ಇಂದು ಮಧ್ಯಾಹ್ನ 2.30ರಿಂದ ಮಹಿಳಾ ಪ್ರೀಮಿಯರ್ ಲೀಗ್ ಹರಾಜು ಆರಂಭ246 ಭಾರ​ತೀ​ಯರು ಸೇರಿ​ದಂತೆ ಒಟ್ಟು 409 ಆಟ​ಗಾ​ರ್ತಿಯರು ಹರಾಜಿನಲ್ಲಿ ಭಾಗಿ5 ತಂಡಗಳು ಗರಿಷ್ಠ 90 ಆಟಗಾರ್ತಿಯರನ್ನು ಖರೀದಿಸಲು ಅವಕಾಶ

ಮುಂಬೈ(ಫೆ.13): ಬಹು​ನಿ​ರೀ​ಕ್ಷಿತ ವುಮೆನ್ಸ್‌ ಪ್ರೀಮಿ​ಯರ್‌ ಲೀಗ್‌​(​ಮ​ಹಿಳಾ ಐಪಿ​ಎ​ಲ್‌​)ನ ಹರಾ​ಜು ಪ್ರಕ್ರಿ​ಯೆ ಸೋಮ​ವಾರ ಮುಂಬೈ​ನಲ್ಲಿ ನಡೆ​ಯ​ಲಿದ್ದು, 246 ಭಾರ​ತೀ​ಯರು ಸೇರಿ​ದಂತೆ ಒಟ್ಟು 409 ಆಟ​ಗಾ​ರ್ತಿಯರು ವಿವಿಧ ತಂಡ​ಗ​ಳಿಗೆ ಬಿಕ​ರಿ​ಯಾ​ಗುವ ನಿರೀ​ಕ್ಷೆ​ಯ​ಲ್ಲಿ​ದ್ದಾರೆ.

ಪಟ್ಟಿ​ಯಲ್ಲಿ 163 ವಿದೇಶಿ ಆಟ​ಗಾರ್ತಿಯರ ಜೊತೆ​ಗೆ, 199 ಅಂತಾ​ರಾ​ಷ್ಟ್ರೀಯ ಪಂದ್ಯ​ವಾ​ಡ​ದ​ ಆಟ​ಗಾ​ರ್ತಿಯರೂ ಇದ್ದಾರೆ. ಟೂರ್ನಿಯ 5 ತಂಡ​ಗಳು ಹರಾ​ಜಿ​ನಲ್ಲಿ ಪಾಲ್ಗೊ​ಳ್ಳ​ಲಿದ್ದು ಕನಿಷ್ಠ 30 ವಿದೇ​ಶಿ​ಗರು ಸೇರಿ ಗರಿಷ್ಠ 90 ಆಟ​ಗಾ​ರ್ತಿಯರು ಬಿಕ​ರಿ​ಯಾ​ಗಬಹುದು. ಪ್ರತೀ ತಂಡ ಕನಿಷ್ಠ 15, ಗರಿಷ್ಠ 18 ಆಟಗಾರ್ತಿಯರನ್ನು ಖರೀದಿಸಿಬಹುದಾಗಿದ್ದು, ಗರಿಷ್ಠ 12 ಕೋಟಿ ರು. ಬಳ​ಸ​ಬ​ಹು​ದಾ​ಗಿ​ದೆ. 24 ಅಟಗಾ​ರ್ತಿ​ಯರು ಗರಿಷ್ಠ ಅಂದರೆ 50 ಲಕ್ಷ ರು. ಮೂಲ​ಬೆಲೆ, 30 ಅಟ​ಗಾ​ರ್ತಿ​ಯರು 40 ಲಕ್ಷ ರು. ಮೂಲ​ಬೆ​ಲೆಯ ಪಟ್ಟಿ​ಯ​ಲ್ಲಿ​ದ್ದಾರೆ.

ICC Womens T20 World Cup: ಜೆಮಿಮಾ ಸೂಪರ್‌ ಆಟ, ಪಾಕ್‌ ವಿರುದ್ಧ ಜಯ ಕಂಡ ಮಹಿಳಾ ಭಾರತ!

