Asianet Suvarna News Asianet Suvarna News

SA vs India 3rd Test: ವಿರಾಟ್ ಕೊಹ್ಲಿ ಹೋರಾಟದ ನಡುವೆಯೂ ಕುಸಿದ ಭಾರತ!

ಆಕರ್ಷಕ 79 ರನ್ ಸಿಡಿಸಿದ ನಾಯಕ ವಿರಾಟ್ ಕೊಹ್ಲಿ
ಕೇಪ್ ಟೌನ್ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ 223 ರನ್ ಗೆ ಭಾರತ ಆಲೌಟ್
ಮೊದಲ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಗೆ 17 ರನ್ ಬಾರಿಸಿರುವ ದಕ್ಷಿಣ ಆಫ್ರಿಕಾ

Virat Kohli Fight For India As South Africa Gain Upper Hand On Day 1 in capetown Test san
Author
Bengaluru, First Published Jan 11, 2022, 11:45 PM IST
  • Facebook
  • Twitter
  • Whatsapp

ಕೇಪ್ ಟೌನ್ (ಜ. 11): ದಕ್ಷಿಣ ಆಫ್ರಿಕಾ (South Africa) ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ (Test Series) ಗೆಲುವಿನ ಇರಾದೆಯಲ್ಲಿ ಕೇಪ್ ಟೌನ್ ನಲ್ಲಿ (Cape Town) ನಡೆಯುತ್ತಿರುವ ಮೂರನೇ ಟೆಸ್ಟ್ ನಲ್ಲಿ ಕಣಕ್ಕಿಳಿದಿರುವ ಭಾರತ ತಂಡಕ್ಕೆ  (India Team)ಮೊದಲ ದಿನವೇ ಹಿನ್ನಡೆಯಾಗಿದೆ. ನಾಯಕ ವಿರಾಟ್ ಕೊಹ್ಲಿಯ  (Virat Kohli)ಹೋರಾಟಕಾರಿ 79 ರನ್ ಗಳ ಆಟದ ಹೊರತಾಗಿಯೂ ಮೊದಲ ಇನ್ನಿಂಗ್ಸ್ ನಲ್ಲಿ ಟೀಮ್ ಇಂಡಿಯಾ (Team India)223 ರನ್ ಗೆ ಆಲೌಟ್ ಆಗಿದೆ. ತಮ್ಮ 50ನೇ ಟೆಸ್ಟ್ ಪಂದ್ಯ ಆಡುತ್ತಿರುವ ವೇಗಿ ಕಗಿಸೋ ರಬಾಡ (Kagiso Rabada) ಪ್ರಮುಖ ನಾಲ್ಕು ವಿಕೆಟ್ ಸಾಧನೆ ಮಾಡುವ ಮೂಲಕ ಭಾರತದ ಹಿನ್ನಡೆಗೆ ಕಾರಣರಾದರು.

ನ್ಯೂ ಲ್ಯಾಂಡ್ಸ್ (Newlands)ಮೈದಾನದಲ್ಲಿ ಮಂಗಳವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ದುಕೊಂಡರು. ವಿರಾಟ್ ಕೊಹ್ಲಿ ಶಿಸ್ತಿನ ಆಟವಾಡುವ ಮೂಲಕ ದಕ್ಷಿಣ ಆಫ್ರಿಕಾ ಬೌಲಿಂಗ್ ದಾಳಿಯನ್ನು ಎದುರಿಸಿದರೆ, ಅವರಿಗೆ ಇತರ ಬ್ಯಾಟ್ಸ್ ಮನ್ ಗಳಿಂದ ಉತ್ತಮ ಸಾಥ್ ಸಿಗಲಿಲ್ಲ. ಇದರ ಪರಿಣಾಮವಾಗಿ ಭಾರತ ತಂಡ ಮತ್ತೊಮ್ಮೆ ದಕ್ಷಿಣ ಆಫ್ರಿಕಾ ವಿರುದ್ಧ ದೊಡ್ಡ ಮೊತ್ತ ಬಾರಿಸಲು ವಿಫಲವಾಯಿತು. 33 ವರ್ಷದ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ 201 ಎಸೆತಗಳಲ್ಲಿ79 ರನ್ ಬಾರಿಸಿದರೆ, ಇವರಿಗೆ ಕೆಲ ಹೊತ್ತು ಜೊತೆಯಾದ ಚೇತೇಶ್ವರ ಪೂಜಾರ (Cheteshwar Pujara ) 43 ರನ್ ಬಾರಿಸಿ ಔಟಾದರು.

