ಬೆಂಗಳೂರು: ಕ್ರಿಕೆಟ್ ಟೂರ್ನಿ ಆಡಿಸೋದಾಗಿ 12.23 ಲಕ್ಷ ವಂಚನೆ

ರಾಜಾಜಿನಗರ 5ನೇ ಬ್ಲಾಕ್ ನಿವಾಸಿ ಶಾಮ್ ಪ್ರಸಾದ್ ಶೆಟ್ಟಿ ನೀಡಿದ ದೂರಿನ ಮೇರೆಗೆ ಗಾಂಧಿನಗರದ ರೋರ್ ಕ್ರಿಕೆಟ್ ಅಕಾಡೆಮಿ ತರಬೇತುದಾರ ಗೌರವ್ ಧೀಮಾನ್ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡ ಪೊಲೀಸರು 

12.23 Lakh Fraud in the Name of Playing Cricket Tournament in Bengaluru grg

ಬೆಂಗಳೂರು(ಫೆ.27):  ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಷಿಯೇಷನ್ (ಕೆಎಸ್‌ಸಿಎ) ಆಯೋಜಿಸುವ ಕ್ರಿಕೆಟ್ ಟೂರ್ನಿ ಗಳಲ್ಲಿ ಆಟವಾಡಲು ಅವಕಾಶಕೊಡಿಸುವುದಾಗಿ ಯುವ ಕ್ರಿಕೆಟಿಗನ ಪೋಷಕರಿಂದ ₹12.23 ಲಕ್ಷ ಪಡೆದು ವಂಚಿಸಿ, ಜೀವ ಬೆದರಿಕೆ ಹಾಕಿದ ಆರೋಪದಡಿ ಖಾಸಗಿ ಕ್ರಿಕೆಟ್ ಅಕಾಡೆಮಿಯ ತರಬೇತುದಾರನ ವಿರುದ್ಧ ಉಪ್ಪಾರಪೇಟೆ ಎಫ್‌ಐಆರ್‌ ದಾಖಲಾಗಿದೆ. ರಾಜಾಜಿನಗರ 5ನೇ ಬ್ಲಾಕ್ ನಿವಾಸಿ ಶಾಮ್ ಪ್ರಸಾದ್ ಶೆಟ್ಟಿ ನೀಡಿದ ದೂರಿನ ಮೇರೆಗೆ ಗಾಂಧಿನಗರದ ರೋರ್ ಕ್ರಿಕೆಟ್ ಅಕಾಡೆಮಿ ತರಬೇತುದಾರ ಗೌರವ್ ಧೀಮಾನ್ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದೆ.

ಪ್ರಕರಣದ ವಿವರ:

ದೂರುದಾರ ಶಾಮ್ ಪ್ರಸಾದ್ ಶೆಟ್ಟಿ ಅವರ ಪುತ್ರ ಆಯುಷ್ ಪೂರ್ಣಚಂದ್ರ ಶೆಟ್ಟಿ(23) ಕೆಎಸ್‌ ಸಿಎ ನಡೆಸುವ ಪ್ರಥಮ ದರ್ಜೆ ಕ್ರಿಕೆಟ್ ಲೀಗ್ ಸಂಬಂಧ ಮೌಂಟ್ ಜಾಯ್ ಕ್ರಿಕೆಟ್ ಕ್ಲಬ್ ಪರ ಕ್ರಿಕೆಟ್ ಆಡುತ್ತಿದ್ದರು. ಈ ಟೂರ್ನಿಯಲ್ಲಿ ಉತ್ತಮ ರನ್ ಗಳಿಸಿದ್ದರಿಂದ ಮಿರ್ಜಾ ಇಸ್ಮಾಯಿಲ್ ಅಂಡರ್ -23 ವಲಯ ಮಟ್ಟದ ಟೂರ್ನಿಗೆ ಅವಕಾಶ ಪಡೆದಿದ್ದರು. ಈ ಟೂರ್ನಿಯ ಮೊದಲ 2 ಪಂದ್ಯಗಳಲ್ಲಿ ಸರಿಯಾಗಿ ರನ್ ಗಳಿಸದ ಪರಿಣಾಮ ಉಳಿದ ಮೂರು ಪಂದ್ಯಗಳಿಗೆ ಅವಕಾಶ ನೀಡಿರಲಿಲ್ಲ.

