ದ್ವಿತೀಯ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 311 ರನ್ ಸಿಡಿಸಿದೆ. ಬೃಹತ್ ಮೊತ್ತ ಟಾರ್ಗೆಟ್ ಪಡೆದಿರುವ ಟೀಂ ಇಂಡಿಯಾ ಯಶಸ್ವಿಯಾಗಿ ಚೇಸ್ ಮಾಡುವ ವಿಶ್ವಾಸದಲ್ಲಿದೆ.

ಟ್ರಿನಿಡ್ಯಾಡ್(ಜು.24): ಶೈ ಹೋಪ್ ಭರ್ಜರಿ ಸೆಂಚುರಿ ಹಾಗೂ ನಿಕೋಲಸ್ ಪೂರನ್ ಹಾಫ್ ಸೆಂಚುರಿ ನೆರವಿನಿಂದ ವೆಸ್ಟ್ ಇಂಡೀಸ್ 6 ವಿಕೆಟ್ ನಷ್ಟಕ್ಕೆ 311 ರನ್ ಸಿಡಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ವೆಸ್ಟ್ ಇಂಡೀಸ್ ಉತ್ತಮ ಆರಂಭ ಪಡೆಯಿತು. ಶೈ ಹೋಪ್ ಹಾಗೂ ಕೈಲ್ ಮೇಯರ್ಸ್ ಹೋರಾಟ ಟೀಂ ಇಂಡಿ ಇಂಡಿಯಾಗೆ ಆರಂಭದಲ್ಲೇ ತಲೆನೋವು ಹೆಚ್ಚಿಸಿತು. ಆರಂಭಿಕರು ಮೊದಲ ವಿಕೆಟ್‌ಗೆ 65 ರನ್ ಜೊತೆಯಾಟ ನೀಡಿದರು. ಕೈಲ್ ಮೇಯರ್ಸ್ 39 ರನ್ ಸಿಡಿಸಿ ಔಟಾದರು. ಆದರೆ ಹೋಪ್ ವಿಂಡೀಸ್ ತಂಡಕ್ಕೆ ಆಸರೆಯಾದರು. ಶ್ಯಮ್ರಾ ಬ್ರೂಕ್ಸ್ ಜೊತೆ ಇನ್ನಿಂಗ್ಸ್ ಮುಂದುವರಿಸಿದ ಶೈ ಹೋಪ್ ಮತ್ತೆ ಅಬ್ಬರಸಲು ಆರಂಭಿಸಿದರು. ಇದರಿಂದ ವಿಂಡೀಸ್ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿತು.

ಬೂಕ್ಸ್ 35 ರನ್ ಸಿಡಿಸಿ ಔಟಾದದರು. ಇದರ ಬೆನ್ನಲ್ಲೇ ಬ್ರ್ಯಾಂಡನ್ ಕಿಂಗ್ ಡಕೌಟ್ ಆದರು. 130ರನ್‌ಗೆ ವಿಂಡೀಸ್ 3ನೇ ವಿಕೆಟ್ ಕಳೆದುಕೊಂಡಿತು. ಆದರೆ ಶೈ ಹೋಪ್ ಹಾಗೂ ನಾಯಕ ನಿಕೋಲಸ್ ಪೂರನ್ ಹೋರಾಟದಿಂದ ವೆಸ್ಟ್ ಇಂಡೀಸ್ ಯಾವುದೇ ಅಡೆ ತಡೆ ಇಲ್ಲದೆ ರನ್ ಕಲೆಹಾಕಿತು. ಇತ್ತ ಪೂರನ್ ಅರ್ಧಶತಕ ಸಿಡಿಸಿದರು. 

ಶೈ ಹೋಪ್ ಹಾಗೂ ಪೂರನ್ ಬ್ಯಾಟಿಂಗ್ ಅಬ್ಬರದಿಂದ ವೆಸ್ಟ್ ಇಂಡೀಸ್ 300 ರನ್ ಗಡಿಯತ್ತ ದಾಪುಗಾಲಿಟ್ಟಿತು. ಶೈ ಹೋಪ್ ಆಕರ್ಷಕ ಸೆಂಚುರಿ ಸಿಡಿಸಿ ಮಿಂಚದರು. ಪೂರನ್ 74 ರನ್ ಸಿಡಿಸಿ ಔಟಾದರು. ಇತ್ತ ರೋವ್ಮನ್ ಪೊವೆಲ್ 13 ರನ್ ಸಿಡಿಸಿ ಔಟಾದರು. ಇತ್ತ ರೋಮಾರಿಯೋ ಅಜೇಯ ಶೆಫರ್ಡ್ 15 ರನ್ ಸಿಡಿಸಿದರು. ಸೆಂಚುರಿ ಸಿಡಿಸಿ ಅಬ್ಬರಿಸಿದ ಶೈ ಹೋಪ್ 115 ರನ್ ಕಾಣಿಕೆ ನೀಡಿದರು. ಅಕೆಲ್ ಹುಸೈನ್ ಅಜೇಯ 6 ರನ್ ಸಿಡಿಸಿದರು. ಈ ಮೂಲಕ ವೆಸ್ಟ್ ಇಂಡೀಸ್ 6 ವಿಕೆಟ್ ನಷ್ಟಕ್ಕೆ 311 ರನ್ ಸಿಡಿಸಿತು.