ಮೊದಲ ದಿನದಾಟದ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ 17 ರನ್ ಬಾರಿಸಿದ್ದು, ಇನ್ನೂ 206 ರನ್ ಗಳ ಹಿನ್ನಡೆಯಲ್ಲಿದೆ. ನಾಯಕ ಹಾಗೂ ಕಳೆದ ಪಂದ್ಯದ ಗೆಲುವಿನ ಹೀರೋ ಡೀನ್ ಎಲ್ಗರ್ (Dean Elgar) ವಿಕೆಟ್ ಅನ್ನು ದಕ್ಷಿಣ ಆಫ್ರಿಕಾ ಕಳೆದುಕೊಂಡಿದ್ದು. 8 ರನ್ ಬಾರಿಸಿರುವ ಏಡೆನ್ ಮಾರ್ಕ್ರಮ್ (Aiden Markram)ಹಾಗೂ 6 ರನ್ ಬಾರಿಸಿರುವ ನೈಟ್ ವಾಚ್ ಮನ್ ಕೇಶವ್ ಮಹಾರಾಜ್ (Keshav Maharaj) 2ನೇ ದಿನಕ್ಕೆ  ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
 


ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಅನ್ನು ಎದುರಿಸಲು ಸಾಕಷ್ಟು ಕಷ್ಟಪಟ್ಟರು. ದಕ್ಷಿಣ ಆಫ್ರಿಕಾದ ಕಠಿಣ ಬೌಲಿಂಗ್ ದಾಳಿಯನ್ನು ಎದುರಿಸುವ ನಿಟ್ಟಿನಲ್ಲಿ ಸಾಕಷ್ಟು ತಾಳ್ಮೆ ತೋರಿದ ವಿರಾಟ್ ಕೊಹ್ಲಿ, ಆಫ್ ಸ್ಟಂಪ್ ನ ಹೊರ ಹೋಗುವ ಚೆಂಡುಗಳನ್ನು ಮುಟ್ಟುವ ಸವಾಲಿಗೆ ಹೋಗುತ್ತಿರಲಿಲ್ಲ. ತಮ್ಮ ಇನ್ನಿಂಗ್ಸ್ ನ ಕೊನೆಯಲ್ಲಿ ಸಾಕಷ್ಟು ಬೌಂಡರಿಗಳನ್ನು ಬಾರಿಸುವ ಮೂಲಕ ರಂಜಿಸಿದ ವಿರಾಟ್ ಕೊಹ್ಲಿಯ ವಿಕೆಟ್ ಅನ್ನು ರಬಾಡ ಉರುಳಿಸಿದರು. ಒಮ್ಮೆ ಕೊಹ್ಲಿ ಔಟಾದ ಬಳಿಕ, ಟೀಮ್ ಇಂಡಿಯಾದ ಕೆಳ ಕ್ರಮಾಂಕದ ಬ್ಯಾಟಿಂಗ್ ರನ್ ಗಳನ್ನು ಪೇರಿಸಲು ವಿಫಲವಾಯಿತು. ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಭ್ ಪಂತ್ (27) ಮತ್ತೊಮ್ಮೆ ಕೆಟ್ಟ ಹೊಡೆತಕ್ಕೆ ಯತ್ನಿಸಿ ವಿಕೆಟ್ ಒಪ್ಪಿಸಿದರು. ಮಾರ್ಕೋ ಜಾನ್ಸೆನ್ ತಮ್ಮ ನಿಖರ ಎಸೆತದಲ್ಲಿ ಅಶ್ವಿನ್ (2) ವಿಕೆಟ್ ಒಪ್ಪಿಸಿದರೆ, ಆಫ್ ಸ್ಪಿನ್ನರ್ ಕೇಶವ್ ಮಹರಾಜ್ ಶಾರ್ದೂಲ್ ಠಾಕೂರ್ (12) ವಿಕೆಟ್ ಉರುಳಿಸುವ ಮೂಲಕ ಸರಣಿಯಲ್ಲಿ ತಮ್ಮ ಮೊಟ್ಟಮೊದಲ ವಿಕೆಟ್ ಉರುಳಿಸಿದರು.

