ಮುಂಬೈ(ಜ.23): ಕಳೆದ ತಿಂಗಳಷ್ಟೇ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿರುವ ಪಾರ್ಥಿವ್‌ ಪಟೇಲ್‌ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ರಿಲೀಸ್‌ ಮಾಡಿದೆ. ಇದರ ಬೆನ್ನಲ್ಲೇ ಪಾರ್ಥಿವ್ ಪಟೇಲ್‌ ಆರ್‌ಸಿಬಿ ತಂಡದ ಕಾಲೆಳೆದಿದ್ದಾರೆ.

ಪಾರ್ಥಿವ್ ಪಟೇಲ್‌ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡವಾಗಲಿ ಅಥವಾ ಇನ್ಯಾವುದೇ ತಂಡವನ್ನು ಪ್ರತಿನಿಧಿಸುವುದಿಲ್ಲ ಎಲ್ಲರಿಗೂ ತಿಳಿದ ವಿಚಾರವೇ ಆಗಿತ್ತು. 35 ವರ್ಷದ ಪಟೇಲ್‌ ಕಳೆದ ಡಿಸೆಂಬರ್‌ನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಹೀಗಿದ್ದೂ ಆರ್‌ಸಿಬಿ ರಿಲೀಸ್‌ ಮಾಡಿದ ಪಟ್ಟಿಯಲ್ಲಿ ಟೀಂ ಇಂಡಿಯಾ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಪಾರ್ಥಿವ್ ಪಟೇಲ್‌ ಅವರ ಹೆಸರನ್ನು ಉಲ್ಲೇಕಿಸಲಾಗಿತ್ತು. ಇದರ ಬೆನ್ನಲ್ಲೇ ಪಾರ್ಥಿವ್ ಪಟೇಲ್‌ ಟ್ವೀಟ್‌ ಮಾಡಿದ್ದಾರೆ.

ಕೊಹ್ಲಿ, ಎಬಿಡಿ, ಪಡಿಕ್ಕಲ್; 12 ಆಟಗಾರರ ಉಳಿಸಿಕೊಂಡು, 10 ಮಂದಿಗೆ ಗೇಟ್‌ಪಾಸ್ ನೀಡಿದ RCB!

ನಾನು ನಿವೃತ್ತಿಯಾದ ಬಳಿಕ ನನ್ನನ್ನು ತಂಡದಿಂದ ಬಿಡುಗಡೆ ಮಾಡುತ್ತಿರುವುದು ನನಗೆ ಸಿಕ್ಕ ಅತ್ಯದ್ಭುತ ಗೌರವವಾಗಿದೆ. ಧನ್ಯವಾದಗಳು ಆರ್‌ಸಿಬಿ ಎಂದು ಪಾರ್ಥಿವ ಪಟೇಲ್ ಟ್ವೀಟ್‌ ಮಾಡಿದ್ದಾರೆ.

ಪಾರ್ಥಿವ್ ಪಟೇಲ್ 2018ರಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸದಸ್ಯರಾಗಿದ್ದರು. 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಾಡಲು ಯುಎಇಗೆ ತೆರಳಿದ್ದರು. ಆದರೆ ಒಂದೇ ಒಂದು ಪಂದ್ಯವನ್ನು ಪಟೇಲ್‌ ಆಡಿರಲಿಲ್ಲ. ಇದೀಗ ಮೊಯಿನ್ ಅಲಿ, ಶಿವಂ ದುಬೆ, ಆರೋನ್ ಫಿಂಚ್ ಜತೆ ಪಾರ್ಥಿವ್ ಪಟೇಲ್‌ ಅವರನ್ನು ಆರ್‌ಸಿಬಿ ರಿಲೀಸ್‌ ಮಾಡಿದೆ.

ಆರ್‌ಸಿಬಿಗೆ ಗುಡ್‌ ಬೈ ಹೇಳಿ ಮುಂಬೈ ಇಂಡಿಯನ್ಸ್ ಕೂಡಿಕೊಂಡ ಸ್ಟಾರ್ ಆಟಗಾರ..!

ಆರ್‌ಸಿಬಿಗೆ ಗುಡ್‌ಬೈ ಹೇಳಿದ ಬೆನ್ನಲ್ಲೇ ಪಾರ್ಥಿವ್ ಪಟೇಲ್‌ ಮುಂಬೈ ಇಂಡಿಯನ್ಸ್‌ ಪಡೆಯನ್ನು ಕೂಡಿಕೊಂಡಿದ್ದು, ಟಾಲೆಂಟ್ ಸ್ಕೌಟ್‌ ಆಗಿ ನೇಮಕವಾಗಿದ್ದಾರೆ. ಮುಂಬೈ ತಂಡಕ್ಕೆ ಪ್ರತಿಭಾನ್ವಿತ ಆಟಗಾರರನ್ನು ಹುಡುಕಿಕೊಡುವ ಮಹತ್ತರವಾದ ಜವಾಬ್ದಾರಿಯನ್ನು ಮುಂಬೈ ಫ್ರಾಂಚೈಸಿ ಪಾರ್ಥಿವ್ ಪಟೇಲ್‌ಗೆ ನೀಡಿದೆ.