* ಐಸಿಸಿ ಟೆಸ್ಟ್ ವಿಶ್ವಕಪ್‌ ಫೈನಲ್‌ನಲ್ಲಿ ಮುಗ್ಗರಿಸಿದ ಟೀಂ ಇಂಡಿಯಾ* ಟೀಂ ಇಂಡಿಯಾ ಆಯ್ಕೆಯನ್ನು ಪ್ರಶ್ನಿಸಿದ ಸಚಿನ್ ತೆಂಡುಲ್ಕರ್* ಆಸ್ಟ್ರೇಲಿಯಾ ಎದುರು ಫೈನಲ್‌ನಲ್ಲಿ 209 ರನ್‌ಗಳ ಸೋಲುಂಡ ರೋಹಿತ್ ಶರ್ಮಾ ಪಡೆ

ನವದೆಹಲಿ(ಜೂ.12): ಟೆಸ್ಟ್‌ ವಿಶ್ವಕಪ್‌ ಫೈನಲ್‌ನಲ್ಲಿ ಗೆಲುವು ಸಾಧಿಸಿದ ಆಸ್ಪ್ರೇಲಿಯಾ ತಂಡವನ್ನು ಅಭಿನಂದಿಸಿರುವ ಸಚಿನ್‌ ತೆಂಡುಲ್ಕರ್‌, ಭಾರತ ತಂಡದ ಯೋಜನೆಯನ್ನು ಪ್ರಶ್ನಿಸಿದ್ದಾರೆ. 

ಭಾನುವಾರ ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ‘ಭಾರತ ಪಂದ್ಯದಲ್ಲಿ ಉಳಿಯಲು ಮೊದಲ ಇನ್ನಿಂಗ್‌್ಸನಲ್ಲಿ ದೊಡ್ಡ ಮೊತ್ತ ಕಲೆಹಾಕಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ವಿಶ್ವ ನಂ.1 ಬೌಲರ್‌ ಆರ್‌.ಅಶ್ವಿನ್‌ರನ್ನು ಆಡಿಸದೆ ಇದ್ದಿದ್ದು ಅಚ್ಚರಿ ಮೂಡಿಸಿತು. ವಿಶ್ವ ಶ್ರೇಷ್ಠ ಬೌಲರ್‌ಗಳು ಪಿಚ್‌ ನೆರವು ನೀಡಿದರಷ್ಟೇ ಪರಿಣಾಮಕಾರಿಯಾಗುವುದಿಲ್ಲ. ಕಠಿಣ ಪಿಚ್‌ಗಳಲ್ಲೂ ಯಶಸ್ಸು ಕಾಣುವ ಕೌಶಲ್ಯ ಅವರಲ್ಲಿ ಇರಲಿದೆ. ಆಸೀಸ್‌ನ ಅಗ್ರ 8 ಬ್ಯಾಟರ್‌ಗಳಲ್ಲಿ ಐವರು ಎಡಗೈ ಬ್ಯಾಟರ್‌ಗಳಾಗಿದ್ದರು ಎನ್ನುವುದನ್ನು ಮರೆಯುವಂತಿಲ್ಲ’ ಎಂದಿದ್ದಾರೆ.

Scroll to load tweet…

2021-23ನೇ ಸಾಲಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಭಾರತದ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ 61 ವಿಕೆಟ್ ಕಬಳಿಸುವ ಮೂಲಕ ಈ ಅವಧಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಹೀಗಿದ್ದೂ ಅಶ್ವಿನ್‌ಗೆ ಟೆಸ್ಟ್‌ ವಿಶ್ವಕಪ್‌ ಫೈನಲ್‌ನಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು. ಐಸಿಸಿ ಟೆಸ್ಟ್ ಬೌಲರ್‌ಗಳ ಶ್ರೇಯಾಂಕದಲ್ಲಿ ನಂ.1 ಬೌಲರ್ ಎನಿಸಿಕೊಂಡಿರುವ ಅಶ್ವಿನ್‌ ಅವರಿಗೆ ಭಾರತ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡದ್ದಕ್ಕೆ ಸುನಿಲ್ ಗವಾಸ್ಕರ್ ಕೂಡಾ ಅಚ್ಚರಿ ವ್ಯಕ್ತಪಡಿಸಿದ್ದರು.

ಟೆಸ್ಟ್‌ಗೆ ಆಸೀಸ್‌ ಬಾಸ್‌!

