Asianet Suvarna News Asianet Suvarna News

Roger Federer ನಿವೃತ್ತಿಗೆ ಭಾವನಾತ್ಮಕ ಪ್ರತಿಕ್ರಿಯೆ ನೀಡಿದ ವಿರುಷ್ಕಾ ಜೋಡಿ..!

* ಟೆನಿಸ್ ಬದುಕಿಗೆ ವಿದಾಯ ಘೋಷಿಸಿದ ರೋಜರ್ ಫೆಡರರ್
* ಟೆನಿಸ್ ದಿಗ್ಗಜನಿಗೆ ಭಾವನಾತ್ಮಕ ಸಂದೇಶ ರವಾನಿಸಿದ ವಿರುಷ್ಕಾ ಜೋಡಿ
* 20 ಟೆನಿಸ್ ಗ್ರ್ಯಾನ್‌ ಸ್ಲಾಂ ಗೆದ್ದು ಬೀಗಿರುವ ರೋಜರ್ ಫೆಡರರ್

Virat Kohli Anushka Sharma heartfelt reaction to Tennis Legend Roger Federer Retirement kvn
Author
First Published Sep 16, 2022, 2:16 PM IST

ನವದೆಹಲಿ(ಸೆ.16): ಟೆನಿಸ್ ದಂತಕಥೆ ರೋಜರ್ ಫೆಡರರ್, ಸೆಪ್ಟೆಂಬರ್ 15ರಂದು ದಿಢೀರ್ ಎನ್ನುವಂತೆ ಟೆನಿಸ್ ವೃತ್ತಿ ಬದುಕಿಗೆ ವಿದಾಯ ಘೋಷಿಸಿದ್ದಾರೆ. 2021ರ ವಿಂಬಲ್ಡನ್‌ ಬಳಿಕ ಸ್ಪರ್ಧಿಸದ ಅವರು, ಮುಂದಿನ ವಾರದ ಲೇವರ್‌ ಕಪ್‌ ಟೂರ್ನಿಯಲ್ಲಿ ಕೊನೆ ಬಾರಿಗೆ ಆಡುವುದಾಗಿ ತಿಳಿಸಿದ್ದಾರೆ. ರೋಜರ್ ಫೆಡರರ್, ವಿಡಿಯೋ ಮೂಲಕ ಟ್ವಿಟರ್‌ನಲ್ಲಿ ತಮ್ಮ ಭಾವನಾತ್ಮಕ ವಿದಾಯ ಘೋಷಿಸಿದ್ದಾರೆ. 

ಸ್ಪರ್ಧಾತ್ಮಕ ಟೆನಿಸ್‌ಗೆ ಮರಳಲು ಸಾಕಷ್ಟುಪ್ರಯತ್ನ ನಡೆಸಿದೆ. ಆದರೆ ದೇಹ ಸ್ಪಂದಿಸುತ್ತಿಲ್ಲ. ಕಳೆದ 24 ವರ್ಷಗಳಲ್ಲಿ 1500ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದೇನೆ. ಟೆನಿಸ್‌ ನನಗೆ ಎಲ್ಲವನ್ನೂ ನೀಡಿದೆ. ಇದೀಗ ನಾನು ಟೆನಿಸ್‌ಗೆ ಕೊಡುಗೆ ನೀಡಬೇಕಾದ ಸಮಯ ಎಂದು ರೋಜರ್ ಫೆಡರರ್ ಹೇಳಿದ್ದಾರೆ.

ರೋಜರ್ ಫೆಡರರ್, ಟೆನಿಸ್‌ ವೃತ್ತಿಬದುಕಿಗೆ ವಿದಾಯ ಘೋಷಿಸುತ್ತಿದ್ದಂತೆಯೇ,  ಟೆನಿಸ್‌ ಜಗತ್ತು ಮಾತ್ರವಲ್ಲದೇ ಬಾಲಿವುಡ್‌, ಕ್ರಿಕೆಟ್‌ ಕ್ಷೇತ್ರ ಹೀಗೆ ಹಲವು ಕ್ಷೇತ್ರದ ಗಣ್ಯರು ಭಾವನಾತ್ಮಕವಾಗಿಯೇ ಫೆಡರರ್ ಎರಡನೇ ಇನಿಂಗ್ಸ್‌ಗೆ ಶುಭ ಹಾರೈಸಿದ್ದಾರೆ. ಇನ್ನು ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕೂಡಾ ಭಾವನಾತ್ಮಕವಾಗಿಯೇ ಟೆನಿಸ್ ದಂತಕಥೆಗೆ ಶುಭ ಹಾರೈಸಿದ್ದಾರೆ.

ಟೆನಿಸ್ ದಿಗ್ಗಜ Roger Federer ಹೆಸರಿನಲ್ಲಿರುವ 5 ಇಂಟ್ರೆಸ್ಟಿಂಗ್ ದಾಖಲೆಗಳಿವು..!