ಗ್ರಾಹಕನ ಅಕೌಂಟ್‌ನಲ್ಲಿದ್ದ 16 ಕೋಟಿ ಎಗರಿಸಿದ ಐಸಿಐಸಿಐ ಬ್ಯಾಂಕ್‌ ಮ್ಯಾನೇಜರ್‌!

ನಂತರ ಆಯುಷ್ ಪೂರ್ಣಚಂದ್ರ ಶೆಟ್ಟಿ ಗಾಂಧಿನರದ ಶೇಷಾದ್ರಿ ರಸ್ತೆಯಲ್ಲಿರುವ ರೋರ್ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿಗೆ ಸೇರಿಕೊಂಡಿದ್ದರು. ಅಲ್ಲಿನ ತರಬೇತುದಾರ ಗೌರವ್ ಧೀಮಾನ್ ಪರಿಚಯವಾಗಿದೆ. ಬಳಿಕ ಆಯುಷ್ ಜತೆಗೆ ಮನೆಗೆ ಬಂದಿದ್ದ ಗೌರವ್, ದೂರದಾರ ಶಾಮ್‌ ಪ್ರಸಾದ್‌ರನ್ನು ಪರಿಚಯಿಸಿಕೊಂಡಿದ್ದಾರೆ.

ಕೆಎಸ್‌ಸಿಎ ಟೂರ್ನಿಗಳಲ್ಲಿ ಅವಕಾಶದ ಆಮಿಷ

ಕೆಎಸ್‌ಸಿಎ ಅಧ್ಯಕ್ಷ ಬ್ರಿಜೇಷ್‌ ಪಟೇಲ್‌ಗೆ ಸೇರಿದ ಸ್ವಸ್ತಿಕ್ ಯೂನಿಯನ್ ಕ್ರಿಕೆಟ್ ಕ್ಲಬ್‌ನ ವ್ಯವಸ್ಥಾಪಕರು ಮುಂದೆ ನಡೆ ಯುವ 2 ದಿನದ ಪ್ರಥಮ ದರ್ಜೆ ಲೀಗ್ ಸರ್.ಮಿರ್ಜಾ ಇಸ್ಮಾಯಿಲ್ ಟ್ರೋಫಿ, ಟಿ-20 ಮಾದರಿಯ ಕಸ್ತೂರಿ ರಂಗನ್ ಮೆಮೋ ರಿಯಲ್ ಟ್ರೋಫಿಗೆ ಆಟಗಾರರನ್ನು ಆಯ್ಕೆ ಮಾಡಲಿದ್ದಾರೆ. ಈ ಟೂರ್ನಿ ಹಾಗೂ ಎಸ್. ಎ. ಶ್ರೀನಿವಾಸ ಮೆಮೋರಿ ಯಲ್ ಟ್ರೋಫಿ ನಿಮ್ಮ ಮಗನಿಗೆ ಆಟಗಾರನಾಗಿ ಅವಕಾಶ ಕೊಡಿಸುವೆ' ಎಂದು ಆಮಿಷವೊಡ್ಡಿದ್ದರು.

ಹಂತ ಹಂತವಾಗಿ ₹12.23 ಲಕ್ಷ ಪಡೆದು ವಂಚನೆ: 

2022-23ನೇ ಸಾಲಿನಲ್ಲಿ ಮೌಂಟ್ ಜಾಯ್ ಕ್ರಿಕೆಟ್ ಕ್ಲಬ್ ಪರ ಆಡದಂತೆ ಆಯು ಜ್ಗೆ ತಿಳಿಸಿದ್ದ. ಮುಂಬರುವ ಟೂರ್ನಿಗಳಿಗೆ ಅವಕಾಶ ಕೊಡಿಸುವುದಾಗಿ ಆಯುಷ್ ತಂದೆ ಯಿಂದ ವಿವಿಧ ಹಂತಗಳಲ್ಲಿ 12.23 ಲಕ್ಷ ಪಡೆದಿದ್ದಾರೆ.

