ಅಮರಾವತಿ(ಆ.01): ಮದ್ಯಕ್ಕೆ ಬದಲಾಗಿ ಕೆಲ ದಿನಗಳಿಂದ ಹ್ಯಾಂಡ್‌ ಸ್ಯಾನಿಟೈಸರ್‌ ಸೇವಿಸುತ್ತಿದ್ದ 10 ಗ್ರಾಮಸ್ಥರು ಸಾವಿಗೀಡಾದ ಘಟನೆ ಆಂಧ್ರದ ಅಮರಾವತಿ ಜಿಲ್ಲೆಯಲ್ಲಿ ನಡೆದಿದೆ. 

ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಲಾಕ್‌ಡೌನ್‌ ಜಾರಿಯಲ್ಲಿದೆ. ಹೀಗಾಗಿ, ಮದ್ಯದ ಅಂಗಡಿಗಳು ಬಂದ್‌ ಆಗಿವೆ. ಆದರೆ, ಮದ್ಯದ ದಾಸರಾಗಿದ್ದ ಜಿಲ್ಲೆಯ ಕುರಿಚೇಡು ಗ್ರಾಮದ 10 ಜನರು ಕೆಲ ದಿನಗಳಿಂದ ಸ್ಯಾನಿಟೈಸರ್‌ಗೆ ನೀರು ಮತ್ತು ತಂಪುಪಾನೀಯ ಬೆರಸಿ ಸೇವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಆರೋಗ್ಯ ಕೈಕೊಟ್ಟು ಎಲ್ಲರೂ ಸಾವನ್ನಪ್ಪಿದ್ದಾರೆ.

ಅತಿಯಾದ ಸ್ಯಾನಿಟೈಸರ್‌ ಬಳಸುತ್ತೀರಾ? ಎಚ್ಚರ...! ಮತ್ತೊಂದು ಸಮಸ್ಯೆಗೆ ಇದು ದಾರಿ!

ಕಳೆದ 10 ದಿನಗಳಿಂದ ಮಧ್ಯದಂಗಡಿಗಳು ಮುಚ್ಚಿದ್ದರಿಂದ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಕುಡುಕರು ಮುಂದಾಗಿದ್ದಾರೆ. ಸ್ಯಾನಿಟೈಸರ್‌ನಲ್ಲಿ ಆಲ್ಕೋಹಾಲಿಕ್ ಅಂಶ ಇರುವುದನ್ನು ಗಮನಿಸಿದ ಮಧ್ಯ ಸಿಗದ ಕುಡುಕರು ಹೊಸ ಪ್ರಯೋಗ ಮಾಡಲು ಹೋಗಿ ಜೀವಕ್ಕೆ ಕಂಟಕ ತಂದುಕೊಂಡಿದ್ದಾರೆ. 

ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಆಂಧ್ರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮೃತಪಟ್ಟ ಕುಡುಕರು ಸ್ಯಾನಿಟೈಸರ್ ಖರೀದಿಸಿದ ಅಂಗಡಿಗೆ ತೆರಳಿ ಎಲ್ಲಾ ಸ್ಯಾನಿಟೈಸರ್ ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ ಹಾಗೂ ಅವುಗಳನ್ನು ಲ್ಯಾಬ್‌ಗಳಿಗೆ ಪ್ರಯೋಗಕ್ಕೆ ಕಳಿಸಿಕೊಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಕೌಶಲ್ ತಿಳಿಸಿದ್ದಾರೆ.