ಹರಾ​ಜು ಪಟ್ಟಿ​ಯಲ್ಲಿ 50 ಲಕ್ಷ ರು. ಮೂಲಬೆಲೆ ಹೊಂದಿ​ರುವ ಸ್ಮೃತಿ ಮಂಧನಾ, ಹರ್ಮ​ನ್‌​ಪ್ರೀತ್‌, ಶಫಾಲಿ, ಜೆಮಿಮಾ, ದೀಪ್ತಿ, ಅಲೀಸಾ ಹೀಲಿ, ಎಲೈಸಿ ಪೆರ್ರಿ, ಸೋಫಿ ಎಕ್ಲೆ​ಸ್ಟೋನ್‌ ಸೇರಿ​ದಂತೆ ಪ್ರಮು​ಖರು ಬಂಪರ್‌ ನಿರೀ​ಕ್ಷೆ​ಯ​ಲ್ಲಿ​ದ್ದಾ​ರೆ. ವೇದಾ ಕೃಷ್ಣ​ಮೂರ್ತಿ, ರಾಜೇ​ಶ್ವರಿ, ವೃಂದಾ ಸೇರಿ​ದಂತೆ ಕರ್ನಾ​ಟ​ಕದ 21 ಆಟ​ಗಾ​ರ್ತಿ​ಯರು ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ.

ಮಹಿಳಾ ಹರಾಜುಗಾರ್ತಿ!

ಮಹಿಳಾ ಐಪಿಎಲ್‌ನ ಹರಾಜು ಪ್ರಕ್ರಿಯೆಯನ್ನು ಮುಂಬೈ ಮೂಲದ ಮಲ್ಲಿಕಾ ಸಾಗರ್‌ ನಡೆಸಿಕೊಡಲಿದ್ದಾರೆ. ಪ್ರಸಿದ್ಧ ಕಲಾವಿದರ ಪೇಟಿಂಗ್‌ ಸೇರಿ ಹಲವು ಪ್ರಸಿದ್ಧ ಹರಾಜು ಪ್ರಕ್ರಿಯೆಗಳನ್ನು ನಡೆಸಿದ ಅನುಭವವಿರುವ ಮಲ್ಲಿಕಾ, ಕಳೆದ ಆವೃತ್ತಿ ಪ್ರೊ ಕಬಡ್ಡಿ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಹರಾಜುಗಾರ್ತಿಯಾಗಿ ಕಾಣಿಸಿಕೊಂಡಿದ್ದರು.

ಹರಾಜು ಆರಂಭ: ಮಧ್ಯಹ್ನ 2.30ಕ್ಕೆ
ನೇರ​ಪ್ರ​ಸಾ​ರ: ಸ್ಪೋರ್ಟ್ಸ್ 18, ಜಿಯೋ ಸಿನಿಮಾ

ಹರಾಜಿನ ಇಂಟ್ರೆಸ್ಟಿಂಗ್ ಅಂಕಿ-ಅಂಶ:

246 ಮಂದಿ: ಹರಾಜು ಪಟ್ಟಿ​ಯಲ್ಲಿರುವ ಒಟ್ಟು ಭಾರತೀಯ ಆಟಗಾರ್ತಿಯರು.

90 ಆಟಗಾರ್ತಿಯರು: ಗರಿಷ್ಠ 90 ಮಂದಿ 5 ತಂಡ​ಗ​ಳಿಗೆ ಹರಾ​ಜಾ​ಗ​ಬ​ಹು​ದು.

12 ಕೋಟಿ ರುಪಾಯಿ: ಪ್ರತಿ ತಂಡ ಹರಾ​ಜಿ​ನಲ್ಲಿ ಗರಿಷ್ಠ 12 ಕೋಟಿ ರು. ಬಳ​ಸ​ಬ​ಹು​ದು.

21 ಆಟಗಾರ್ತಿಯರು: ಹರಾಜಿನಲ್ಲಿ ಪಾಲ್ಗೊಳ್ಳಲಿರುವ ಕರ್ನಾಟಕದ ಆಟಗಾರ್ತಿಯರ ಸಂಖ್ಯೆ.