ಮ್ಯಾಟ್ ಹೆನ್ರಿ ಇವತ್ತು ವಿರಾಟ್ ಕೊಹ್ಲಿ ಅವರನ್ನು ಶೂನ್ಯಕ್ಕೆ ಔಟ್ ಮಾಡಿದ್ರು. ಅಷ್ಟೇ ಅಲ್ಲ ಟೀಂ ಇಂಡಿಯಾದ 6 ವಿಕೆಟ್ ಕಿತ್ತು ಹೆಮ್ಮೆಯಿಂದ ಬೀಗುವಂತೆ ಮಾಡಿದರು. ಆದರೆ ಕೊಹ್ಲಿ ಎದುರು ಬಂದಾಗ ಕೈಕಟ್ಟಿ ನಿಂತರು. ನಂತರ ಕೊಹ್ಲಿ ಮತ್ತು ಹೆನ್ರಿ ನಡುವೆ ಏನು ನಡೀತು ಗೊತ್ತಾ? ಈ ಸ್ಟೋರಿ ಓದಿ.
ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯವು ಇವತ್ತು ನಡೆಯಿತು. ಈ ಪಂದ್ಯದಲ್ಲಿ ಟೀಂ ಇಂಡಿಯಾ 244 ರನ್ಗಳ ಹೀನಾಯ ಸೋಲನ್ನ ಕಂಡಿತು. ಅತಿ ದೊಡ್ಡ ಸೋಲಿಗೆ ಕಾರಣರಾದವರು ನ್ಯೂಜಿಲೆಂಡ್ ವೇಗಿ ಮ್ಯಾಟ್ ಹೆನ್ರಿ!
ಇವತ್ತಿನ ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ದಾಳಿ ನಡೆಸಿದ ಹೆನ್ರಿ ಟೀಂ ಇಂಡಿಯಾದ ಬೌಲರ್ಗಳು ನಡಗುವಂತೆ ಮಾಡಿದರು. 9.4 ಓವರ್ನಲ್ಲಿ ಕೇವಲ 27 ರನ್ಗಳನ್ನ ನೀಡಿ ಬರೋಬ್ಬರಿ 6 ವಿಕೆಟ್ ಕಬಳಿಸಿ ಟೀಂ ಇಂಡಿಯಾದ ಬ್ಯಾಟಿಂಗ್ ಶಕ್ತಿಯನ್ನೇ ಮುರಿದು ಹಾಕಿದರು. ಅವರ ಈ ಮಾರಕ ಬೌಲಿಂಗ್ ದಾಳಿಗೆ ಇಡೀ ಕ್ರಿಕೆಟ್ ಲೋಕ ಬೆರಗಾಗಿ ನೋಡ್ತಿದೆ.
ಅವರ ಬೌಲಿಂಗ್ ಶೈಲಿಗೆ ಮಾರು ಹೋದವರಲ್ಲಿ ವಿರಾಟ್ ಕೊಹ್ಲಿ ಕೂಡ ಒಬ್ಬರು. ಪಂದ್ಯ ಮುಗಿದ ಬೆನ್ನಲ್ಲೇ ಕೊಹ್ಲಿ, ನೇರವಾಗಿ ನ್ಯೂಜಿಲೆಂಡ್ನ ಡ್ರೆಸ್ಸಿಂಗ್ ರೂಮ್ಗೆ ಹೋಗಿದ್ದಾರೆ. ಅಲ್ಲಿ ಮ್ಯಾಟ್ ಹೆನ್ಸಿ ಜೊತೆ ಕೆಲ ಕಾಲ ಮಾತನ್ನಾಡಿಸಿದ್ದಾರೆ. ಬಳಿಕ ಕೊಹ್ಲಿ ತಮ್ಮ ಜರ್ಸಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಅದನ್ನು ಪ್ರೀತಿಯಿಂದ ಮ್ಯಾಟ್ ಹೆನ್ರಿ ಸ್ವೀಕರಿಸಿದ್ದಾರೆ. ಇನ್ನು ಕೊಹ್ಲಿ ಎದುರಿಗೆ ಬಂದಾಗ ಹೆನ್ರಿ ಕೈಕಟ್ಟಿ ನಿಂತಿರೋದು ಕಂಡು ಬಂದಿದೆ. ವಿಡಿಯೋದಲ್ಲಿ ಹೆನ್ರಿ ಅವರನ್ನು ಶ್ಲಾಘಿಸುತ್ತಿರೋದು ಕಂಡುಬಂದಿದೆ.
ಹೇಗಿತ್ತು ಬೌಲಿಂಗ್ ದಾಳಿ?
