ಚೇತನ್ ಇನ್‌ಸ್ಟಾಗ್ರಾಂನಲ್ಲಿ ಯುವತಿಯೊಬ್ಬಳಿಗೆ ಲೈಕ್ ಮಾಡಿರುವುದನ್ನು ಪ್ರಶ್ನಿಸಲು ನಾನು ಬಂದಿದ್ದೆ. ಈ ವಿಚಾರದಲ್ಲಿ ಗಲಾಟೆಯಾಗಿದೆ. ಇದರಿಂದ ಬೇಸರಗೊಂಡು ನೇಣು ಬಿಗಿದುಕೊಂಡಿದ್ದಾರೆ ಎಂದ ಚೈತನ್ಯಾ ತಿಳಿಸಿದ್ದಾರೆ. ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು(ಜ.25): ಇನ್‌ಸ್ಟಾದಲ್ಲಿ ಬೇರೆ ಯುವತಿಯ ಫೋಟೋಗೆ ಲೈಕ್ ಒತ್ತಿದ್ದಕ್ಕೆ ನಿಶ್ಚಿತಾರ್ಥ 'ಗೊಂಡ ಯುವತಿ ಕಿರಿಕಿರಿ ಮಾಡಿದಳು ಎಂದು ಮನನೊಂದು ದೈವಪಾತ್ರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಎಂಬಲ್ಲಿ ನಡೆದಿದೆ. ಚೇತನ್ (25) ಆತ್ಮಹತ್ಯೆ ಮಾಡಿಕೊಂಡವರು. 

ಮಂಗಳೂರು ಮೂಲದ ಚೈತನ್ಯಾ ಎಂಬ ಯುವತಿ ಚೇತನ್ ಗೆ ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದಾಳೆ. ಬಳಿಕ ಇಬ್ಬರೂ ಪ್ರೀತಿಸಿ 8 ತಿಂಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಜ.21ರಂದು ಬೆಳಗ್ಗೆ ಚೇತನ್ ಮನೆಯಲ್ಲಿದ್ದು, ತಾಯಿ ಪುಷ್ಪಾ ತವರು ಮನೆಗೆ ತೆರಳಿದ್ದರು. ಈ ವೇಳೆ ಚೈತನ್ಯಾ ಪುಷ್ಪಾರಿಗೆ ಕರೆ ಮಾಡಿ, ನಾನು ನಿಮ್ಮ ಮನೆಗೆ ಬಂದಿದ್ದೇನೆ, ಚೇತನ್ ಮಲಗಿದ್ದು ಎದ್ದೇಳುತ್ತಿಲ್ಲ ಎಂದಿದ್ದಾರೆ. ತಾಯಿ ಮನೆಗೆ ಬಂದು ಚೇತನ್‌ನನ್ನು ಎಷ್ಟೇ ಎಬ್ಬಿಸಿದರು ಏಳಲಿಲ್ಲ. ಆಗ ಮೇಲ್ಬಾವಣಿಯಲ್ಲಿ ಲುಂಗಿಯಿಂದ ಮಾಡಿದ ಕುಣಿಕೆ ಕಂಡಿದೆ. 

ಅನೈತಿಕ ಚಟುವಟಿಕೆ ಆರೋಪ: ಮಂಗ್ಳೂರಿನ ಮಸಾಜ್‌ ಪಾರ್ಲರ್‌ ಮೇಲೆ ರಾಮಸೇನೆ ದಾಳಿ

ಈ ಬಗ್ಗೆ ಚೈತನ್ಯಾಳಲ್ಲಿ ಪ್ರಶ್ನಿಸಿದಾಗ, ಚೇತನ್ ಇನ್‌ಸ್ಟಾಗ್ರಾಂನಲ್ಲಿ ಯುವತಿಯೊಬ್ಬಳಿಗೆ ಲೈಕ್ ಮಾಡಿರುವುದನ್ನು ಪ್ರಶ್ನಿಸಲು ನಾನು ಬಂದಿದ್ದೆ. ಈ ವಿಚಾರದಲ್ಲಿ ಗಲಾಟೆಯಾಗಿದೆ. ಇದರಿಂದ ಬೇಸರಗೊಂಡು ನೇಣು ಬಿಗಿದುಕೊಂಡಿದ್ದಾರೆ ಎಂದಿದ್ದಾಳೆ. ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.