ಅಡಿಲೇಡ್‌(ಡಿ.23): ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ, ಮಂಗಳವಾರ ಆಸ್ಪ್ರೇಲಿಯಾದಿಂದ ಭಾರತಕ್ಕೆ ಪ್ರಯಾಣ ಬೆಳೆಸಿದ್ದಾರೆ. ಪಿತೃತ್ವದ ರಜೆ ಮಂಜೂರಾಗಿರುವ ಕಾರಣ ಕೊಹ್ಲಿ, ಆಸ್ಪ್ರೇಲಿಯಾ ವಿರುದ್ಧದ ಉಳಿದ 3 ಟೆಸ್ಟ್‌ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.

ಹೀಗಾಗಿ ಆಸ್ಪ್ರೇಲಿಯಾ ತೊರೆಯುವ ಮುನ್ನ ಕೊಹ್ಲಿ, ತಂಡದ ಸಹ ಆಟಗಾರರೊಂದಿಗೆ ಸ್ಫೂರ್ತಿಯ ಮಾತುಗಳನ್ನಾಡಿದ್ದಾರೆ. ಕೊಹ್ಲಿ ಅಲಭ್ಯತೆಯಲ್ಲಿ ಆಸ್ಪ್ರೇಲಿಯಾ ವಿರುದ್ಧದ 3 ಪಂದ್ಯಗಳಿಗೆ ಉಪನಾಯಕ ಅಜಿಂಕ್ಯ ರಹಾನೆ ತಂಡವನ್ನು ಮುನ್ನಡೆಸಲಿದ್ದಾರೆ ಎನ್ನಲಾಗಿದೆ.

ಬಾಕ್ಸಿಂಗ್ ಡೇ ಟೆಸ್ಟ್‌ಗೆ ಟೀಂ ಇಂಡಿಯಾವನ್ನು ಪ್ರಕಟಿಸಿದ ಗೌತಮ್ ಗಂಭೀರ್

ಜನವರಿಯಲ್ಲಿ ವಿರಾಟ್‌ ಕೊಹ್ಲಿ, ಅನುಷ್ಕಾ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ತವರಿಗೆ ಹಿಂದಿರುಗಿರುವ ವಿರಾಟ್‌, ವಿಮಾನ ಹತ್ತುವ ಮೊದಲು ತಂಡದ ಆಟಗಾರರೊಟ್ಟಿಗೆ ಮಾತನಾಡಿ ಹುರಿದುಂಬಿಸಿದ್ದಾರೆ ಎನ್ನಲಾಗಿದೆ. ಟೆಸ್ಟ್‌ ಸರಣಿಯ ಉಳಿದ 3 ಪಂದ್ಯಗಳಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿ, ಎದುರಾಳಿ ತಂಡವನ್ನು ಸೋಲಿಸಲು ಆಟಗಾರರಿಗೆ ಕೊಹ್ಲಿ ಸ್ಫೂರ್ತಿದಾಯಕ ಮಾತುಗಳನ್ನಾಡಿದ್ದಾರೆ. ಅಡಿಲೇಡ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್‌ನಲ್ಲಿ ಭಾರತ ತಂಡ ಹೀನಾಯ ಸೋಲು ಕಂಡಿತ್ತು.