*ಒಂದು ಸ್ಥಾನ ಕುಸಿತ ಕಂಡು 5ನೇ ಸ್ಥಾನಕ್ಕೆ ಜಾರಿದ Virat Kohli*2 ಸ್ಥಾನ ಕುಸಿತಗೊಂಡು 8ನೇ ಸ್ಥಾನಕ್ಕೆ ಜಾರಿದ K L Rahul*ಮೊಹಮ್ಮದ್ ರಿಜ್ವಾನ್ ವೃತ್ತಿಜೀವನದ ಅತ್ಯುತ್ತಮ Ranking
ದುಬೈ (ಅ. 28): ಟಿ20 ವಿಶ್ವಕಪ್‌ನಲ್ಲಿ (T20 World Cup) ಪಾಕಿಸ್ತಾನ ವಿರುದ್ಧ ಅರ್ಧಶತಕ ಬಾರಿಸಿದರೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ (Virat Kohli) ಐಸಿಸಿ ಟಿ20 ಬ್ಯಾಟ್ಸ್‌ಮನ್‌ಗಳ ranking ಪಟ್ಟಿಯಲ್ಲಿ ಒಂದು ಸ್ಥಾನ ಕುಸಿತ ಕಂಡು 5ನೇ ಸ್ಥಾನಕ್ಕೆ ಇಳಿದಿದ್ದಾರೆ. ಕನ್ನಡಿಗ ಕೆ.ಎಲ್.ರಾಹುಲ್ (K L Rahul) 2 ಸ್ಥಾನ ಕುಸಿತಗೊಂಡು 8ನೇ ಸ್ಥಾನಕ್ಕೆ ಜಾರಿದ್ದಾರೆ.
ನೀರಜ್ ಚೋಪ್ರಾ ಸೇರಿ ದಾಖಲೆ 11 ಕ್ರೀಡಾಪಟುಗಳಿಗೆ ಖೇಲ್‌ರತ್ನ!
ಭಾರತ ವಿರುದ್ಧ ಅಜೇಯ 79 ರನ್ ಹಾಗೂ ನ್ಯೂಜಿಲೆಂಡ್ ವಿರುದ್ಧ 33 ರನ್ ಬಾರಿಸಿದ ಪಾಕಿಸ್ತಾನದ ಆರಂಭಿಕ ಬ್ಯಾಟ್ಸ್‌ಮನ್ ಮೊಹಮ್ಮದ್ ರಿಜ್ವಾನ್ (Mohammad Rizwan) 3 ಸ್ಥಾನ ಜಿಗಿತ ಕಂಡು, 4ನೇ ಸ್ಥಾನಕ್ಕೇರಿದ್ದಾರೆ. ಇದು ರಿಜ್ವಾನ್ ವೃತ್ತಿಜೀವನದ ಅತ್ಯುತ್ತಮ ರಾರಯಂಕಿಂಗ್ ಆಗಿದೆ. ಆಸ್ಪ್ರೇಲಿಯಾ ಮತ್ತು ವೆಸ್ಟ್‌ಇಂಡೀಸ್ ವಿರುದ್ಧ ಕ್ರಮವಾಗಿ 40 ಹಾಗೂ ಅಜೇಯ 51 ರನ್ ಸಿಡಿಸಿದ ದಕ್ಷಿಣ ಆಫ್ರಿಕಾದ ಏಡೆನ್ ಮಾರ್ಕರಮ್ (Aiden Markram) 3ನೇ ಸ್ಥಾನಕ್ಕೆ ಜಿಗಿದಿದ್ದಾರೆ.
ಅಕ್ಟೋಬರ್ 24 ರಂದು ನಡೆದ ಭಾರತ -ಪಾಕಿಸ್ತಾನ (Ind vs Pak) ಪಂದ್ಯದಲ್ಲಿ ಕೊಹ್ಲಿ (725 ರೇಟಿಂಗ್ ಪಾಯಿಂಟ್ಸ್) 49 ಎಸೆತಗಳಲ್ಲಿ 57 ರನ್ ಬಾರಿಸಿದರೆ, ಕೆ ಎಲ್ ರಾಹುಲ್ (684 ರೇಟಿಂಗ್ ಪಾಯಿಂಟ್ಸ್) 3 ರನ್ ಗಳಿಸಿದ್ದರು. ಭಾರತ 7 ವಿಕೆಟ್ ಕಳೆದುಕೊಂಡು ಒಟ್ಟು 151 ರನ್ ಗಳಿಸಿತ್ತು. ಇದನ್ನು ಬೆನ್ನಟ್ಟಿದ ಪಾಕಿಸ್ತಾನ 13 ಎಸೆತಗಳು ಬಾಕಿ ಇರುವಂತೆಯೇ ಸೂಪರ್ 12 ಪಂದ್ಯದಲ್ಲಿ 10 ವಿಕೆಟ್‌ಗಳ ಜಯ ಸಾಧಿಸಿತ್ತು.
