Asianet Suvarna News Asianet Suvarna News

"RCB ಪರ ಕೊಹ್ಲಿ ಸಾಧಿಸಿದ್ದನೇ ನಾನು ಸಾಧಿಸಬೇಕು": ಸ್ಮೃತಿ ಮಂಧನಾ ಹೇಳಿಕೆ ಬಗ್ಗೆ ಕೊಹ್ಲಿ ರಿಯಾಕ್ಷನ್ ವೈರಲ್‌..!

* ಚೊಚ್ಚಲ ಆವೃತ್ತಿಯ ಐಪಿಎಲ್‌ ಟ್ರೋಫಿ ಕನವರಿಕೆಯಲ್ಲಿದೆ ಆರ್‌ಸಿಬಿ
* ವಿರಾಟ್ ಕೊಹ್ಲಿ ಕಾಲೆಳೆದ ಮಿಸ್ಟರ್ ನ್ಯಾಗ್ಸ್‌
ಸ್ಮೃತಿ ಮಂಧನಾ ಹೆಸರು ಹೇಳಿ ಕೊಹ್ಲಿ ಕಾಲೆಳೆದ ನ್ಯಾಗ್ಸ್‌

Virat Kohli Reaction To Smriti Mandhana I Want To Achieve What He Has For RCB Comment Will Leave You In Splits kvn
Author
First Published Apr 6, 2023, 4:07 PM IST

ಬೆಂಗಳೂರು(ಏ.06): ಇಂಡಿಯನ್‌ ಪ್ರೀಮಿಯರ್ ಲೀಗ್‌ನಲ್ಲಿ ಅತ್ಯಂತ ನಂಬಿಗಸ್ಥ ಫ್ಯಾನ್‌ ಬೇಸ್ ಹೊಂದಿದ ತಂಡವೆಂದರೆ, ಅದು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಕ್ರಿಕೆಟ್ ತಂಡ. ಕಳೆದ 15 ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದರೂ ಸಹಾ, ಆರ್‌ಸಿಬಿ ಇದುವರೆಗೂ ಕಪ್‌ ಗೆಲ್ಲಲು ಯಶಸ್ವಿಯಾಗಿಲ್ಲ, ಹೀಗಿದ್ದೂ, ಆರ್‌ಸಿಬಿ ಅಭಿಮಾನಿಗಳಿಗೆ ಬೆಂಗಳೂರು ತಂಡದ ಮೇಲಿನ ಅಭಿಮಾನ ಮಾತ್ರ ಕಮ್ಮಿಯಾಗಿಲ್ಲ. 

ಆರ್‌ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್‌, ಕ್ರಿಸ್‌ ಗೇಲ್‌ ಅವರಂತಹ ಅಟಗಾರರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಈ ಕಾರಣಕ್ಕಾಗಿಯೇ ಕಳೆದ ಹಲವಾರ ವರ್ಷಗಳಿಂದ ಎಂ ಚಿನ್ನಸ್ವಾಮಿ ಮೈದಾನವು ಐಪಿಎಲ್‌ ಪಂದ್ಯಗಳು ನಡೆದಾಗಲೆಲ್ಲಾ ತುಂಬಿತುಳುಕತ್ತಲೇ ಇದೆ. ಸದ್ಯ ಎಬಿ ಡಿವಿಲಿಯರ್ಸ್‌ ಹಾಗೂ ಕ್ರಿಸ್‌ ಗೇಲ್ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರೂ ಕೂಡಾ, ದಿಗ್ಗಜ ಕ್ರಿಕೆಟಿಗ ವಿರಾಟ್ ಕೊಹ್ಲಿ ಆಟ ಕಣ್ತುಂಬಿಕೊಳ್ಳಲು ಆರ್‌ಸಿಬಿ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿರುತ್ತಾರೆ.

ಚೊಚ್ಚಲ ಆವೃತ್ತಿಯ ಐಪಿಎಲ್ ಟೂರ್ನಿಯಿಂದಲೂ ಆರ್‌ಸಿಬಿ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿರುವ ವಿರಾಟ್ ಕೊಹ್ಲಿ, ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಪರ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ. ವಿರಾಟ್ ಕೊಹ್ಲಿ, ಆರ್‌ಸಿಬಿ ಪರ ಹತ್ತು ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. 

