ಕರಾಚಿ(ಏ.18): ಭಾರತದಲ್ಲಿ ಈ ವರ್ಷಾಂತ್ಯದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ ಈಗಿನಿಂದಲೇ ಸಿದ್ದತೆ ನಡೆಸುತ್ತಿರುವುದಾಗಿ ಪಾಕಿಸ್ತಾನ ತಂಡದ ನಾಯಕ ಬಾಬರ್‌ ಅಜಂ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ದದ ಸೀಮಿತ ಓವರ್‌ಗಳ ಸರಣಿಯನ್ನು ಜಯಿಸಿದ ಬಳಿಕ ಮಾತನಾಡಿದ ಬಾಬರ್ ಅಜಂ, ಈ ಸರಣಿಯು ಡಿಫರೆಂಟ್‌ ಕಾಂಬಿನೇಷನ್‌ನೊಂದಿಗೆ ಆಡಲು ಅನುಕೂಲವಾಯಿತು. ಈ ಮೂಲಕ ಈ ಟಿ20 ವಿಶ್ವಕಪ್‌ ಟೂರ್ನಿಗೆ ಸರಿಯಾಗಿಯೇ ಸಿದ್ದತೆ ನಡೆಸುತ್ತಿದ್ದೇವೆ ಎಂದು ಅಜಂ ಹೇಳಿದ್ದಾರೆ.

ನಮ್ಮ ಮಧ್ಯಮ ಹಾಗೂ ಕೆಳ ಮಧ್ಯಮ ಕ್ರಮಾಂಕ ನಿರೀಕ್ಷೆಗೆ ತಕ್ಕಂತೆ ಬ್ಯಾಟಿಂಗ್ ಪ್ರದರ್ಶನ ನೀಡಲಿಲ್ಲ. ಕ್ರಿಕೆಟ್‌ ಒಂದು ಟೀಂ ಗೇಮ್‌ ಆಗಿದ್ದು, ಎಲ್ಲರೂ ಎಲ್ಲಾ ಮ್ಯಾಚ್ ಆಡಬೇಕೆಂದಿಲ್ಲ. ತಂಡವಾಗಿ ದಕ್ಷಿಣ ಆಫ್ರಿಕಾ ವಿರುದ್ದ ನಾವು ಉತ್ತಮ ಪ್ರದರ್ಶನ ತೋರಿದ ಸಮಾಧಾನವಿದೆ ಎಂದು 26 ವರ್ಷದ ಅಜಂ ಹೇಳಿದ್ದಾರೆ. 

ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ ಜಯಿಸಿದ ಪಾಕಿಸ್ತಾನ

ದಕ್ಷಿಣ ಆಫ್ರಿಕಾ ವಿರುದ್ದ 3 ಪಂದ್ಯಗಳ ಏಕದಿನ ಸರಣಿಯನ್ನು ಪಾಕಿಸ್ತಾನ 2-1 ಅಂತರದಿಂದ ಜಯಿಸಿತ್ತು. ಇದಾದ ಬಳಿಕ 4 ಪಂದ್ಯಗಳ ಟಿ20 ಸರಣಿಯನ್ನು ಪಾಕಿಸ್ತಾನ 3-1  ಅಂತರದಲ್ಲಿ ಜಯಿಸಿ ಆಫ್ರಿಕಾ ಪ್ರವಾಸವನ್ನು ಅತ್ಯಂತ ಫಲಪ್ರದವಾಗಿ ಮುಗಿಸಿತ್ತು.