ಮುಂಬೈ(ಫೆ.27): ಭಾರತ ಹಾಗೂ ಇಂಗ್ಲೆಂಡ್ ನಡುವಿನ ಕ್ರಿಕೆಟ್ ಸರಣಿ ಆರಂಭಕ್ಕೂ ಮುನ್ನವೇ ಅಭಿಮಾನಿಗಳ ಪ್ರವೇಶಕ್ಕೆ ಬಿಸಿಸಿಐ ಮನಸ್ಸು ಮಾಡಿತ್ತು. ಈ ಕುರಿತು ಅಭಿಮಾನಿಗಗಳಿಗೆ ಸಿಹಿ ಸುದ್ದಿ ನೀಡಿತ್ತು. ಆದರೆ ಪುಣೆಯಲ್ಲಿ ಆಯೋಜಿಸಿರುವ 3 ಪಂದ್ಯಗಳ ಏಕದಿನ ಸರಣಿಗೆ ಅಭಿಮಾನಿಗಳ ಪ್ರವೇಶ ಇಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸ್ಪಷ್ಟಪಡಿಸಿದ್ದಾರೆ.

ಜಸ್ಪ್ರೀತ್ ಮನವಿಗೆ ಸ್ಪಂದಿಸಿದ ಬಿಸಿಸಿಐ; 4ನೇ ಟೆಸ್ಟ್ ಪಂದ್ಯಕ್ಕೆ ಬುಮ್ರಾ ಅಲಭ್ಯ!

ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್ ಹೆಚ್ಚಾಗುತ್ತಿರುವ ಕಾರಣ, ಉದ್ಧವ್ ಠಾಕ್ರೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಮದುವೆ ಸಮಾರಂಭ, ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಲಾಗಿದೆ. ಆದರೆ ಕ್ರಿಕೆಟ್ ಸರಣಿಗೆ ಗ್ರೀನ್ ಸಿಗ್ನಿಲ್ ನೀಡಿರುವ ಮುಖ್ಯಮಂತ್ರಿ, ಅಭಿಮಾನಿಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

ಮಾರ್ಚ್ 23 ರಿಂದ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಮೂರು ಪಂದ್ಯದ ಏಕದಿನ ಸರಣಿ ಆಯೋಜಿಸಲಾಗಿದೆ. 

ಏಕದಿನ ಸರಣಿ:
ಮಾರ್ಚ್ 23: ಭಾರತ-ಇಂಗ್ಲೆಂಡ್ 1ನೇ ಏಕದಿನ
ಮಾರ್ಚ್ 26: ಭಾರತ-ಇಂಗ್ಲೆಂಡ್ 2ನೇ ಏಕದಿನ
ಮಾರ್ಚ್ 28: ಭಾರತ-ಇಂಗ್ಲೆಂಡ್ 3ನೇ ಏಕದಿನ