ಇನ್ನು ಚೊಚ್ಚಲ ಆವೃತ್ತಿಯ ವುಮೆನ್ಸ್‌ ಪ್ರೀಮಿಯರ್ ಲೀಗ್‌ನಲ್ಲೂ ಆರ್‌ಸಿಬಿ ಫ್ರಾಂಚೈಸಿಯು ಮಹಿಳಾ ತಂಡವನ್ನು ಖರೀದಿಸಿತ್ತು. ಇದಾದ ಬಳಿಕ ನಡೆದ ಹರಾಜಿನಲ್ಲಿ ಸ್ಮೃತಿ ಮಂಧನಾ, ಎಲೈಸಿ ಪೆರ್ರಿ, ಮೆಗನ್ ಶುಟ್, ರಿಚಾ ಘೋಷ್, ರೇಣುಕಾ ಸಿಂಗ್ ಅವರಂತಹ ತಾರಾ ಆಟಗಾರ್ತಿಯರನ್ನು ಖರೀದಿಸಿತ್ತು. ನಂತರ ಸ್ಮೃತಿ ಮಂಧನಾಗೆ ಆರ್‌ಸಿಬಿ ಮಹಿಳಾ ತಂಡದ ನಾಯಕಿ ಪಟ್ಟವನ್ನು ಕಟ್ಟಲಾಗಿತ್ತು. ಆರ್‌ಸಿಬಿ ಮಹಿಳಾ ತಂಡದ ನಾಯಕತ್ವದ ವಹಿಸಿಕೊಂಡ ಬಳಿಕ ಮಾತನಾಡಿದ್ದ ಸ್ಮೃತಿ ಮಂಧನಾ, "ವಿರಾಟ್ ಕೊಹ್ಲಿ ಜತೆಗೆ ನನ್ನ ಹೋಲಿಕೆ ಸರಿಯಲ್ಲ. ವಿರಾಟ್ ಕೊಹ್ಲಿ ಇದುವರೆಗೂ ಏನೆಲ್ಲಾ ಸಾಧಿಸಿದ್ದಾರೋ ಅದೆಲ್ಲವೂ ಅದ್ಭುತ. ನಾನು ಅವರು ಸಾಧಿಸಿದ ಹಂತಕ್ಕೇರಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ಆರ್‌ಸಿಬಿ ಫ್ರಾಂಚೈಸಿ ಪರ ಅವರು ಏನೆಲ್ಲಾ ಸಾಧಿಸಿದ್ದಾರೋ, ನಾನು ಅಂತಹದ್ದನ್ನೇ ಮಾಡಲು ಇಷ್ಟಪಡುತ್ತೇನೆ" ಎಂದಿದ್ದರು.

IPL 2023: ಕೆಕೆಆರ್‌ ಎದುರಿನ ಪಂದ್ಯಕ್ಕೆ RCB ತಂಡದಲ್ಲಿ ಒಂದು ಮಹತ್ವದ ಬದಲಾವಣೆ..! ಯಾರಿಗೆ ಸಿಗುತ್ತೆ ಸ್ಥಾನ?

ಸಾಕಷ್ಟು ಬಲಾಢ್ಯ ಟಿ20 ತಜ್ಞ ಆಟಗಾರ್ತಿಯರನ್ನು ಹೊಂದಿದ್ದರೂ ಸಹಾ, ಆರ್‌ಸಿಬಿ ತಂಡವು ಚೊಚ್ಚಲ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿತ್ತು. 5 ತಂಡಗಳು ಪಾಲ್ಗೊಂಡಿದ್ದ ಟೂರ್ನಿಯಲ್ಲಿ ಸ್ಮೃತಿ ಮಂಧನಾ ಪಡೆ ಕೇವಲ 2 ಗೆಲುವು ದಾಖಲಿಸುವ ಮೂಲಕ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

ಇದೀಗ 16ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಸಂದರ್ಭದಲ್ಲಿ ಆರ್‌ಸಿಬಿ ಇನ್‌ಸೈಡರ್‌ ಕಾರ್ಯಕ್ರಮದಲ್ಲಿ ಮಿಸ್ಟರ್ ನ್ಯಾಗ್ಸ್‌, ಸ್ಮೃತಿ ಮಂಧನಾ ಹೇಳಿಕೆ ಕುರಿತಂತೆ ವಿರಾಟ್ ಕೊಹ್ಲಿ ಕಾಲೆಳೆದಿದ್ದಾರೆ. ಸ್ಮೃತಿ ಮಂಧನಾ ನೇತೃತ್ವದ ಮಹಿಳಾ ಆರ್‌ಸಿಬಿ ತಂಡವು ಕೇವಲ ಎರಡು ಪಂದ್ಯಗಳನ್ನು ಜಯಿಸುವ ಮೂಲಕ, ವಿರಾಟ್ ಕೊಹ್ಲಿ ಸಾಧಿಸಿದಂತೆ ಸರಿಯಾದ ದಿಕ್ಕಿನಲ್ಲಿಯೇ ಸಾಗುತ್ತಿದೆ ಎಂದು ನ್ಯಾಗ್ಸ್‌, ಆರ್‌ಸಿಬಿ ಕಾಲೆಳೆದಿದ್ದಾರೆ.

ನ್ಯಾಗ್ಸ್‌ ಮಾತಿಗೆ ಜೋರಾಗಿ ನಗೆಯಾಡಿದ ವಿರಾಟ್ ಕೊಹ್ಲಿ, ಆನಂತರ " ಇದೊಂದು ದೊಡ್ಡ ಫ್ರಾಂಚೈಸಿಯಾಗಿದ್ದು, ಉತ್ತಮ ಪ್ರದರ್ಶನ ತೋರಬೇಕಾದ ಒತ್ತಡವು ಹೆಚ್ಚಾಗಿಯೇ ಇರುತ್ತದೆ ಎಂದು ಕೊಹ್ಲಿ ಹೇಳಿದ್ದಾರೆ.

Virat Kohli Reaction To Smriti Mandhana I Want To Achieve What He Has For RCB Comment Will Leave You In Splits kvn

Follow Us:
Download App:
  • android
  • ios