ವಿಜಯಪುರ ಪೆನ್ಸಿಲ್ ಪ್ಯಾಕಿಂಗ್ ಹೆಸರಲ್ಲಿ 10 ಲಕ್ಷ ಪಂಗನಾಮ, ಕಂಗಾಲಾದ ಮಹಿಳೆ..!

ಕೋಚ್ ತಂದೆ ಕ್ಷಮೆಯಾಚನೆ

ವಂಚನೆ ಸಂಬಂಧ ಶಾಮ್‌ ಪ್ರಸಾದ್ ಉಪಾರಪೇಟೆ ಠಾಣೆಗೆ ದೂರು ನೀಡಿದಾಗ ಎನ್ಸಿಆರ್ ಮಾಡಿಕೊಂ ಡಿದ್ದರು. ಈ ದೂರಿನ ವಿಚಾರ ತರಬೇ ತುದಾರ ಧೀಮಾನ್ ತಂದೆ ಸುನೀಲ್ ಕುಮಾರ್ ಅವರು ಕಳೆದ ಡಿ.2ರಂದು ಶಾಮ್‌ಪ್ರಸಾದ್ ಅವರನ್ನು ಭೇಟಿ ಯಾಗಿ 'ನಾನೊಬ್ಬ ನಿವೃತ್ತ ಕರ್ನಲ್, ನಮ್ಮದು ಗೌರವಾನ್ವಿತ ಕುಟುಂಬ. ನನ್ನ ಮಗ ಮಾಡಿರುವ ಮೋಸಕ್ಕೆ ಕ್ಷಮೆ ಯಾಚಿಸುತ್ತೇನೆ. ಸದ್ಯ ಮಗ ವಿದೇಶಕ್ಕೆ ಹೋಗಿದ್ದು, ಆತ ವಾಪಸ್ ಆದ ಬಳಿಕ ನಿಮ್ಮ ಹಣವನ್ನು ವಾಪಾಸ್ ನೀಡುವೆ ಭರವಸೆ ನೀಡಿದ್ದರು.

ಜೀವ ಬೆದರಿಕೆ

ತರಬೇತಿದಾರ ಧೀಮಾನ್ ವಿದೇಶ ದಿಂದ ವಾಪಸ್ ಬಂದ ಬಳಿಕ ಹಣ ವಾಪಸ್ ಕೇಳಿದ್ದಕ್ಕೆ 'ನಿನ್ನ ಮಗನ ಭವಿಷ್ಯ ಹಾಳು ಮಾಡುತ್ತೇನೆ. ನನಗೆ ರೌಡಿಗಳ ಪರಿಚಯವಿದ್ದು, ಅವರಿಂದ ನಿನ್ನ ಮಗನನ್ನು ಅಪಘಾತ ಮಾಡಿಸಿ ಕೊಲೆ ಮಾಡಿಸುತ್ತೇನೆ ಎಂದು ಬೆದರಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಷ್ಟೇ ಅಲ್ಲದೆ ನನ್ನ ತಂದೆ ನಿವೃತ್ತ ಕರ್ನಲ್ ಆಗಿದ್ದು, ಅವರಿಗೆ ಹಿರಿಯ ಅಧಿಕಾರಿಗಳು, ರಾಜಕಾರಣಿಗಳ ಪರಿ ಚಯವಿದೆ. ನೀನು ನನ್ನ ಏನೂ ಮಾಡಲು ಸಾಧ್ಯವಿಲ್ಲ' ಎಂದು ಬೆದರಿಕೆ ಹಾಕಿದ್ದಾನೆ ಎಂದು ಕಾಮ್‌ ಪ್ರಸಾದ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

Latest Videos
Follow Us:
Download App:
  • android
  • ios