ದೊಡ್ಡ ಮೊತ್ತದ ನಿರೀಕ್ಷೆಯಲ್ಲಿ ಬ್ಯಾಟಿಂಗ್ ಮಾಡಲು ಇಳಿದ ಭಾರತಕ್ಕೆ ದಕ್ಷಿಣ ಆಫ್ರಿಕಾ ಆಘಾತ ನೀಡಿತು. ಕಳೆದ ಎರಡು ಪಂದ್ಯಗಳಲ್ಲಿ ಗಮನಸೆಳೆದಿದ್ದ ಆರಂಭಿಕ ಆಟಗಾರ ಕೆಎಲ್ ರಾಹುಲ್ (KL Rahul)ಕೇವಲ 12 ರನ್ ಬಾರಸಿ ಡುವಾನ್ನೆ ಒಲಿವರ್ ಗೆ ವಿಕೆಟ್ ನೀಡಿದರು. ರಾಹುಲ್ ಔಟಾದ ಮರು ಓವರ್ ನಲ್ಲಿಯೇ ಮಯಾಂಕ್ ಅಗರ್ವಾಲ್ (15) ಕೂಡ ನಿರ್ಗಮನ ಕಾಣುವುದರೊಂದಿಗೆ ಭಾರತ ಹಿನ್ನಡೆ ಕಂಡಿತ್ತು.

IND vs SA test ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ, 2 ಬದಲಾವಣೆಯೊಂದಿಗೆ ಕೊಹ್ಲಿ ವಾಪಸ್!
ಈ ಹಂತದಲ್ಲಿ ಜೊತೆಯಾದ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ ಪೂಜಾರ 3ನೇ ವಿಕೆಟ್ ಗೆ 62 ರನ್ ಗಳ ಜೊತೆಯಾಟವಾಡುವ ಮೂಲಕ ಇನ್ನಿಂಗ್ಸ್ ಗೆ ಚೇತರಿಕೆ ನೀಡಿದರು. ಆದರೆ, 21 ರನ್ ಗಳ ಅಂತರದಲ್ಲಿ ಪೂಜಾರ ಹಾಗೂ ರಹಾನೆ ಅವರ ವಿಕೆಟ್ ಕಳೆದುಕೊಂಡಿದ್ದರಿಂದ ಮತ್ತೆ ಆಘಾತ ಕಂಡಿತು. 77 ಎಸೆತಗಳಲ್ಲಿ 7 ಬೌಂಡರಿಯೊಂದಿಗೆ 43 ರನ್ ಬಾರಿಸಿದ್ದ ಪೂಜಾರ, ಮಾರ್ಕೋ ಜಾನ್ಸೆನ್ ಗೆ ವಿಕೆಟ್ ನೀಡಿದರೆ ಕಳಪೆ ಫಾರ್ಮ್ ನಲ್ಲಿರುವ ಅಜಿಂಕ್ಯ ರಹಾನೆ12 ಎಸೆತಗಳಲ್ಲಿ ಕೇವಲ 9 ರನ್ ಬಾರಿಸಿ ಜಾನ್ಸೆನ್ ಗೆ ವಿಕೆಟ್ ನೀಡಿದರು. ದಕ್ಷಿಣ ಆಫ್ರಿಕಾ ಪರವಾಗಿ ರಬಾಡ ಅಲ್ಲದೆ, ಮಾರ್ಕೋ ಜಾನ್ಸೆನ್ ಮೂರು ವಿಕೆಟ್ ಉರುಳಿಸಿದರೆ, ಡುವಾನ್ನೆ ಒಲಿವರ್, ಕೇಶವ್ ಮಹಾರಾಜ್ ಹಾಗೂ ಲುಂಜಿ ಎನ್ ಗಿಡಿ ತಲಾ ಒಂದು ವಿಕೆಟ್ ಉರುಳಿಸಿದರು.

ಭಾರತ: 223ಕ್ಕೆ ಆಲೌಟ್ (ವಿರಾರ್ ಕೊಹ್ಲಿ 79, ಚೇತೇಶ್ವರ ಪೂಜಾರ 43, ಕಗೀಸೋ ರಬಾಡ 73ಕ್ಕೆ 4, ಮಾರ್ಕೋ ಜಾನ್ಸೆನ್ 55ಕ್ಕೆ 3), ದಕ್ಷಿಣ ಆಫ್ರಿಕಾ 1 ವಿಕೆಟ್ ಗೆ 17 (ಮಾರ್ಕ್ರಮ್ 8*, ಜಸ್ ಪ್ರೀತ್ ಬುಮ್ರಾ 0ಗೆ 1).

Follow Us:
Download App:
  • android
  • ios