ಬೆಂಗಳೂರು(ಡಿ.20): ಭಾರತದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಡಿಸೆಂಬರ್ 19ರ ದಿನ ಒಂದು ರೀತಿಯ ಮಿಶ್ರಫಲ ದೊರೆತ ದಿನ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಗರಿಷ್ಠ ಹಾಗೂ ಕನಿಷ್ಠ ಮೊತ್ತಗಳನ್ನು ದಾಖಲಿಸಿದ ದಿನ ಇದು. 

ಹೌದು, 2016ರಂದು ಇಂಗ್ಲೆಂಡ್‌ ವಿರುದ್ಧ ಚೆನ್ನೈನಲ್ಲಿ 7 ವಿಕೆಟ್‌ಗೆ 759 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿದ್ದ ಭಾರತ ತನ್ನ ಗರಿಷ್ಠ ಮೊತ್ತ ದಾಖಲಿಸಿತ್ತು. ಈ ಪಂದ್ಯದಲ್ಲಿ ಕರುಣ್‌ ನಾಯರ್‌ ತ್ರಿಶತಕ ಬಾರಿಸಿದ್ದರು. 

ಇನ್ನು, ಡಿ.19, 2020, ಆಸ್ಪ್ರೇಲಿಯಾ ವಿರುದ್ಧ 36ಕ್ಕೆ ಆಲೌಟ್‌ ಆಗುವ ಮೂಲಕ ಟೀಂ ಇಂಡಿಯಾ ತನ್ನ ಕನಿಷ್ಠ ಮೊತ್ತ ದಾಖಲಿಸಿತು. ಎರಡೂ ಪಂದ್ಯಗಳಲ್ಲಿ ವಿರಾಟ್‌ ಕೊಹ್ಲಿಯೇ ನಾಯಕ ಎನ್ನುವುದು ಮತ್ತೊಂದು ವಿಶೇಷ.

2009ರಿಂದ ಸತತ 12 ವರ್ಷ ಮಾಡಿದ್ದ ಸಾಧನೆ 2020ರಲ್ಲಿ ಕೊಹ್ಲಿಗೇ ಆಗಲೇ ಇಲ್ಲ!

ಬ್ಯಾಟ್ಸ್‌ಮನ್‌ಗಳ ‘ಒಂದಂಕಿ’ ಸಾಧನೆ!

ಪಿಂಕ್ ಬಾಲ್ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ ಭಾರತದ ಯಾವೊಬ್ಬ ಬ್ಯಾಟ್ಸ್‌ಮನ್‌ ಸಹ ಒಂದಂಕಿ ಮೊತ್ತ ದಾಟಲಿಲ್ಲ. ಮಯಾಂಕ್‌ ಅಗರ್‌ವಾಲ್‌ 9 ರನ್‌ ಗಳಿಸಿ ತಂಡದ ಪರ ಅತಿಹೆಚ್ಚು ರನ್‌ ಬಾರಿಸಿದ ಆಟಗಾರ ಎನಿಸಿಕೊಂಡರು.  ಇನ್ನಿಂಗ್ಸ್‌ವೊಂದರಲ್ಲಿ ಎಲ್ಲ ಬ್ಯಾಟ್ಸ್‌ಮನ್‌ಗಳು ಒಂದಂಕಿ ಮೊತ್ತಕ್ಕೆ ಔಟಾಗಿದ್ದು ಟೆಸ್ಟ್‌ ಇತಿಹಾಸದಲ್ಲಿ 2ನೇ ಬಾರಿ. 1924ರಲ್ಲಿ ಇಂಗ್ಲೆಂಡ್‌ ವಿರುದ್ಧ ದಕ್ಷಿಣ ಆಫ್ರಿಕಾದಿಂದ ಈ ಅನಗತ್ಯ ದಾಖಲೆ ನಿರ್ಮಾಣವಾಗಿತ್ತು.