Asianet Suvarna News Asianet Suvarna News

WPL 2023: ಆರ್‌ಸಿಬಿಗಿಂದು ಮಾಡು ಇಲ್ಲವೇ ಮಡಿ ಪಂದ್ಯ, ಯುಪಿ ವಾರಿಯರ್ಸ್ ಮಣಿಸುತ್ತಾ ಬೆಂಗಳೂರು?

ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿಂದು ಆರ್‌ಸಿಬಿ-ಯುಪಿ ವಾರಿಯರ್ಸ್‌ ನಡುವೆ ಫೈಟ್
ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾದ ಸ್ಮೃತಿ ಮಂಧನಾ ಪಡೆ
ಈಗಾಗಲೇ ಹ್ಯಾಟ್ರಿಕ್ ಸೋಲು ಅನುಭವಿಸಿರುವ ಆರ್‌ಸಿಬಿ ತಂಡ

WPL 2023 WPL 2023 Smriti Mandhana led RCB take on UP Warriorz Challenge kvn
Author
First Published Mar 10, 2023, 10:15 AM IST

ಮುಂಬೈ(ಮಾ.10): ಸತತ 3 ಪಂದ್ಯ​ಗಳ ಸೋಲಿ​ನೊಂದಿಗೆ ಚೊಚ್ಚಲ ಆವೃ​ತ್ತಿಯ ವುಮೆನ್ಸ್‌ ಪ್ರೀಮಿ​ಯರ್‌ ಲೀಗ್‌​(​ಡ​ಬ್ಲ್ಯು​ಪಿ​ಎ​ಲ್‌​)​ನ ಪ್ಲೇ-ಆಫ್‌ ರೇಸ್‌ನಲ್ಲಿ ಹಿಂದೆ ಉಳಿದಿರುವ ಆರ್‌​ಸಿಬಿ ಶುಕ್ರ​ವಾರ ಮಾಡು ಇಲ್ಲವೇ ಮಡಿ ಪಂದ್ಯ​ದಲ್ಲಿ ಯುಪಿ ವಾರಿ​ಯ​ರ್ಸ್‌ ವಿರುದ್ಧ ಸೆಣಸಲಿದೆ. ಸ್ಮೃತಿ ಮಂಧನಾ ಪಡೆ ಟೂರ್ನಿ​ಯಲ್ಲಿ ಮೊದಲ ಗೆಲು​ವಿನ ನಿರೀ​ಕ್ಷೆ​ಯ​ಲ್ಲಿದ್ದು, ಈ ಪಂದ್ಯ​ದಲ್ಲೂ ಸೋತರೆ ಪ್ಲೇ-ಆಫ್‌ ರೇಸ್‌​ನಿಂದ ಬಹು​ತೇಕ ಹೊರ​ಬೀ​ಳ​ಲಿದೆ. 

ಆರ್‌​ಸಿಬಿ ಆಡಿದ ಮೂರೂ ಪಂದ್ಯ​ಗ​ಳಲ್ಲೂ ಬ್ಯಾಟಿಂಗ್‌​ನಲ್ಲಿ ಸಾಧಾ​ರ​ಣ ಪ್ರದ​ರ್ಶನ ನೀಡಿ​ದರೂ, ಬೌಲಿಂಗ್‌ ಹಾಗೂ ಫೀಲ್ಡಿಂಗ್‌​ನಲ್ಲಿ ಅತ್ಯಂತ ಕಳಪೆ ಪ್ರದ​ರ್ಶನ ತೋರಿದೆ. ಡೆಲ್ಲಿ, ಗುಜ​ರಾತ್‌ ವಿರುದ್ಧ ತಲಾ 200+ ರನ್‌ ಬಿಟ್ಟು​ಕೊ​ಟ್ಟಿ​ದ್ದರೆ, ಮುಂಬೈ ವಿರುದ್ಧ 14.2 ಓವ​ರಲ್ಲಿ 159 ರನ್‌ ಚಚ್ಚಿ​ಸಿ​ಕೊಂಡಿ​ತ್ತು. ಈ ಪಂದ್ಯ​ದಲ್ಲೂ ಬೌಲಿಂಗ್‌ ಸಮಸ್ಯೆಗೆ ಪರಿ​ಹಾರ ಕಂಡು​ಕೊ​ಳ್ಳ​ದಿ​ದ್ದರೆ ಮತ್ತೊಂದು ಸೋಲು ಕಟ್ಟಿಟ್ಟಬುತ್ತಿ. ಮತ್ತೊಂದೆಡೆ ಯುಪಿ 2ನೇ ಜಯದ ತವ​ಕ​ದ​ಲ್ಲಿ​ದೆ.

ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಎದುರು ಆರ್‌ಸಿಬಿ ತಂಡವು 60 ರನ್‌ಗಳ ಸೋಲು ಅನುಭವಿಸಿತ್ತು. ಇದಾದ ಬಳಿಕ ಎರಡನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಎದುರು ಆರ್‌ಸಿಬಿ 9 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿತ್ತು. ಇನ್ನು ಗುಜರಾತ್ ಜೈಂಟ್ಸ್‌ ಎದುರು ಪ್ರಬಲ ಹೋರಾಟ ನಡೆಸಿತಾದರೂ, 11 ರನ್‌ಗಳ ರೋಚಕ ಸೋಲು ಅನುಭವಿಸುವ ಮೂಲಕ ಹ್ಯಾಟ್ರಿಕ್ ಸೋಲು ಅನುಭವಿಸಿತ್ತು.