ಭಾರತ ದಶ​ಕ​ಗಳ ಬಳಿಕ ಐಸಿಸಿ ಟ್ರೋಫಿ ಗೆಲ್ಲ​ಲಿ​ದೆ ಎಂಬ ಕೋಟ್ಯಂತರ ಅಭಿ​ಮಾ​ನಿ​ಗಳ ಪ್ರಾರ್ಥನೆ, ಹಾರೈಕೆ, ಕನಸು ಭಗ್ನ​ಗೊಂಡಿ​ತು. 2021-23ರ ವಿಶ್ವ ಟೆಸ್ಟ್‌ ಚಾಂಪಿ​ಯ​ನ್‌​ಶಿ​ಪ್‌​ನ ಫೈನ​ಲ್‌​ನಲ್ಲಿ ಆಸ್ಪ್ರೇ​ಲಿಯಾ ವಿರುದ್ಧ ಭಾರತ 209 ರನ್‌​ಗಳ ಹೀನಾಯ ಸೋಲುಂಡಿದ್ದು, ಚೊಚ್ಚಲ ಪ್ರಶಸ್ತಿ ಗೆಲ್ಲುವ ಅವ​ಕಾಶ ಕೈಜಾರಿತು. ಮೊದಲ ಬಾರಿ ಟೆಸ್ಟ್‌ ವಿಶ್ವ​ಕಪ್‌ ಫೈನ​ಲ್‌​ಗೇ​ರಿದ್ದ ಆಸೀಸ್‌ ಕಪ್‌ ಗೆದ್ದು ಸಂಭ್ರ​ಮಿ​ಸಿತು.

ಲಂಡನ್‌ನ ದಿ ಓವಲ್‌ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಭಾರ​ತಕ್ಕೆ ಗೆಲ್ಲಲು ಬೇಕಿ​ದ್ದದ್ದು ಬರೋ​ಬ್ಬರಿ 444 ರನ್‌. ಅಂದರೆ ಟೆಸ್ಟ್‌ ಇತಿ​ಹಾ​ಸ​ದಲ್ಲೇ ಈವ​ರೆಗೆ ಯಾರೂ ಯಶ​ಸ್ವಿ​ಯಾಗಿ ಚೇಸ್‌ ಮಾಡಿ​ರ​ದ​ ಬೃಹತ್‌ ಮೊತ್ತ. ಆದರೆ ಭಾರತ ಅಸಾ​ಧಾ​ರಣ ಪ್ರದ​ರ್ಶನ ತೋರಿ ದೊಡ್ಡ ಮೊತ್ತ ಬೆನ್ನ​ತ್ತ​ಬ​ಹು​ದೆಂಬ ನಿರೀ​ಕ್ಷೆ ಹುಸಿ​ಯಾ​ಯಿತು. ಕೊನೆಯ ದಿನವಾದ ಭಾನುವಾರ ಭೋಜನ ವಿರಾಮಕ್ಕೂ ಮೊದಲೇ ಭಾರತ 234 ರನ್‌ಗೆ ಗಂಟು ಮೂಟೆ ಕಟ್ಟಿತು.

WTC Final: ಟೆಸ್ಟ್ ವಿಶ್ವಕಪ್ ಗೆಲ್ಲುವ ಭಾರತದ ಕನಸು ಭಗ್ನ, ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್‌ಗೆ ಒಡೆಯ

2023-25: ಭಾರ​ತ​ಕ್ಕೆ ಕಠಿಣ ಸವಾಲು!

ಟೆಸ್ಟ್‌ ಫೈನಲ್‌ ಸೋತಿ​ರುವ ಭಾರತ 2023-25ರ ಚಾಂಪಿ​ಯ​ನ್‌​ಶಿ​ಪ್‌​ ಅಭಿ​ಯಾ​ನ​ವನ್ನು ಮುಂದಿನ ತಿಂಗಳಿಂದಲೇ ಆರಂಭಿ​ಸ​ಲಿದೆ. ಈ ಪೈಕಿ 3 ಸರಣಿ ತವ​ರಿ​ನಲ್ಲಿ, 3 ಸರಣಿ ವಿದೇ​ಶ​ದಲ್ಲಿ ನಿಗ​ದಿ​ಯಾ​ಗಿದೆ. ತವ​ರಿ​ನಲ್ಲಿ ಟೀಂ ಇಂಡಿಯಾ, ಬಾಂಗ್ಲಾದೇಶ ವಿರುದ್ಧ 2, ಇಂಗ್ಲೆಂಡ್‌ ವಿರುದ್ಧ 5 ಹಾಗೂ ನ್ಯೂಜಿಲೆಂಡ್‌ ವಿರುದ್ಧ 3 ಟೆಸ್ಟ್‌ ಪಂದ್ಯ​ಗ​ಳ​ನ್ನಾ​ಡ​ಲಿದೆ. ಇದೇ ಜುಲೈ​ನಲ್ಲಿ ವಿಂಡೀಸ್‌ ಪ್ರವಾಸ ಕೈಗೊಳ್ಳಲಿರುವ ಭಾರತ 2 ಟೆಸ್ಟ್‌ ಆಡ​ಲಿದ್ದು, ಬಳಿಕ ದ.ಆ​ಫ್ರಿ​ಕಾ​ದಲ್ಲಿ 2 ಹಾಗೂ ಆಸ್ಪ್ರೇ​ಲಿ​ಯಾ​ದಲ್ಲಿ 5 ಪಂದ್ಯ​ಗ​ಳನ್ನು ಆಡ​ಲಿದೆ. ದ.ಆಫ್ರಿಕಾ ಹಾಗೂ ಆಸೀಸ್‌ ಪ್ರವಾಸ ಭಾರತದ ಪಾಲಿಗೆ ಕಠಿಣ ಸವಾಲಾಗಿ ಪರಿಣಮಿಸಬಹುದು.