ಮುಖಂಡ ಗುಂಡು ರೆಡ್ಡಿ ಸುಲಿಗೆ ಮಾಡಿದ್ದಾರೆ. ಉಮಾಪತಿ ಆಂಧ್ರಪ್ರದೇಶದ ತಿರುಪತಿಯಿಂದ ಪಂಡರಾಪುರಕ್ಕೆ ಹೊರಟಿದ್ದರು. ಹಾಲು ಖರೀದಿಸಿದ ರೈತನಿಗೆ ಹಣ ನೀಡಲು ಉಮಾಪತಿ ಹೊರಟ್ಟಿದ್ದರು. ದಾರಿ ಮಧ್ಯೆ 9 ಗಂಟೆ ಸುಮಾರಿಗೆ ಪನ್ನೀರಿ ಪ್ಯಾಕ್ಟರಿ ಹತ್ತಿರ ರಿಫ್ರೆಶ್ ಆಗಲು ಉಮಾಪತಿ ನಿಂತಿದ್ದರು. ಈ ವೇಳೆ ಬೈಕ್ ಮೇಲೆ ಆಗಮಿಸಿದ ಗುಂಡು ರೆಡ್ಡಿ ಸೇರಿ ನಾಲ್ವರ ತಂಡ ದರೋಡೆ ಮಾಡಿದೆ ಎಂದು ಆರೋಪಿಸಲಾಗಿದೆ. 

ಕದಿಯಲು ಬಂದು ಗಡದ್ ನಿದ್ದೆಗೆ ಜಾರಿದ ಕಳ್ಳ, 2ನೇ ಎಡವಟ್ಟು ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದ!

ಗುಂಡು ರೆಡ್ಡಿ, ವಿಜಯ ಕುಮಾರ್ ರೆಡ್ಡಿ, ಸಂಜಯರೆಡ್ಡಿ ಸೇರಿ ನಾಲ್ವರು ದರೋಡೆ ಮಾಡಿದ್ದಾರೆ.  ಗುಂಡು ರೆಡ್ಡಿಯಿಂದ ಗಾಳಿಯಲ್ಲಿ ಗುಂಡು ಹಾರಿಸಿ, ಹಣೆಯ ಮೇಲೆ ಪಿಸ್ತೂಲ್ ಇಟ್ಟಿ ಬೆದರಿಕೆ ಹಾಕಿ ಹಣ ಸುಲಿಗೆ ಮಾಡಿದ್ದಾರೆ. ಪಿಸ್ತೂಲ್ ನಿಂದ ಬೆದರಿಸಿ 3.5 ಕೋಟಿ ಹಣ ದೋಚಿಕೊಂಡಿದ್ದಾರೆ. 

ಘಟನೆ ನಡೆದ 24 ಗಂಟೆಯಲ್ಲೇ ಪ್ರಕರಣವನ್ನ ಪೊಲೀಸರು ಭೇದಿಸಿ ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ. ಗುಂಡು ರೆಡ್ಡಿ, ವಿಜಯ ಕುಮಾರ್ ರೆಡ್ಡಿ, ಸಂಜಯರೆಡ್ಡಿ ವಶಕ್ಕೆ ಪಡೆದು ಮತ್ತೋರ್ವನಿಗಾಗಿ ಪೊಲೀಸರು ಶೋಧಕಾರ್ಯ ಆರಂಭಿಸಿದ್ದಾರೆ. 

ಆರೋಪಿಗಳಿಂದ 2. 62 ಕೋಟಿ ಹಣವನ್ನ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಈ ಕುರಿತು ಮಂಠಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅರೋಪಿಗಳ ವಿರುದ್ಧ ಸುಲಿಗೆ, ಕೊಲೆ ಯತ್ನ ಮತ್ತು ಆರ್ಮ್ಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.  

Follow Us:
Download App:
  • android
  • ios