PL 2023 ಮುಂಬೈ ಅಬ್ಬರಕ್ಕೆ ಡೆಲ್ಲಿ ಗಲಿಬಿಲಿ, ಕೌರ್ ಪಡೆದ ಹ್ಯಾಟ್ರಿಕ್ ಜಯ!

ಆರ್‌ಸಿಬಿ ತಂಡದ ಪರ ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಸಂಘಟಿತ ಪ್ರದರ್ಶನ ತೋರಿತ್ತು. ನಾಯಕಿ ಸ್ಮೃತಿ ಮಂಧನಾ, ತಮಗೆ ಸಿಕ್ಕ ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲು ವಿಫಲವಾಗಿತ್ತು. ಆರಂಭಿಕ ಬ್ಯಾಟರ್ ಸೋಫಿ ಡಿವೈನ್ ಕಳೆದ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಚಚ್ಚಿದ್ದರು. ಇನ್ನು ಎಲೈಸಿ ಪೆರ್ರಿ ಹಾಗೂ ಹೀಥರ್ ನೈಟ್‌ ಕೂಡಾ ಚುರುಕಿನ ಬ್ಯಾಟಿಂಗ್ ನಡೆಸಿದ್ದರು. ಆದರೆ ತಂಡದ ಬೌಲಿಂಗ್ ಕಳೆದ ಮೂರು ಪಂದ್ಯಗಳಲ್ಲೂ ಸಾಕಷ್ಟು ದುಬಾರಿ ಎನಿಸಿಕೊಳ್ಳುತ್ತಿದೆ.

ಆರ್‌ಸಿಬಿ ತಂಡದ ಎಲೈಸಿ ಪೆರ್ರಿ, ಪ್ರೀತಿ ಬೋಸ್ ಹಾಗೂ ಮೆಘನ್ ಶುಟ್‌ ಕೂಡಾ ಸಾಕಷ್ಟು ದುಬಾರಿಯಾಗುತ್ತಿರುವುದು ತಂಡದ ತಲೆನೋವು ಹೆಚ್ಚುವಂತೆ ಮಾಡಿದೆ. ಬೌಲರ್‌ಗಳು ಜವಾಬ್ದಾರಿಯುತ ಪ್ರದರ್ಶನ ತೋರಿದರೆ ಮಾತ್ರ, ಯುಪಿ ವಾರಿಯರ್ಸ್‌ ಎದುರು ಮೊದಲ ಗೆಲುವು ದಾಖಲಿಸಲು ಸಾಧ್ಯ.

ಸಂಭಾವ್ಯ ತಂಡ ಹೀಗಿವೆ ನೋಡಿ:

ರಾಯಲ್ ಚಾಲೆಂಜರ್ಸ್‌ ಬೆಂಗಳೂರು:

ಸ್ಮೃತಿ ಮಂಧನಾ(ನಾಯಕಿ), ಸೋಫಿ ಡಿವೈನ್, ಎಲೈಸಿ ಪೆರ್ರಿ, ಹೀಥರ್ ನೈಟ್‌, ರಿಚಾ ಘೋಷ್(ವಿಕೆಟ್ ಕೀಪರ್), ಪೂನಂ ಖಮ್ನರ್, ಕನಿಕಾ ಅಹುಜಾ, ಶ್ರೇಯಾಂಕ ಪಾಟೀಲ್, ಮೆಘನ್ ಶುಟ್, ರೇಣುಕಾ ಠಾಕೂರ್ ಸಿಂಗ್, ಪ್ರೀತಿ ಬೋಸ್.

ಯುಪಿ ವಾರಿಯರ್ಸ್:

ಅಲಿಸಾ ಹೀಲಿ(ನಾಯಕಿ&ವಿಕೆಟ್ ಕೀಪರ್), ಶ್ವೇತಾ ಸೆಹ್ರಾವತ್, ಕಿರಣ್ ನವ್ಗಿರೆ, ತಾಹಿಲಾ ಮೆಗ್ರಾಥ್, ದೀಪ್ತಿ ಶರ್ಮಾ, ಸಿಮ್ರನ್ ಶೇಖ್, ದೇವಿಕಾ ವೈದ್ಯ, ಸೋಫಿ ಎಕ್ಲೆಸ್ಟೋನ್, ಶಬ್ನಿಮ್‌ ಇಸ್ಮಾಯಿಲ್, ಅಂಜಲಿ ಶರ್ವಾನಿ, ರಾಜೇಶ್ವರಿ ಗಾಯಕ್ವಾಡ್.

ಪಂದ್ಯ: ಸಂಜೆ 7.30ಕ್ಕೆ
ನೇರ​ಪ್ರ​ಸಾ​ರ: ಸ್ಪೋರ್ಟ್ಸ್ 18, ಜಿಯೋ ಸಿನೆ​ಮಾ

Follow Us:
Download App:
  • android
  • ios