ಮಹಿಳಾ ಏಷ್ಯಾಕಪ್: ಇಂದು ಭಾರತ & ಲಂಕಾ ಫೈನಲ್

ದಾಖಲೆಯ 8ನೇ ಟ್ರೋಫಿ ಮೇಲೆ ಭಾರತದ ಕಣ್ಣು, 6ನೇ ಬಾರಿ ಫೈನಲ್ ಆಡುತ್ತಿರುವ ಶ್ರೀಲಂಕಾ ತಂಡಕ್ಕೆ ಚೊಚ್ಚಲ ಕಪ್ ಗುರಿ

Womens Asia Cup 2024 Defending Champion India faces Sri Lanka in final eyes eighth title kvn

ದಾಂಬುಲಾ: ಮಹಿಳಾ ಏಷ್ಯಾಕಪ್‌ನಲ್ಲಿ ದಾಖಲೆಯ 8ನೇ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಟೀಂ ಇಂಡಿಯಾ, ಭಾನುವಾರ 9ನೇ ಆವೃತ್ತಿ ಫೈನಲ್‌ನಲ್ಲಿ ಆತಿಥೇಯ ಶ್ರೀಲಂಕಾ ವಿರುದ್ಧ ಸೆಣಸಾಡಲಿದೆ. ಲಂಕಾ ತಂಡ ಚೊಚ್ಚಲ ಬಾರಿ ಚಾಂಪಿಯನ್ ಎನಿಸಿಕೊಳ್ಳುವ ಕಾತರದಲ್ಲಿದೆ.

ಟೂರ್ನಿಯುದ್ದಕ್ಕೂಎದುರಾಳಿ ತಂಡಗಳ ಮೇಲೆ ಪ್ರಾಬಲ್ಯ ಸಾಧಿಸಿರುವ ಭಾರತ 'ಎ' ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ನಾಕೌಟ್‌ಗೇರಿತ್ತು. ಸೆಮಿಫೈನಲ್‌ನಲ್ಲಿ 2018ರ ಚಾಂಪಿಯನ್ ಬಾಂಗ್ಲಾದೇಶವನ್ನು ಸೋಲಿಸಿ ಫೈನಲ್‌ಗೇರಿದೆ. ಅತ್ತ ಲಂಕಾ ಕೂಡಾ 'ಬಿ' ಗುಂಪಿನ ಎಲ್ಲಾ 3 ಪಂದ್ಯಗಳಲ್ಲಿ ಗೆದ್ದು, ಸೆಮಿಫೈನಲ್‌ನಲ್ಲಿ ಪಾಕಿಸ್ತಾನಕ್ಕೆ ಸೋಲುಣಿಸಿತ್ತು.

ಮೊದಲ ಟಿ20: ಭಾರತದ ಅಬ್ಬರಕ್ಕೆ ಮಣಿದ ಲಂಕಾ

ಭಾರತ 2004ರಿಂದ ಈ ವರೆಗೂ ಎಲ್ಲಾ9 ಆವೃತ್ತಿಗಳಲ್ಲೂ ಫೈನಲ್‌ಗೇರಿದೆ. ಈ ಹಿಂದಿನ 8 ಆವೃತ್ತಿಗಳ ಪೈಕಿ 7ರಲ್ಲಿ ಚಾಂಪಿಯನ್ ಆಗಿದೆ. 2008ರಲ್ಲಿ ಮಾತ್ರ ಬಾಂಗ್ಲಾದೇಶ ವಿರುದ್ಧ ಸೋತು ಟ್ರೋಫಿ ತಪ್ಪಿಸಿಕೊಂಡಿತ್ತು. ಹೀಗಾಗಿ ಈ ಬಾರಿಯೂ ಭಾರತವೇ ಟ್ರೋಫಿ ಗೆಲ್ಲುವ ಫೇವರಿಟ್ ಎನಿಸಿಕೊಂಡಿದೆ. ಅತ್ತ ಲಂಕಾ ತಂಡ 6ನೇ ಪ್ರಯತ್ನ ದಲ್ಲಾದರೂ ಭಾರತವನ್ನು ಫೈನಲ್‌ನಲ್ಲಿ ಸೋಲಿಸಿ ಚೊಚ್ಚಲ ಪ್ರಶಸ್ತಿ ಎತ್ತಿ ಹಿಡಿಯುವ ಕಾತರದಲ್ಲಿದೆ.

ಪಂದ್ಯ: ಮಧ್ಯಾಹ್ನ 3 ಗಂಟೆಗೆ 
ನೇರಪ್ರಸಾರ: ಸ್ಟಾರ್‌ಸ್ಟೋರ್ಟ್ಸ್, ಹಾಟ್‌ಸ್ಟಾರ್

5 ಬಾರಿ ಫೈನಲ್‌ನಲ್ಲೂ ಸೋಲು

ಶ್ರೀಲಂಕಾ ತಂಡ ಈ ವರೆಗೂ ಮಹಿಳಾ ಏಷ್ಯಾಕಪ್‌ನಲ್ಲಿ 5 ಬಾರಿ ಫೈನಲ್‌ನಲ್ಲಿ ಆಡಿದೆ. ಆದರೆ 5 ಬಾರಿಯೂ ಸೋಲನುಭವಿಸಿದೆ. ಎಲ್ಲಾ ಬಾರಿಯೂ ಭಾರತದ ವಿರುದ್ಧ ಸೋತಿರುವುದು ವಿಶೇಷ. ತಂಡ 2004, 2005, 2006, 2008 ಹಾಗೂ 2022ರಲ್ಲಿ ಫೈನಲ್‌ನಲ್ಲಿ ಸೋತಿದೆ. 
 

Latest Videos
Follow Us:
Download App:
  • android
  • ios