3 RT-PCR ಟೆಸ್ಟ್, 14 ದಿನ ಕ್ವಾರಂಟೈನ್; ಇಂಗ್ಲೆಂಡ್ ತೆರಳಲಿರುವ ಟೀಂ ಇಂಡಿಯಾಗೆ ಕಠಿಣ ರೂಲ್ಸ್!
- ವಿಶ್ವ ಟೆಸ್ಟ್ ಚಾಂಪಿಯನ್‌ಶಿಫ್ ಫೈನಲ್ ಟೂರ್ನಿ
- ಇಂಗ್ಲೆಂಡ್ ತೆರಳಲಿರುವ ಟೀಂ ಇಂಡಿಯಾಗೆ ಕಠಿಣ ರೂಲ್ಸ್
- ಭಾರತ ಹಾಗೂ ನ್ಯೂಜಿಲೆಂಡ್ WTC ಫೈನಲ್
ಮುಂಬೈ(ಮೇ.16): ಕೊರೋನಾ ವೈರಸ್ ಕಾರಣ ಐಪಿಎಲ್ ಟೂರ್ನಿ ರದ್ದಾಗಿದೆ. ಇದೀಗ ಎಲ್ಲರ ಚಿತ್ತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟೂರ್ನಿಯತ್ತ ನೆಟ್ಟಿದೆ. ಇಂಗ್ಲೆಂಡ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ಮುಖಾಮುಖಿಯಾಗುತ್ತಿದೆ. ಇಂಗ್ಲೆಂಡ್ ಪ್ರಯಾಣ ಬೆಳೆಸಲಿರುವ ಟೀಂ ಇಂಡಿಯಾ ಅತ್ಯಂತ ಕಠಿಣ ನಿಯಮ ಪಾಲಿಸಲು ಬಿಸಿಸಿಐ ಸೂಚಿಸಿದೆ.
ಭಾರತ ಬೆಂಬಲಿಸಿ ಆಸೀಸ್ ಕ್ರಿಕೆಟಿಗನ ಭಾವನಾತ್ಮಕ ಪತ್ರಕ್ಕೆ ಆನಂದ್ ಮಹೀಂದ್ರ ಧನ್ಯವಾದ!
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕಾಗಿ ಭಾರತ ತಂಡ ಜೂನ್ 2 ರಂದು ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಲಿದೆ. ಆದರೆ ಅದಕ್ಕೂ ಮುನ್ನ ಕೊರೋನಾ ನಿಯಮ ಪಾಲಿಸಬೇಕಿದೆ. ಇದಕ್ಕಾಗಿ ಮೇ.19 ರಂದು ಮುಂಬೈನಲ್ಲಿ ಸೇರಲಿದೆ. ಮುಂಬೈಗೆ ಆಗಮಿಸುವ ಮುನ್ನ ಟೀಂ ಇಂಡಿಯಾ ಕ್ರಿಕೆಟಿಗರು RT PCT ಕೊರೋನಾ ಟೆಸ್ಟ್ ಮಾಡಿಸಿರಬೇಕು. ನೆಗಟೀವ್ ವರದಿ ಇದ್ದರೆ ಮಾತ್ರ ಮುಂಬೈಗೆ ಕ್ಯಾಂಪ್‌ಗೆ ಪ್ರವೇಶ.
ಇಲ್ಲಿಗೆ ಮುಗಿದಿಲ್ಲ, ಮೇ.19 ರಂದು ಮುಂಬೈನಲ್ಲಿ ಸೇರಲಿರುವ ಟೀಂ ಇಂಡಿಯಾ ಕ್ರಿಕಿಟಗರು 14 ದಿನ ಕ್ವಾರಂಟೈನ್‌ಗೆ ಒಳಗಾಗಲಿದ್ದಾರೆ. ಬಳಿಕ ಜೂನ್ 2 ರಂದು ಇಂಗ್ಲೆಂಡ್ ತೆರಳಲಿದ್ದಾರೆ. ಇಂಗ್ಲೆಂಡ್ ಪ್ರಯಾಣಕ್ಕೂ ಮುನ್ನ ಬಿಸಿಸಿಐ ಆಟಗಾರರ RT-PCR ಟೆಸ್ಟ್ ಮಾಡಿಸಲಿದೆ. ಈ ಪರೀಕ್ಷೆಯಲ್ಲಿ ನೆಗಟೀವ್ ಇದ್ದರೆ ಇಂಗ್ಲೆಂಡ್‌ಗೆ ಪ್ರಯಾಣದ ಅವಕಾಶ.
ಕೋವಿಡ್ ಸೋಂಕಿನಿಂದ ಹಸ್ಸಿ ಗುಣಮುಖ, ಸಾಹಗೆ ಮತ್ತೆ ಪಾಸಿಟಿವ್!.
ಇಂಗ್ಲೆಂಡ್ ತಲುಪಿದ ಟೀಂ ಇಂಡಿಯಾ ಕ್ರಿಕೆಟಿಗರು ಮತ್ತೊಂದು RT-PCR ಪರೀಕ್ಷೆಗೆ ಒಳಗಾಗಬೇಕು. ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಈ ಪರೀಕ್ಷೆ ಮಾಡಿಸಲಿದೆ. ಇಲ್ಲಿ ನೆಗಟೀವ್ ಇದ್ದರೆ ಮಾತ್ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪೈನಲ್ ಪಂದ್ಯ ಆಡಲು ಅವಕಾಶ ಸಿಗಲಿದೆ.
ಆಟಗಾರರ ಜೊತೆ ಪತ್ನಿಯರು ತೆರಳಲು ಇಚ್ಚಿಸಿದರೆ ಇದೇ ರೂಲ್ಸ್ ಫಾಲೋ ಮಾಡಬೇಕಿದೆ. ಇಷ್ಟೇ ಅಲ್ಲ ಐಪಿಎಲ್ ಟೂರ್ನಿ ಬಳಿ ಮನೆ ಸೇರಿರುವ ಈ ಆಟಗಾರರು ಹಾಗೂ ಆಟಗಾರರ ಪತ್ನಿಯರೂ ಹೊರಗಡೆ ಹೋಗಿರಬಾರದು. ಈ ಎಲ್ಲಾ ಕಠಿಣ ರೂಲ್ಸ್ ಫಾಲೋ ಮಾಡಿದರೆ ಮಾತ್ರ ಇಂಗ್ಲೆಂಡ್ ಪ್ರಯಾಣಕ್ಕೆ ಅವಕಾಶ ಸಿಗಲಿದೆ.