Asianet Suvarna News Asianet Suvarna News

ಅಂಡರ್‌ 19 ವಿಶ್ವಕಪ್‌: ಜಯದ ವಿಶ್ವಾಸದಲ್ಲಿ ಪ್ರಿಯಂ ಗರ್ಗ್‌ ಪಡೆ

ಹಾಲಿ ಚಾಂಪಿಯನ್ ಭಾರತ ತಂಡವು ಅಂಡರ್ 19 ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲು ಸಜ್ಜಾಗಿದೆ. ಪ್ರಿಯಂ ಗರ್ಗ್‌ ತಂಡವನ್ನು ಮುನ್ನಡೆಸಲಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.

Under 19 World Cup Defending champions India start firm favorites against Sri Lanka
Author
New Delhi, First Published Jan 19, 2020, 11:56 AM IST
  • Facebook
  • Twitter
  • Whatsapp

ಬ್ಲೊಮ್‌ಫೋಟೆನ್‌(ಜ.19): ಅಂಡರ್‌ 19 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಹಾಲಿ ಚಾಂಪಿಯನ್‌ ಭಾರತ ತಂಡ, ಭಾನುವಾರ ಶ್ರೀಲಂಕಾ ತಂಡವನ್ನು ಎದುರಿಸಲಿದೆ.

ಅಂಡರ್-19 ವಿಶ್ವಕಪ್‌ಗೆ ಭಾರತ ತಂಡ ಪ್ರಕಟ: ಯಾರಿಗೆಲ್ಲ ಚಾನ್ಸ್..?

ಕಳೆದ 4 ಆವೃತ್ತಿಗಳಲ್ಲಿ ಭಾರತ 2 ಬಾರಿ ಪ್ರಶಸ್ತಿ ಗೆದ್ದಿದ್ದರೆ ಒಂದು ಬಾರಿ ರನ್ನರ್‌ ಅಪ್‌ ಆಗಿ ಹೊರಹೊಮ್ಮಿತ್ತು. ಈ ಬಾರಿ ಮತ್ತೆ ಚಾಂಪಿಯನ್‌ ಆಗುವ ವಿಶ್ವಾಸದಲ್ಲಿ ಕಣಕ್ಕಿಳಿಯುತ್ತಿದೆ. ಪೂರ್ವಭಾವಿ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ತೋರಿದ್ದು, ಟೂರ್ನಿಯಲ್ಲಿ ತಾನಾಡುವ ಮೊದಲ ಪಂದ್ಯದಲ್ಲಿ ಶುಭಾರಂಭದ ಉತ್ಸಾಹದಲ್ಲಿದೆ.

ಚಿನ್ನಸ್ವಾಮಿಯಲ್ಲಿಂದು ಇಂಡೋ-ಆಸೀಸ್ ಕ್ಲೈಮ್ಯಾಕ್ಸ್‌ ಕದನ!

ಪ್ರಿಯಂ ಗರ್ಗ್‌ ತಂಡವನ್ನು ಮುನ್ನಡೆಸುತ್ತಿದ್ದಾರೆ. ಯಶಸ್ವಿ ಜೈಸ್ವಾಲ್‌, ತಿಲಕ್‌ ವರ್ಮಾ, ದಿವ್ಯಾನ್ಶ್ ಸಕ್ಸೇನಾ, ದ್ರುವ್‌ ಜುರೆಲ್‌ ಅವರಂತಹ ಪ್ರತಿಭಾವಂತ ಆಟಗಾರರಿದ್ದಾರೆ. ಇನ್ನು ಕರ್ನಾಟಕದ ಶುಭಾಂಗ್‌ ಹೆಗ್ಡೆ ಹಾಗೂ ವಿದ್ಯಾಧರ್‌ ಪಾಟೀಲ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ,
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

 

Follow Us:
Download App:
  • android
  • ios