ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗಡೆ ಆರ್‌ಸಿಬಿ ಯಾವ ತಂಡ ಆದರೂ ಸರಿ ಸೋಲಿಸದೆ ಹಿಂದಿರುಗುವುದಿಲ್ಲ. ಇದೀಗ ರಾಜಸ್ಥಾನ ರಾಯಲ್ಸ್ ವಿರುದ್ಧವೂ ಭರ್ಜರಿ ಗೆಲುವು ದಾಖಲಿಸಿದೆ. 

ಜೈಪುರ(ಏ.13) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅಗ್ರೆಸ್ಸೀವ್ ಪ್ರದರ್ಶನ ನೀಡುತ್ತಿದೆ. ಆದರೆ ತವರಿನಲ್ಲಿ ಮಾತ್ರ ಹಿನ್ನಡೆಯಾಗುತ್ತಿದೆ. ಕಳೆದ ಪಂದ್ಯದಲ್ಲಿ ತವರಿನಲ್ಲಿ ಮುಗ್ಗರಿಸಿದ್ದ ಆರ್‌ಸಿಬಿ ಇದೀಗ ಜೈಪುರದಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧ ಭರ್ಜರಿ 9 ವಿಕೆಟ್ ಗೆಲುವು ದಾಖಲಿಸಿದೆ. ಈ ಆವೃತ್ತಿಯಲ್ಲಿ ಆರ್‌ಸಿಬಿ ತವರಿನಲ್ಲಿ 2 ಪಂದ್ಯ ಆಡಿದೆ. ಎರಡಲ್ಲೂ ಸೋಲು ಕಂಡಿದೆ. ತವರಿನ ಆಚೆ 4 ಪಂದ್ಯ ಆಡಿ ನಾಲ್ಕರಲ್ಲೂ ಗೆಲುವು ದಾಖಲಿಸಿದೆ. ಇದೀಗ ಆರ್‌ಸಿಬಿ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ. 

Add Asianetnews Kannada as a Preferred SourcegooglePreferred

ರಾಜಸ್ಥಾನ ರಾಯಲ್ಸ್ 174 ರನ್ ಟಾರ್ಗೆಟ್ ನೀಡಿತ್ತು. ಮೊದಲೇ ಚೇಸಿಂಗ್ ಪಡೆದಿದ್ದ ಆರ್‌ಸಿಬಿಗೆ ಇದು ಯಾವ ಹಂತದಲ್ಲೂ ಸವಾಲು ಏನಿಸಲೇ ಇಲ್ಲ. ಆರಂಭದಿಂದಲೇ ಅಬ್ಬರ ಆರಂಭಗೊಂಡಿಿತು. ಫಿಲಿಪ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್, ಬಳಿಕ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಆಟ ಆರ್‌ಸಿಬಿಗೆ ಸುಲಭ ಗೆಲುವು ತಂದುಕೊಟ್ಟಿತು. 17.3 ಓವರ್‌ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು ಆರ್‌ಸಿಬಿ ಗೆಲುವು ದಾಖಲಿಸಿತು.

ಒಂದೇ ಪಂದ್ಯ! ಹಲವು ದಾಖಲೆಗಳನ್ನು ಮುರಿದ ಅಭಿಷೇಕ್ ಶರ್ಮಾ! ಒಂದೇ ಪಂದ್ಯ! ಹಲವು ದಾಖಲೆಗಳನ್ನು ಮುರಿದ ಅಭಿಷೇಕ್ ಶರ್ಮಾ!

5ನೇ ಸ್ಥಾನದಿಂದ 3ನೇ ಸ್ಥಾನ
ರಾಜಸ್ಥಾನ ರಾಯಲ್ಸ್ ಮಣಿಸಿದ ಆರ್‌ಸಿಬಿ ಇದೀಗ ಐಪಿಎಲ್ 2025 ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದ. ಈ ಪಂದ್ಯಕ್ಕೂ ಮೊದಲು ಆರ್‌ಸಿಬಿ 5ನೇ ಸ್ಥಾನಕ್ಕೆ ಕುಸಿದಿತ್ತು. ಇದೀಗ ಮೊದಲ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರಾಜಮಾನವಾಗಿದೆ. ಡೆಲ್ಲಿ ಆಡಿದ ನಾಲ್ಕು ಪಂದ್ಯದಲ್ಲಿ ನಾಲ್ಕರಲ್ಲೂ ಗೆಲುವು ದಾಖಲಿಸಿದೆ. 2ನೇ ಸ್ಥಾನದಲ್ಲಿರುವ ಗುಜರಾಟ್ ಟೈಟಾನ್ಸ್ ಹಾಗೂ 3ನೇ ಸ್ಥಾನದಲ್ಲಿರುವ ಆರ್‌ಸಿಬಿ 6ರಲ್ಲಿ 4 ಪಂದ್ಯ ಗೆದ್ದುಕೊಂಡಿದೆ. ಆದರ ನೆಟ್ ರನ್‌ರೇಟ್ ಆಧಾರದಲ್ಲಿ ಗುಜರಾತ್ 2ನೇ ಸ್ಥಾನದಲ್ಲಿದೆ. ಲಖನೌ ಹಾಗೂ ಕೆಕೆಆರ್ ನಾಲ್ಕು ಮತ್ತು 5ನೇ ಸ್ಥಾನದಲ್ಲಿದೆ. 

ಆರ್‌ಸಿಬಿ ಬ್ಯಾಟಿಂಗ್
ಫಿಲಿಪ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಅಬ್ಬರದ ಬ್ಯಾಟಿಂಗ್ ರಾಜಸ್ಥಾನ ರಾಯಲ್ಸ್ ಲೆಕ್ಕಾಚಾರ ಉಲ್ಟಾ ಮಾಡಿತು. ಈ ಜೋಡಿ ಮೊದಲ ವಿಕೆಟ್‌ಗೆ 92 ರನ್ ಜೊತೆಯಾಟ ನೀಡಿತು. ಫಿಲ್ ಸಾಲ್ಟ್ 65 ರನ್ ಸಿಡಿಸಿದ್ದರು. ಅಷ್ಟರಲ್ಲೇ ಆರ್‌ಸಿಬಿ ಗೆಲುವು ಬಹುತೇಕ ಖಚಿತಗೊಂಡಿತ್ತು. ಇನ್ನು ದೇವದತ್ ಪಡಿಕ್ಕಲ್ ಜೊತೆ ಸೇರಿದ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮುಂದುವರಿಸಿದರು. ವಿರಾಟ್ ಕೊಹ್ಲಿ ಅಜೇಯ 62 ರನ್ ಸಿಡಿಸಿದರೆ, ದೇವದತ್ ಪಡಿಕ್ಕಲ್ ಅಜೇಯ 40 ರನ್ ಸಿಡಿಸಿದರು.