ನವದೆಹಲಿ(ಏ. 18)  ಮಕ್ಕಳ ಮನಸ್ಸು ಎಷ್ಟು ಸೂಕ್ಷ್ಮವಾಗಿರುತ್ತದೆ ಎನ್ನುವುದಕ್ಕೆ ಈ ಘಟನೆಯೇ ಉದಾಹರಣೆ. ಹುಡುಗಿ ದುರ್ನಡತೆ ತೋರಿದ್ದಾಳೆ ಎಂಬ ಕಾರಣಕ್ಕೆ ಆಕೆಯ ಪೋಷಕರನ್ನು ಶಾಲೆಗೆ ಕರೆಸಿದ ಪ್ರಾಂಶುಪಾಲರು ಬುದ್ಧಿಮಾತು ಹೇಳಿದ್ದರು.  ಹೀಗೆ ಮುಂದುವರಿದರೆ ಟಿಸಿ ಕೊಟ್ಟುಬಿಡುತ್ತೇನೆ ಎಂದು ಹೇಳಿದ್ದರು. ಇದರಿಂದ ಬೇಸತ್ತ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಖಾಸಗಿ ಶಾಲೆಯಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಇಂಥ ನಿರ್ಧಾರ ತೆಗೆದುಕೊಂಡಿದ್ದಾಳೆ. ಉದ್ದವಾದ ಉಗುರು ಬಿಟ್ಟು, ದೊಡ್ಡ ಕಿವಿಯೋಲೆ ಹಾಕಿಕೊಂಡಿದ್ದು, ಮೊಬೈಲ್ ಪೋನ್ ಬಳಕೆ ಮಾಡಿದ್ದಕ್ಕೆ ಪ್ರಾಂಶುಪಾಲರು ಬುದ್ಧಿ ಹೇಳುವ ಕೆಲಸ  ಮಾಡಿದ್ದರು.  ಆಕೆಗೆ ಒಂದು ಏಟು ಹಾಕಿದ್ದರು.

ಹುಬ್ಬಳ್ಳಿ;  ನೇಣು  ಹಾಕಿಕೊಂಡ ಬಸ್ ಕಂಡಕ್ಟರ್

ಏ. 8ರಂದು ಪೋಷಕರನ್ನು ಶಾಲೆಗೆ ಕರೆಸಿದ್ದ ಪ್ರಾಚಾರ್ಯರು ಪೋಷಕರೊಂದಿಗತೆ ಮಾತನಾಡಿದ್ದರು. ಮಾರನೇ ದಿನ ಅದೇ ಶಾಲೆಯಲ್ಲಿ ಒಂಭತ್ತನೇ ತರಗತಿ ಅಧ್ಯಯನ ಮಾಡುತ್ತಿದ್ದ ಮಗನನ್ನು ಕರೆದುಕೊಂಡು ಶಾಲೆಗೆ ಹೋದ ಪೋಷಕರು ಮಗನ ಎದುರಿನಲ್ಲಿಯೇ ಅಕ್ಕನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೇಳಿಕೊಂಡಿದ್ದಾರೆ. ಇಬ್ಬರು ಮಕ್ಕಳಿಗೂ ಟಿಸಿ ಕೊಟ್ಟುಬಿಡತ್ತೇವೆ ಎಂದು ಪ್ರಾಚಾರ್ಯರು ಗದರಿದ್ದಾರೆ.

ಮನೆಗೆ ಬಂದ ಪೋಷಕರು ಮಗಳಿಗೆ ವಿಚಾರ ಹೇಳಿದ್ದು ನಾಳೆ ಹೋಗಿ ಮನವಿ ಮಾಡಿಕೊ ಎಂದಿದ್ದಾರೆ. ಇದೆಲ್ಲ ಘಟನೆಗಳಿಂದ ನೊಂದ ಬಾಲಕಿ ಫ್ಯಾನ್ ಗೆ ನೇಣು ಹಾಕಿಕೊಂಡಿದ್ದಾಳೆ.   ಹರ್ಯಾಣದ ಗುರುಗ್ರಾಮದಲ್ಲಿ ನಡೆದ ಘಟನೆ ಇದೀಗ ಅನೇಕ ಪ್ರಶ್ನೆಗಳನ್ನು ಎತ್ತುವಂತೆ ಮಾಡಿದೆ.