ರೋಜರ್ ಫೆಡರರ್‌ ಅವರು ನಿವೃತ್ತಿ ಘೋಷಿಸುತ್ತಿದ್ದಂತೆಯೇ, ಮಾಜಿ ನಾಯಕ ವಿರಾಟ್ ಕೊಹ್ಲಿ, ಸಾರ್ವಕಾಲಿಕ ಶ್ರೇಷ್ಠ ಟೆನಿಸಿಗ ಕಿಂಗ್ ರೋಜರ್ ಎಂದು ಹಾರ್ಟ್ ಎಮೋಜಿ ಬಳಸಿ ಶುಭ ಕೋರಿದ್ದರು.

Virat Kohli Anushka Sharma heartfelt reaction to Tennis Legend Roger Federer Retirement kvn

ಇನ್ನು ವಿರಾಟ್ ಕೊಹ್ಲಿ ಪತ್ನಿ, ಅನುಷ್ಕಾ ಶರ್ಮಾ, ಫೆಡರರ್‌ ನಿವೃತ್ತಿ ಘೋಷಿಸಿದ ವಿಡಿಯೋದೊಂದಿಗೆ 'ಜೀನಿಯನ್ಸ್‌' ಎಂದು ಹಾರ್ಟ್ ಬ್ರೋಕನ್‌ ಎಮೋಜಿ ಸ್ಟೋರಿ ಶೇರ್ ಮಾಡಿದ್ದಾರೆ. 

Virat Kohli Anushka Sharma heartfelt reaction to Tennis Legend Roger Federer Retirement kvn

ಇನ್ನು ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್, ಎಂತಹ ವೃತ್ತಿಜೀವನ ರೋಜರ್ ಫೆಡರರ್. ನಿಮ್ಮ ಬ್ರ್ಯಾಂಡ್ ಆಫ್ ಟೆನಿಸ್‌ಗೆ ನಾನು ಮಾರು ಹೋಗಿದ್ದೆ. ನಿಧಾನವಾಗಿ ನಿಮ್ಮ ಟೆನಿಸ್‌ ನನ್ನ ಪಾಲಿಗೆ ಒಂದು ಅಭ್ಯಾಸವಾಗಿ ಬದಲಾಯಿತು. ಅಭ್ಯಾಸಗಳು ಎಂದೆಂದಿಗೂ ನಿವೃತ್ತಿಯಾಗುವುದಿಲ್ಲ, ಅವು ನಮ್ಮ ಜೀವನದ ಭಾಗಗಳಾಗಿ ಬಿಡುತ್ತವೆ. ಅದ್ಭುತ ಕ್ಷಣಗಳನ್ನು ನೀಡಿದ ನಿಮಗೆ ಧನ್ಯವಾದಗಳು ಎಂದು ಫೆಡರರ್ ಫೋಟೋದೊಂದಿಗೆ ಟ್ವೀಟ್ ಮಾಡಿದ್ದಾರೆ.

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡಾ ವಿನೂತನವಾಗಿ ರೋಜರ್ ಫೆಡರರ್ ನಿವೃತ್ತಿಗೆ ಶುಭ ಹಾರೈಸಿದ್ದಾರೆ. ಯುಗಾಂತ್ಯವಾಗಿದೆ. ಟೆನಿಸ್‌ ಮೇಲೆ ಪದೇ ಪದೇ ಒಲವು ತೋರುವಂತೆ ಮಾಡಿದ, ನಿಮ್ಮ ಅದ್ಭುತ ಟೆನಿಸ್ ವೃತ್ತಿಜೀವನಕ್ಕೆ ಅಭಿನಂದನೆಗಳು ಎಂದು ಹಿಟ್‌ಮ್ಯಾನ್ ಟ್ವೀಟ್ ಮಾಡಿದ್ದಾರೆ. 

ಫೆಡರರ್‌ ವೃತ್ತಿಬದುಕಿನ ಹೈಲೈಟ್ಸ್‌

- ಒಟ್ಟು 20 ಗ್ರ್ಯಾನ್‌ ಸ್ಲಾಂ ಪ್ರಶಸ್ತಿ

- ದಾಖಲೆಯ 8 ವಿಂಬಲ್ಡನರ್‌ ಪ್ರಶಸ್ತಿ ಗೆಲುವು

- ಒಟ್ಟು 103 ಎಟಿಪಿ ಪ್ರಶಸ್ತಿ ಗೆಲುವು, ಅತಿಹೆಚ್ಚು ಪ್ರಶಸ್ತಿ ಗೆದ್ದವರ ಪಟ್ಟಿಯಲ್ಲಿ 2ನೇ ಸ್ಥಾನ

- ದಾಖಲೆಯ ಸತತ 237 ವಾರ ಸೇರಿ ಒಟ್ಟು 310 ವಾರ ವಿಶ್ವ ನಂ.1 ಆಗಿದ್ದ ಫೆಡರರ್‌

- 5 ಬಾರಿ ಕ್ಯಾಲೆಂಡರ್‌ ವರ್ಷವನ್ನು ವಿಶ್ವ ನಂ.1 ಆಗಿ ಮುಕ್ತಾಯಗೊಳಿಸಿದ ಸಾಧನೆ
 

Follow Us:
Download App:
  • android
  • ios