#blacklivesmatter : ‘ಮಂಡಿಯೂರಲು’ ನಿರಾಕರಿಸಿ ಪಂದ್ಯದಿಂದ ಹೊರಗುಳಿದ ಕ್ವಿಂಟನ್ ಡಿ ಕಾಕ್
ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಕ್ರಮವಾಗಿ 40 ಮತ್ತು 51 ರನ್ ಗಳಿಸಿದ ದಕ್ಷಿಣ ಆಫ್ರಿಕಾ ಬ್ಯಾಟರ್ ಏಡೆನ್ ಮಾರ್ಕ್ರಾಮ್ ಅವರು ತಮ್ಮ ವೃತ್ತಿಜೀವನದ ಅತ್ಯುತ್ತಮ ರಾರಯಂಕಿಂಗ್ ಪಡೆದಿದ್ದಾರೆ. ಅವರು ಎಂಟು ಸ್ಥಾನ ಜಿಗಿತ ಕಂಡು, ಮೂರನೇ ಸ್ಥಾನಕ್ಕೆ ತಲುಪಿದ್ದಾರೆ. ಇನ್ನು ಮೊದಲನೇ ಸ್ಥಾನ ಇಂಗ್ಲೆಂಡ್‌ನ ಡೇವಿಡ್ ಮಲಾನ್ (David Malan) (831) ಹಾಗೂ ಎರಡನೇ ಸ್ಥಾನದಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಅಜಮ್ (Babar Azam) (820) ಇದ್ದಾರೆ.
ಹಿಂದೂಗಳ ನಡುವೆ ರಿಜ್ವಾನ್ ನಮಾಜ್‌ನಿಂದ ಹೆಚ್ಚು ತೃಪ್ತಿ; ವಕಾರ್ ಹೇಳಿಕೆಗೆ ಹರ್ಷಾ ಬೋಗ್ಲೆ ತಿರುಗೇಟು!
ಅಫ್ಘಾನಿಸ್ತಾನದ ರಹಮಾನುಲ್ಲಾ ಗುರ್ಬಾಜ್ ಸ್ಕಾಟ್ಲೆಂಡ್ ವಿರುದ್ಧ 46 ರನ್ ಗಳಿಸಿದ ನಂತರ ಒಂಬತ್ತು ಸ್ಥಾನ ಜಿಗಿತ ಕಂಡು ವೃತ್ತಿಜೀವನದ ಅತ್ಯುತ್ತಮ 12 ನೇ ಸ್ಥಾನಕ್ಕೆ ಬಂದರೆ, ಬಾಂಗ್ಲಾದೇಶದ ಆರಂಭಿಕ ಆಟಗಾರ ಮೊಹಮ್ಮದ್ ನಯಿಮ್ ಶ್ರೀಲಂಕಾ ವಿರುದ್ಧ 52 ಎಸೆತಗಳಲ್ಲಿ 62 ರನ್ ಗಳಿಸಿದ ನಂತರ ವೃತ್ತಿಜೀವನದ ಅತ್ಯುತ್ತಮ 13 ನೇ ಸ್ಥಾನಕ್ಕೆ ತಲುಪಿದ್ದಾರೆ. ನಮೀಬಿಯಾ ತಂಡವನ್ನು ಸೂಪರ್ 12 ಗೆ ತಲುಪುವಲ್ಲಿ ಸಹಾಯ ಮಾಡಿದ ನಾಯಕ ಗೆರ್ಹಾರ್ಡ್ ಎರಾಸ್ಮಸ್ ಜಂಟಿ-37 ನೇ ಸ್ಥಾನಕ್ಕೆ ಏರಿದ್ದಾರೆ.
