ಸಂಭಾಲ್ (ಡಿ.  01) ಮದುವೆ ಮನೆಯಲ್ಲಿ ಅವಘಡವೊಂದು ನಡೆದು ಹೋಗಿದೆ.  ಡೆಹ್ಲಿ ಗ್ರಾಮದಲ್ಲಿ ನಡೆದ ವಿವಾಹದ ಸಂಭ್ರಮಾಚರಣೆ ವೇಳೆ ಸಿಡಿಸಿದ ಗುಂಡಿಗೆ ಯುವಕನೊಬ್ಬ ಮೃತಪಟ್ಟಿದ್ದಾನೆ.

 24 ವರ್ಷದ ಯುವಕ ಗುಂಡಿಗೆ ಬಲಿಯಾಗಿದ್ದು ವರನ ತಂದೆ ಕೂಡ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಓರಲ್ ಸೆಕ್ಸ್ ಮಾಡು; ಬಾಲಕನಿಗೆ ಕಿರುಕುಳ ಕೊಟ್ಟ ಮಂಗಳಮುಖಿಯರು ಅರೆಸ್ಟ್!

ನವೆಂಬರ್ 29 ರಂದು ಘಟನೆ ನಡೆದಿದೆ.  ವಿವಾಹ  ಸಂಭ್ರಮಾಚರಣೆಯಲ್ಲಿ ಸಿಡಿಸಿದ  ಗುಂಡಿಗೆ  ಸಂತೋಷ್ ಎಂಬಾತ ಬಲಿಯಾಗಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿ ಎಫ್ ಐಆರ್ ದಾಖಲಿಸಿಕೊಳ್ಳಲಾಗಿದ್ದು  ಹೇಗೆ ನಡೆಯಿತು? ನಿಜವಾದ ಆರೋಪಿಗಳು ಯಾರು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕರ್ನಾಟಕದ ಕೆಲವು ಜಿಲ್ಲೆಗಳ್ಲಲಿಯೂ ಈ ರೀತಿ ಸಂಭ್ರಮಕ್ಕೆ ಗುಂಡು  ಹಾರಿಸುವ ಸಂಪ್ರದಾಯ ಇದೆ. ರಾಜಸ್ಥಾನ, ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುತ್ತವೆ.