IND vs AFG 1st T20I: ಟಾಸ್ ವೇಳೆ ಪ್ಲೇಯಿಂಗ್ ಇಲೆವೆನ್ ಮರೆತು ಹೋದ ರೋಹಿತ್ ಶರ್ಮ
ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮ ಮರೆವಿನ ವಿಚಾರ ಹೊಸದಲ್ಲ. ಗುರುವಾರ ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಮೊದಲ ಟಿ20 ಪಂದ್ಯದ ಟಾಸ್ ವೇಳೆ ತಂಡದ ಪ್ಲೇಯಿಂಗ್ ಇಲೆವೆನ್‌ಅನ್ನೇ ಅವರು ಮರೆತಿದ್ದಾರೆ.
ನವದೆಹಲಿ (ಜ.11): ತಮ್ಮ ಸ್ಪೋಟಕ ಬ್ಯಾಟಿಂಗ್‌ಗೆ ರೋಹಿತ್ ಶರ್ಮ ಹೆಸರುವಾಸಿ. ಒಮ್ಮೊಮ್ಮೆ ಅವರು ತಮ್ಮ ಮರೆವಿನ ವಿಚಾರಕ್ಕೂ ಸಾಕಷ್ಟು ಸುದ್ದಿಯಾಗುತ್ತಾರೆ. ಈಗಾಗಲೇ ಹಲವು ಬಾರಿ ಅವರು ವಿಷಯವನ್ನು ಮರೆತಿರುವ ಕುರಿತಾದ ವಿಡಿಯೋಗಳು ವೈರಲ್ ಆಗಿವೆ. ಅದಕ್ಕೆ ಹೊಸ ಸೇರ್ಪಡೆ ಎನ್ನುವಂತೆ ಭಾರತ ಹಾಗೂ ಅಫ್ಘಾನಿಸ್ತಾನ ನಡುವೆ ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ನಡೆದ ಟಿ20 ಪಂದ್ಯದ ವೇಳೆ ಅವರು ತಂಡ ಪ್ಲೇಯಿಂಗ್ ಇಲೆವೆನ್ ಅನ್ನೇ ಟಾಸ್ ವೇಳೆ ಮರೆತುಹೋಗಿದ್ದಾರೆ. ಪಂದ್ಯದ ಟಾಸ್ ವೇಳೆ ರೋಹಿತ್ ಶರ್ಮಗೆ ಪ್ಲೇಯಿಂಗ್ ಇಲೆವೆನ್ ಬಗ್ಗೆ ಪ್ರಶ್ನೆ ಕೇಳಿದ್ದರು. ಈ ವೇಳೆ ಮಾತನಾಡಿದ ರೋಹಿತ್ ಶರ್ಮ ತಂಡದ ಪ್ಲೇಯಿಂಗ್ ಇಲೆವೆನ್ ಭಾಗವಾಗಿರದ ವ್ಯಕ್ತಿಗಳ ಬಗ್ಗೆ ಮಾತನಾಡುತ್ತಾಮ ಸಂಜು ಸ್ಯಾಮ್ಸನ್, ಆವೇಶ್ ಖಾನ್ ಹಾಗೂ ಯಶಸ್ವಿ ಜೈಸ್ವಾಲ್ ಅವರ ಹೆಸರುಗಳನ್ನು ಹೇಳಿದರು. ಆದರೆ, ಕುಲದೀಪ್ ಯಾದವ್ ಅವರ ಹೆಸರನ್ನು ಮರೆತುಹೋಗಿದ್ದರು. ಈ ವೇಳೆ ಮುರಳಿ ಕಾರ್ತಿಕ್ ಅವರಿಗೆ ಕುಲದೀಪ್ ಅವರ ಹೆಸರನ್ನು ನೆನಪಿಸಿದರು. ಒಂದು ಕ್ಷಣಕ್ಕೆ ರೋಹಿತ್ ಶರ್ಮ ಮತ್ತೊಮ್ಮೆ ಅವರ ಲಭ್ಯತೆಯ ಬಗ್ಗೆ ಗೊಂದಲಕ್ಕೆ ಒಳಗಾಗಿದ್ದರು.
ನಾವು ಮೊದಲು ಬೌಲಿಂಗ್ ಮಾಡಲಿದ್ದೇನೆ. ಅದಕ್ಕಾಗಿ ವಿಶೇಷ ಕಾರಣವೇನಿಲ್ಲ. ಇಲ್ಲಿನ ಪಿಚ್ ಉತ್ತಮವಾಗಿದ್ದು, ಹೆಚ್ಚಾಗಿ ಬದಲಾಗೋದಿಲ್ಲ. ಈ ಮೂರು ಪಂದ್ಯಗಳಿಂದ ಸಾಕಷ್ಟು ಕಲಿಯಲಿದ್ದೇವೆ. ವಿಶ್ವಕಪ್ ವೇಳೆ ನಮಗೆ ಆಡಲು ಸಾಕಷ್ಟು ಟಿ20 ಪಂದ್ಯಗಳಿಲ್ಲ. ಐಪಿಎಲ್ ಇದೆ. ಆದರೆ, ಇದು ಅಂತಾರಾಷ್ಟ್ರೀಯ ಪಂದ್ಯ. ಇದರಲ್ಲಿ ಏನಾದರೂ ಸಾಧಿಸಲಿದ್ದೇವೆ ಎಂದು ರೋಹಿತ್ ಪಂದ್ಯದ ವೇಳೆ ಹೇಳಿದರು.
ಭಾರತದಲ್ಲಿ ಅತ್ಯಂತ ದುಬಾರಿ ಬಂಗಲೆ ಹೊಂದಿರೋ ಕ್ರಿಕೆಟಿಗ; ಕೊಹ್ಲಿ, ಧೋನಿ, ತೆಂಡೂಲ್ಕರ್ ಅಲ್ಲ ಮತ್ಯಾರು?
ಈಗಾಗಲೇ ರಾಹುಲ್ ದ್ರಾವಿಡ್ ಅವರೊಂದಿಗೆ ಮುಂದಿನ ದಿನಗಳಲ್ಲಿ ತಂಡದ ಕಾಂಬಿನೇಷನ್ ಹೇಗಿರಬೇಕು ಎನ್ನುವ ಬಗ್ಗೆ ಮಾತನಾಡಿದ್ದೇವೆ. ಒಂದು ತಂಡವಾಗಿ ನಾವು ಇದನ್ನು ಸಾಧಿಸಬೇಕಿದೆ. ಅದನ್ನೇ ಈ ಸರಣಿಯಲ್ಲಿ ಮಾಡಲಿದ್ದೇವೆ. ಆದರೆ, ಗೆಲುವು ಎಲ್ಲದಕ್ಕಿಂತ ಮುಖ್ಯವಾದುದು. ಸಂಜು ಸ್ಯಾಮ್ಸನ್, ಆವೇಶ್, ಯಶಸ್ವಿ ಹಾಗೂ ಕುಲದೀಪ್ ಯಾದವ್ ಪಂದ್ಯ ತಪ್ಪಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
'ರೋಹಿತ್ ಶರ್ಮ ತರ ಇರ್ಬೇಕು..' ವಿಶ್ವಕಪ್‌ಗೂ ಮುನ್ನ ಶುರುವಾಯ್ತು ಬಾಂಗ್ಲಾ ಟೀಮ್‌ನಲ್ಲಿ ಕಿತ್ತಾಟ!