ಮೊದಲ ಓವರ್ನ ಆರು ಎಸೆತಗಳಲ್ಲಿ ಮೂರು ವಿಕೆಟ್ ಕಬಳಿಸಿದರು. ಅಲ್ಲದೇ ಮೂರು ವಿಕೆಟ್ ಜೊತೆ ಮೇಡನ್ ಓವರ್ ಮಾಡಿದರು. ಮೊದಲ ಬಾಲ್ನಲ್ಲೇ ರೋಹಿತ್ ಶರ್ಮಾ ವಿಕೆಟ್ ಬೀಳಿಸಿದರೆ, ನಂತರ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಅವರ ವಿಕೆಟ್ ಉರುಳಿಸಿದರು. ಮೂವರನ್ನೂ ಶೂನ್ಯಕ್ಕೆ ಔಟ್ ಮಾಡುವ ಮೂಲಕ ಹೊಸ ದಾಖಲೆ ಬರೆದರು.
ಮೊದಲ ಓವರ್ ಬಳಿಕ.. ಇಶಾನ್ ಕಿಶನ್, ಕುಲ್ದೀಪ್ ಯಾದವ, ಗುರ್ನೂರ್ ಬ್ರಾರ್ ವಿಕೆಟ್ ಪಡೆದು ಮಿಂಚಿದರು.
ಪಂದ್ಯದ ಬಳಿಕ ಏನಂದ್ರು ಹೆನ್ರಿ?
ಭಾರತದ ಸೋಲಿಗೆ ಕಾರಣರಾದ ಹೆನ್ರಿ ಮ್ಯಾನ್ ಆಫ್ ದಿ ಮ್ಯಾಚ್ ಗೌರವಕ್ಕೆ ಪಾತ್ರರಾದರು. ಈ ವೇಳೆ ಅವರನ್ನ ಮಾತನ್ನಾಡಿಸಲಾಯಿತು. ಏಕದಿನ ಕ್ರಿಕೆಟ್ನಲ್ಲಿ ಇದು ಅತ್ಯುತ್ತಮ ಆರಂಭಿಕ ಓವರ್ ಆಗಿತ್ತಾ ಎಂದು ಪ್ರಶ್ನೆ ಮಾಡಲಾಗಿತ್ತು. ಅದಕ್ಕೆ ಉತ್ತರಿಸಿದ ಅವರು, ಇಲ್ಲ ನನಗೆ ಹಾಗೆ ಅನಿಸುತ್ತಿಲ್ಲ. ಖಂಡಿತವಾಗಿಯೂ ಬೇರೆ ಯಾರಾದರೂ ಇದಕ್ಕಿಂತ ಉತ್ತಮವಾದ ಓವರ್ ಮಾಡಿರುತ್ತಾರೆ. ಏಕದಿನ ಕ್ರಿಕೆಟ್ನಲ್ಲಿ ಇದಕ್ಕಿಂತ ಉತ್ತಮವಾದ ಸ್ಪೆಲ್ಗಳಿವೆ ಅನ್ನೋ ಮೂಲಕ ತಮ್ಮ ಮೇಲಿನ ಹೊಗಳಿಕೆಯನ್ನು ನಯವಾಗಿ ತಳ್ಳಿಹಾಕಿದ್ದಾರೆ. ಅವರ ಹೇಳಿಕೆಯನ್ನ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ತಮಾಷೆ ಮಾಡಿದೆ. ಮ್ಯಾಟ್ ಹೆನ್ರಿ ಹೊಗಳಿಕೆಯನ್ನ ಸ್ವೀಕರಿಸಲು ನಾವು ಕಾಯುತ್ತಿರುವ 12,477ನೇ ದಿನ ಎಂದು ಗೇಲಿ ಮಾಡಿದೆ.
ಭಾರತ ಈ ಪ್ರವಾಸದಲ್ಲಿ ನ್ಯೂಜಿಲೆಂಡ್ ವಿರುದ್ಧ ಒಟ್ಟು ಐದು ಏಕದಿನ ಪಂದ್ಯಗಳನ್ನ ಆಡಲಿದೆ. ಈಗಾಗಲೇ ನಾಲ್ಕು ಪಂದ್ಯಗಳು ಮುಕ್ತಾಯ ಆಗಿದೆ. ಮೊದಲ ಎರಡು ಪಂದ್ಯಗಳನ್ನ ಭಾರತ ಗೆದ್ದುಕೊಂಡಿದೆ. ಮೂರನೇ ಪಂದ್ಯ ಮಳೆಯಿಂದ ರದ್ದಾಗಿದೆ. ಇವತ್ತಿನ ಪಂದ್ಯವನ್ನು ನ್ಯೂಜಿಲೆಂಡ್ ವಿನ್ ಆಗಿದೆ. ಕೊನೆಯ ಪಂದ್ಯ ಹೈವೋಲ್ಟೇಜ್ನಿಂದ ಕೂಡಿದೆ. ಒಂದು ವೇಳೆ ಕೊನೆಯ ಪಂದ್ಯವನ್ನು ಭಾರತ ಗೆದ್ದರೆ ಏಕದಿನ ಸರಣಿ ನಮ್ಮ ಪಾಲಾಗಲಿದೆ. ನ್ಯೂಜಿಲೆಂಡ್ ಗೆದ್ದರೆ ಸರಣಿ ಸಮಬಲ ಆಗಲಿದೆ.














