ಮೊಬೈಲ್ ಅಲ್ಲಿ ಗೇಮ್ ಆಡ್ಬೇಡ ಅಂದ್ಲು ತಾಯಿ, ನನಗೆ ಈ ಜಗತ್ತೇ ಬೇಡ ಅಂತಾ ಸೂಸೈಡ್ ಮಾಡ್ಕೊಂಡ ಮಗ!
ಮುಂಬೈನಲ್ಲಿ 16 ವರ್ಷದ ಬಾಲಕನಿಗೆ ಮೊಬೈಲ್ ನಲ್ಲಿ ಗೇಮ್ ಆಡದಂತೆ ತಾಯಿ ತಡೆದ ಕಾರಣಕ್ಕಾಗಿ, ಬಾಲಕ ಗುರುವಾರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮುಂಬೈ (ಜೂನ್ 9): 16 ವರ್ಷದ ಬಾಲಕನೊಬ್ಬ ತನ್ನ ತಾಯಿ ಮೊಬೈಲ್ ಗೇಮ್ (Mobile Game) ಆಡಲು ಬಿಡಲಿಲ್ಲ ಎಂಬ ಕಾರಣಕ್ಕೆ ಗುರುವಾರ ಆತ್ಮಹತ್ಯೆ (suicide ) ಮಾಡಿಕೊಂಡಿದ್ದಾನೆ. ತನ್ನ ತಾಯಿಗೆ ಬರೆದಿರುವ ಆತ್ಮಹತ್ಯೆ ಪತ್ರದಲ್ಲಿ (suicide Note) ಬಾಲಕ ಈ ವಿಚಾರ ತಿಳಿಸಿದ್ದು, ರೈಲಿಗೆ ತಲೆಕೊಟ್ಟು ಸಾವಿಗೆ ಶರಣಾಗಿದ್ದಾನೆ ಎಂದು ಪೊಲೀಸರು (Police) ತಿಳಿಸಿದ್ದಾರೆ.
ದಿಂಡೋಶಿ ಪೊಲೀಸರ (Dindoshi Police) ಪ್ರಕಾರ, ಬುಧವಾರ ಸಂಜೆ ಹುಡುಗ ತಾಯಿಯ ಮೊಬೈಲ್ ಫೋನ್ ತೆಗೆದುಕೊಂಡು ಅದರಲ್ಲಿ ಗೇಮ್ ಆಡುತ್ತಿದ್ದ. ಇದನ್ನು ಗಮನಿಸಿದ ತಾಯಿ ಮೊಬೈಲ್ ಅನ್ನು ಕಸಿದುಕೊಂಡು ಓದಿನತ್ತ ಗಮನ ನೀಡುವಂತೆ ಹೇಳಿದ್ದಾಳೆ. ಇದರಿಂದ ಬೇಸತ್ತ ಬಾಲಕ ಸೂಸೈಡ್ ನೋಟ್ ಬರೆದಿಟ್ಟು ಮನೆ ಬಿಟ್ಟು ಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆತನ ತಾಯಿ ಮನೆಗೆ ಬಂದು ಪತ್ರವನ್ನು ಓದಿದಾಗ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮತ್ತು ತಾನು ಹಿಂತಿರುಗಿ ಬರುವುದಿಲ್ಲ ಎಂದು ಬರೆದಿತ್ತು. ನಂತರ ಕುಟುಂಬಸ್ಥರು ದಿಂಡೋಶಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಬಾಲಕನಿಗಾಗಿ ಹುಡುಕಾಟ ಆರಂಭಿಸಿದ್ದರು.
ಮಲಾಡ್ ಮತ್ತು ಖಾಂಡಿವಿಲಿ ರೈಲು ನಿಲ್ದಾಣದ ನಡುವೆ ಯಾರೋ ಒಬ್ಬ ಹುಡುಗ ರೈಲಿಗೆ ತಲೆಕೊಟ್ಟಿದ್ದಾನೆ ಎಂದು ಮಾಹಿತಿ ಪಡೆದಿದ್ದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದಾಗ, ಆತ್ಮಹತ್ಯೆ ಪತ್ರೆ ಬರೆದಿಟ್ಟು ಹೋಗಿದ್ದ ಹುಡುಗ ನಿಜವಾಗಿಯೂ ರೈಲಿನ ಮುಂದೆ ಜಿಗಿದು ಪ್ರಾಣ ಬಿಟ್ಟಿದ್ದ ಎನ್ನುವುದು ತಿಳಿದು ಬಂದಿದೆ. ಬೊರಿವಲಿ ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಆರಂಭಿಸಿದ್ದಾರೆ.
ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಇದೇ ರೀತಿಯ ಪ್ರಕರಣ ವರದಿಯಾಗಿದೆ. 16 ವರ್ಷದ ಹುಡುಗ ಪಬ್ ಜಿ ಆಡದಂತೆ ಮಗನನ್ನು ತಡೆದ ಕಾರಣಕ್ಕಾಗು ತಾಯಿಯನ್ನೇ ಕೊಂದಿರುವ ಘಟನೆ ನಡೆದಿದೆ. ಈ ಕೋಪದಲ್ಲಿ, ಅಪ್ರಾಪ್ತ ವಯಸ್ಕನು ಪರವಾನಗಿ ಪಡೆದ ಪಿಸ್ತೂಲ್‌ನಿಂದ ತನ್ನ ತಾಯಿಗೆ ಗುಂಡು ಹಾರಿಸಿ ಸಾಯಿಸಿದ್ದ. ತಂದೆ ಸೇನಾ ಯೋಧ ಮತ್ತು ಪಶ್ಚಿಮ ಬಂಗಾಳದಲ್ಲಿ ನೇಮಕಗೊಂಡಿದ್ದಾರೆ. ಮೊಬೈಲ್‌ನಲ್ಲಿ ಆನ್‌ಲೈನ್ ಗೇಮ್ಸ್ ಆಡುವುದನ್ನು ತಾಯಿ ತಡೆಯುತ್ತಿದ್ದರು.
ಮಾನಸಿಕ ಸಮಸ್ಯೆ, ವಕ್ರ ಕುತ್ತಿಗೆ, ಆತ್ಮಹತ್ಯೆ ಯತ್ನ, ಈಗ ಭಾರತದ ಕಿರಿಯ ಸಿಇಒ!
ಇತ್ತೀಚೆಗೆ ಚೆನ್ನೈನಲ್ಲಿ 29 ವರ್ಷದ ಮಹಿಳೆಯೊಬ್ಬರು ತನ್ನ ಸಹೋದರಿಯರಿಂದ ಸಾಲ ಪಡೆದ ₹3 ಲಕ್ಷ ಮತ್ತು ₹ 7.5 ಲಕ್ಷ ಮೌಲ್ಯದ 20 ಪವನ್ ಚಿನ್ನಾಭರಣಗಳನ್ನು ಆನ್‌ಲೈನ್ ರಮ್ಮಿ ಗೇಮ್‌ನಲ್ಲಿ ಕಳೆದುಕೊಂಡ ನಂತರ ಭಾನುವಾರ ಸಂಜೆ ಮನಾಲಿ ಹೊಸ ಪಟ್ಟಣದ ತನ್ನ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಬಿ ಭವಾನಿ, ಬಿಎಸ್ಸಿ ಗಣಿತ ವಿಭಾಗದ ಪದವಿಧರೆ ಕಂದಂಚವಾಡಿಯ ಖಾಸಗಿ ಆರೋಗ್ಯ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಆಕೆಯ ಪತಿ ಭಕ್ಕಿಯರಾಜ್ (32) ತೊರೈಪಾಕ್ಕಂನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ. ದಂಪತಿಗೆ ಆರು ವರ್ಷಗಳ ಹಿಂದೆ ಮದುವೆಯಾಗಿತ್ತು ಮತ್ತು 3 ಮತ್ತು 1 ವರ್ಷದ ಮಕ್ಕಳಿದ್ದಾರೆ.
ಮಧ್ಯಪ್ರದೇಶ: ಅಶ್ಲೀಲ ವೀಡಿಯೊ ಸೋರಿಕೆ ಬೆದರಿಕೆ: ಇಬ್ಬರು ಅಪ್ರಾಪ್ತ ಸಹೋದರಿಯರು ಆತ್ಮಹತ್ಯೆ
ಲಾಕ್‌ಡೌನ್ ಸಮಯದಲ್ಲಿ ಭವಾನಿ ಆನ್‌ಲೈನ್‌ನಲ್ಲಿ ಜೂಜಾಡಲು ಪ್ರಾರಂಭಿಸಿದಳು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಮೊದಲು ಸಣ್ಣ ಮೊತ್ತವನ್ನು ಹೂಡಿಕೆ ಮಾಡಲು ಪ್ರಾರಂಭಿಸಿ ನಂತರ ಲಾಭ ಪಡೆದಾಗ ಹೆಚ್ಚೆಚ್ಚು ಹಣ ಅವಳು ಹೆಚ್ಚು ಹೂಡಿಕೆ ಮಾಡಿದ್ದಾಳೆ. ಆಕೆ ಹಣ ಕಳೆದುಕೊಳ್ಳಲು ಆರಂಭಿಸಿದಾಗ ಪತಿ ಭಕ್ಕಿಯರಾಜ್ ಮತ್ತು ಆಕೆಯ ಪೋಷಕರು ಆಟ ಆಡದಂತೆ ಎಚ್ಚರಿಕೆ ನೀಡಿದ್ದಾರೆ. ಆದರೆ, ಭವಾನಿ ಆಟ ಮುಂದುವರಿಸಿದ್ದು, ಮುಂದೊಂದು ದಿನ ದೊಡ್ಡ ಮೊತ್ತ ಗಳಿಸುವ ಭರವಸೆಯಲ್ಲಿ ಹಣ ಕಳೆದುಕೊಳ್ಳುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.