ಜಮೈಕ(ಜೂ.01): ವೆಸ್ಟ್ ಇಂಡೀಸ್ ಸ್ಪೋಟಕ ಬ್ಯಾಟ್ಸ್‌ಮನ್‌ ನಿಕೋಲಸ್‌ ಪೂರನ್ ತಮ್ಮ ಬಹುಕಾಲದ ಗೆಳತಿ ಅಲೇಸಾ ಮಿಗುಲ್‌ ಜತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. 2020ರ ಐಪಿಎಲ್ ಟೂರ್ನಿ ಮುಗಿದ ಬೆನ್ನಲ್ಲೇ ಪೂರನ್‌ ಹಾಗೂ ಮಿಗುಲ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಯುಎಇನಲ್ಲಿ ನಡೆದ 13ನೇ ಆವೃತ್ತಿಯ ಐಪಿಎಲ್ ಟೂನಿಯಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್(ಈಗ ಪಂಜಾಬ್ ಕಿಂಗ್ಸ್‌) ತಂಡವನ್ನು ಪ್ರತಿನಿಧಿಸಿದ್ದ ನಿಕೋಲಸ್ ಪೂರನ್ ತಮ್ಮ ವಿಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದರು. ಪಂಜಾಬ್‌ ತಂಡ ಪ್ಲೇ ಆಫ್‌ ಪ್ರವೇಶಿಸದಿದ್ದರೂ, ಪೂರನ್ ಬ್ಯಾಟಿಂಗ್ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇದರ ಬೆನ್ನಲ್ಲೇ ಪೂರನ್ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು.

ಐಪಿಎಲ್ 2021: ಮತ್ತೆ ಅಬ್ಬರಿಸುವ ಮುನ್ಸೂಚನೆ ಕೊಟ್ಟ ನಿಕೋಲಸ್ ಪೂರನ್

ಇದೀಗ ನಿಕೋಲಸ್ ಪೂರನ್ ಟ್ವೀಟ್‌ ಮಾಡುವ ಮೂಲಕ ತಮ್ಮ ವಿವಾಹವನ್ನು ಬಹಿರಂಗ ಪಡಿಸಿದ್ದಾರೆ. ನನ್ನ ಜೀವನದಲ್ಲಿ ಜೀಸಸ್‌ ಹಲವಾರು ಒಳ್ಳೆಯ ಕ್ಷಣಗಳನ್ನು ಕರುಣಿಸಿದ್ದಾನೆ. ಅದೆಲ್ಲದರಕ್ಕಿಂತ ಮಿಗಿಲಾದದ್ದು ಎಂದರೆ ನೀನು ನನ್ನ ಜೀವನ ಸಂಗಾತಿಯಾದದ್ದು. ಹೊಸ ಜೀವನಕ್ಕೆ ಸ್ವಾಗತ ಎಂದು ನಿಕೋಲಸ್ ಪೂರನ್ ಟ್ವೀಟ್ ಮಾಡಿದ್ದಾರೆ.

14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ನಿಕೋಲಸ್ ಪೂರನ್‌ ಸಾಕಷ್ಟು ನಿರೀಕ್ಷೆಯೊಂದಿಗೆ ಪಂಜಾಬ್‌ ಕಿಂಗ್ಸ್ ತಂಡದ ಪರ ಆಡಲಿಳಿದಿದ್ದರು. ಆದರೆ ಈ ಆವೃತ್ತಿಯಲ್ಲಿ ಪೂರನ್‌ ಬ್ಯಾಟಿಂದ ನಿರೀಕ್ಷಿತ ರನ್‌ ಹರಿದು ಬಂದಿರಲಿಲ್ಲ. ಈ ಆವೃತ್ತಿಯಲ್ಲಿ 7 ಪಂದ್ಯಗಳನ್ನಾಡಿ ಕೇವಲ 28 ರನ್‌ ಗಳನ್ನಷ್ಟೇ ಪೂರನ್ ಬಾರಿಸಿದ್ದರು.