Asianet Suvarna News Asianet Suvarna News

ಮಹಿಳಾ ಏಷ್ಯಾಕಪ್‌ ಕ್ರಿಕೆಟ್‌: ಜುಲೈ 19ರಂದು ಭಾರತ vs ಪಾಕ್‌ ಕಾದಾಟ

ಜು.19ರಿಂದ 28ರ ವರೆಗೂ ಶ್ರೀಲಂಕಾದ ದಾಂಬುಲಾದಲ್ಲಿ ಟೂರ್ನಿ ನಡೆಯಲಿದ್ದು 8 ತಂಡಗಳು ಪಾಲ್ಗೊಳ್ಳಲಿವೆ. ತಲಾ 4 ತಂಡಗಳನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಲಾಗಿದ್ದು, ಗುಂಪಿನಲ್ಲಿ ಅಗ್ರ-2 ಸ್ಥಾನಗಳನ್ನು ಪಡೆಯುವ ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿವೆ.

Womens Asia Cup 2024 India to play Pakistan in opener as revised schedule announced kvn
Author
First Published Jun 26, 2024, 11:16 AM IST

ನವದೆಹಲಿ: ಹಾಲಿ ಚಾಂಪಿಯನ್‌ ಭಾರತ ಜು.19ರಂದು ಮಹಿಳಾ ಏಷ್ಯಾಕಪ್‌ ಟಿ20 ಕ್ರಿಕೆಟ್‌ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಬದ್ಧವೈರಿ ಪಾಕಿಸ್ತಾನ ವಿರುದ್ಧ ಸೆಣಸಲಿದೆ. ಏಷ್ಯಾ ಕ್ರಿಕೆಟ್‌ ಸಮಿತಿಯು ಮಂಗಳವಾರ ಟೂರ್ನಿಯ ವೇಳಾಪಟ್ಟಿಯನ್ನು ಪ್ರಕಟಿಸಿತು.

ಜು.19ರಿಂದ 28ರ ವರೆಗೂ ಶ್ರೀಲಂಕಾದ ದಾಂಬುಲಾದಲ್ಲಿ ಟೂರ್ನಿ ನಡೆಯಲಿದ್ದು 8 ತಂಡಗಳು ಪಾಲ್ಗೊಳ್ಳಲಿವೆ. ತಲಾ 4 ತಂಡಗಳನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಲಾಗಿದ್ದು, ಗುಂಪಿನಲ್ಲಿ ಅಗ್ರ-2 ಸ್ಥಾನಗಳನ್ನು ಪಡೆಯುವ ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿವೆ.

ಭಾರತ, ಪಾಕಿಸ್ತಾನ, ಯುಎಇ ಹಾಗೂ ನೇಪಾಳ ಒಂದು ಗುಂಪಿನಲ್ಲಿದ್ದರೆ, ಮತ್ತೊಂದು ಗುಂಪಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ಥಾಯ್ಲೆಂಡ್‌ ಹಾಗೂ ಮಲೇಷ್ಯಾ ತಂಡಗಳಿವೆ. ಭಾರತ ಜು.21ರಂದು ಯುಎಇ ಹಾಗೂ ಜು.23ರಂದು ನೇಪಾಳ ವಿರುದ್ಧ ಸೆಣಸಲಿದೆ. ಜು.26ರಂದು ಸೆಮಿಫೈನಲ್‌ ಪಂದ್ಯಗಳು ನಡೆಯಲಿದ್ದು, ಜು.28ಕ್ಕೆ ಫೈನಲ್‌ ನಿಗದಿಯಾಗಿದೆ.

ಟೂರ್ನಿಯಲ್ಲಿ ಕಾರ್ಯನಿರ್ವಹಿಸಲಿರುವ ಎಲ್ಲಾ ಅಧಿಕಾರಿಗಳು (ಅಂಪೈರ್‌, ರೆಫ್ರಿ) ಮಹಿಳೆಯರೇ ಆಗಿರಲಿದ್ದಾರೆ ಎನ್ನುವುದು ವಿಶೇಷ. 2012ರಲ್ಲಿ ಆರಂಭಗೊಂಡಿದ್ದ ಟೂರ್ನಿಯು ಟಿ20 ಮಾದರಿಯಲ್ಲೇ ನಡೆದುಕೊಂಡು ಬಂದಿದ್ದು, ಭಾರತ 7 ಬಾರಿ ಪ್ರಶಸ್ತಿ ಗೆದ್ದು ಟೂರ್ನಿಯ ಅತ್ಯಂತ ಯಶಸ್ವಿ ತಂಡ ಎನಿಸಿದೆ.

ಆಂಧ್ರಕ್ರಿಕೆಟ್ ತಂಡದಲ್ಲೇ ಇರಲು ವಿಹಾರಿ ನಿರ್ಧಾರ

ವಿಶಾಖಪಟ್ಟಣಂ: ಆಡಳಿತ ಪಕ್ಷ ಟಿಡಿಪಿಯಿಂದ ಸಂಪೂರ್ಣ ಬೆಂಬಲ ಭರವಸೆ ದೊರೆತ ಕಾರಣ ದೇಸಿ ಕ್ರಿಕೆಟ್‌ನಲ್ಲಿ ಆಂಧ್ರ ತಂಡವನ್ನೇ ಪ್ರತಿನಿಧಿಸಲು ತಾರಾ ಕ್ರಿಕೆಟಿಗ ಹನುಮ ವಿಹಾರಿ ನಿರ್ಧರಿಸಿದ್ದಾರೆ. ಮಂಗಳವಾರ ವಿಹಾರಿ, ಟಿಡಿಪಿ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್‌ ಹಾಗೂ ಡಿಸಿಎಂ, ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್‌ರನ್ನು ಭೇಟಿಯಾಗಿ ಚರ್ಚಿಸಿದರು. 

ಈ ಹಿಂದಿನ ಸರ್ಕಾರವಿದ್ದಾಗ ವಿಹಾರಿ ರಾಜಕಾರಣಿಯೊಬ್ಬರ ಮಗನ ಜೊತೆ ಕಿತ್ತಾಡಿಕೊಂಡ ಕಾರಣ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. ಬಳಿಕ ವಿಹಾರಿ ಆಂಧ್ರ ತಂಡ ತೊರೆದು ಮಧ್ಯಪ್ರದೇಶ ತಂಡದ ಪರ ಆಡಲು ಮುಂದಾಗಿದ್ದರು.
 

Latest Videos
Follow Us:
Download App:
  • android
  • ios