ಎಟಿಎಂಗೆ ಒಂಚೂರು ಹಾನಿ ಮಾಡದೆ 1 5 ಲಕ್ಷ ದೋಚಿದ್ರು
ಎಟಿಎಂ ಕೇಂದ್ರದಿಂದ 15 ಲಕ್ಷ ಲೂಟಿ | ಸೇಫ್ ಡೋರ್ ಸೀಕ್ರೆಟ್ ಪಾಸ್‌ವರ್ಡ್ ಬಳಸಿ ಕೃತ್ಯ | ವಿದ್ಯಾರಣ್ಯಪುರದಲ್ಲಿ ಘಟನೆ
ಬೆಂಗಳೂರು(ಜ.10): ವಿದ್ಯಾರಣ್ಯಪುರದಲ್ಲಿ ಎಟಿಎಂ ಕೇಂದ್ರವೊಂದಕ್ಕೆ ನುಗ್ಗಿದ ಕಳ್ಳರು ಸೇಫ್ ಡೋರ್‌ನ ಸೀಕ್ರೆಟ್ ಪಾಸ್‌ವರ್ಡ್ ಉಪಯೋಗಿಸಿ .15 ಲಕ್ಷ ನಗದು ದೋಚಿರುವ ಪ್ರಕರಣ ಬೆಳಕಿಗೆ ಬಂದಿದೆ.
ಫೈನ್ಯಾನ್ಸಿಯಲ್ ಸಾಫ್ಟ್‌ವೇರ್ ಆ್ಯಂಡ್ ಸಿಸ್ಟಮ್ ಕಂಪನಿ ನೌಕರ ಮಂಜುನಾಥ್ ಎಂಬುವರು ಈ ಸಂಬಂಧ ವಿದ್ಯಾರಣ್ಯಪುರ ಠಾಣೆಗೆ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ.
ಸಿಎಂ ಯಡಿಯೂರಪ್ಪಗೆ ಅಭಿನಂದನೆ ಹೇಳಿದ ಕುಮಾರಸ್ವಾಮಿ: ಕಾರಣ..?
ಜ.3ರಂದು ಮಧ್ಯಾಹ್ನ ಎಟಿಎಂ ಕೇಂದ್ರಕ್ಕೆ ಹಣ ತುಂಬುವ ರಮೇಶ್ ಎಂಬುವವರು ಮಂಜುನಾಥ್ ಅವರಿಗೆ ಕರೆ ಮಾಡಿ ವಿದ್ಯಾರಣ್ಯಪುರ ತಿಂಡ್ಲು ರಸ್ತೆಯಲ್ಲಿರುವ ಕೆನರಾ ಬ್ಯಾಂಕ್‌ನ ಎಟಿಎಂ ಯಂತ್ರದಲ್ಲಿ ಹಣ ಬರುತ್ತಿಲ್ಲ ಎಂದು ಸಂದೇಶ ಬಂದಿದೆ ಎಂದು ತಿಳಿಸಿದ್ದರು.
ಎಟಿಎಂ ಕೇಂದ್ರಕ್ಕೆ ಬಂದು ಮಂಜುನಾಥ್ ಪರಿಶೀಲಿಸಿದಾಗ ಮಾನಿಟರ್ ಆನ್ ಅಗಿತ್ತು. ಅನುಮಾನದ ಮೇರೆಗೆ ಎಟಿಎಂ ಕೇಂದ್ರಕ್ಕೆ ಹಣ ತುಂಬುವ ಸೇಫ್ ಡೋರ್‌ನ ಕೆಳಗೆ ನೋಡಿದಾಗ ಡೋರ್ ಓಪನ್ ಆಗಿರುವುದು ಕಂಡು ಬಂದಿತ್ತು. ನಂತರ ಕೌಂಟರ್ ರಸೀದಿ ಪರಿಶೀಲಿಸಿದಾಗ ರಾಕೇಶ್ ಮತ್ತು ರಮೇಶ್ ಜ.2ರಂದು ಎಟಿಎಂಗೆ 13 ಲಕ್ಷ ತುಂಬಿರುವುದು ಕಂಡು ಬಂದಿತ್ತು. ಇವರು ಹಣ ಹಾಕುವ ಮೊದಲೇ ಎಟಿಎಂ ಯಂತ್ರದಲ್ಲಿ 2.82 ಲಕ್ಷ ಇತ್ತು.
ಆಗ ಏನೆಲ್ಲ ಆಯ್ತು ಎಂದು ಹೇಳಲೇ: ಡಿಕೆಶಿ, ಸಿದ್ದುಗೆ ಎಚ್ಚರಿಕೆ ಕೊಟ್ಟ ಮಾಜಿ ಕಾಂಗ್ರೆಸ್ ಲೀಡರ್
ದುಷ್ಕರ್ಮಿಗಳು ರಾತ್ರಿ ಸಮಯದಲ್ಲಿ ಎಟಿಎಂ ಯಂತ್ರಕ್ಕೆ ಯಾವುದೇ ಹಾನಿ ಮಾಡದೆ ಸೇಫ್ ಡೋರ್‌ನ ಸೀಕ್ರೆಟ್ ಪಾಸ್‌ವರ್ಡ್ ನಂಬರನ್ನು ಉಪಯೋಗಿಸಿ ಎಟಿಎಂ ಯಂತ್ರದ ಸೇಫ್ ಡೋರನ್ನು ತೆಗೆದು ಅದರಲ್ಲಿದ್ದ 15.39 ಲಕ್ಷ ಹಣ ದೋಚಿದ್ದಾರೆ. ಎಟಿಎಂ ಕೇಂದ್ರದಲ್ಲಿರುವ ಸಿಸಿ ಕ್ಯಾಮೆರಾ ಕಳೆದ ಆರು ತಿಂಗಳಿನಿಂದ ಚಾಲ್ತಿಯಲ್ಲಿ ಇಲ್ಲ. ತಿಳಿದವರೇ ಕೃತ್ಯ ಎಸಗಿರುವ ಸಾಧ್ಯತೆ ಇದೆ. ಎಟಿಎಂ ಕೇಂದ್ರಕ್ಕೆ ಹಣ ತುಂಬುವ ಸಿಬ್ಬಂದಿ ವಿಚಾರಣೆ ಕೂಡ ನಡೆಯುತ್ತಿದೆ ಎಂದು ತಿಳಿಸಿದರು.