Asianet Suvarna News Asianet Suvarna News

28ನೇ ವಯಸ್ಸಿಗೆ ಭಾರತೀಯ ಕ್ರಿಕೆಟ್‌ಗೆ ಉನ್ಮಕ್ತ್ ಚಾಂದ್‌ ಗುಡ್‌ ಬೈ..!

* ಭಾರತೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಅಂಡರ್ 19 ವಿಶ್ವಕಪ್ ಗೆದ್ದುಕೊಟ್ಟ ನಾಯಕ

* ತಮ್ಮ 28ನೇ ವಯಸ್ಸಿಗೆ ಚಾಂದ್ ಗುಡ್‌ ಬೈ

* ಅಮೆರಿಕದಲ್ಲಿ ಟಿ20 ಲೀಗ್‌ ಆಡಲು ಚಾಂದ್ ತೀರ್ಮಾನ

U19 World Cup winning Indian captain Unmukt Chand announces retirement at the Age 28 kvn
Author
Mumbai, First Published Aug 14, 2021, 9:01 AM IST
  • Facebook
  • Twitter
  • Whatsapp

ಮುಂಬೈ(ಆ.14): ಅಂಡರ್‌-19 ವಿಶ್ವಕಪ್‌ ವಿಜೇತ ನಾಯಕ ಉನ್ಮುಕ್ತ್ ಚಾಂದ್‌ ತಮ್ಮ 28ನೇ ವಯಸ್ಸಿಗೆ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿದ್ದಾರೆ. ಅವರು ಅಮೆರಿಕದಲ್ಲಿ ಟಿ20 ಲೀಗ್‌ ಆಡಲು ತೆರಳಲಿದ್ದಾರೆ ಎನ್ನಲಾಗಿದೆ. ವಿದೇಶಿ ಲೀಗ್‌ಗಳಲ್ಲಿ ಆಡಬೇಕಿದ್ದರೆ ಭಾರತೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಬೇಕು ಎನ್ನುವ ಬಿಸಿಸಿಐ ನಿಯಮವನ್ನು ಚಾಂದ್‌ ಪಾಲಿಸಿದ್ದಾರೆ.

2012ರ ಅಂಡರ್‌-19 ವಿಶ್ವಕಪ್‌ನಲ್ಲಿ ಭಾರತ, ಚಾಂದ್‌ ನೇತೃತ್ವದಲ್ಲಿ ಚಾಂಪಿಯನ್‌ ಆಗಿತ್ತು. ಆಸ್ಪ್ರೇಲಿಯಾ ವಿರುದ್ಧದ ಫೈನಲ್‌ನಲ್ಲಿ ಚಾಂದ್‌ ಅಜೇಯ 111 ರನ್‌ ಸಿಡಿಸಿದ್ದರು. ಆದರೆ ಅಂಡರ್‌-19 ವಿಭಾಗದಲ್ಲಿ ಸಾಧಿಸಿದ ಯಶಸ್ಸನ್ನು ಆ ಬಳಿಕ ಮುಂದುವರಿಸುವಲ್ಲಿ ಚಾಂದ್‌ ವಿಫಲರಾಗಿದ್ದರು. ಐಪಿಎಲ್‌ನಲ್ಲಿ ಹಲವು ಅವಕಾಶಗಳು ಸಿಕ್ಕರೂ ಅವುಗಳ ಉಪಯೋಗ ಪಡೆಯಲಿಲ್ಲ.

ಐಸಿಸಿ ಟಿ20 ವಿಶ್ವಕಪ್ ಗೆಲ್ಲಬಲ್ಲ 2 ತಂಡಗಳನ್ನು ಹೆಸರಿಸಿದ ಹರ್ಷಲ್‌ ಗಿಬ್ಸ್‌..!

ದೆಹಲಿ, ಉತ್ತರಾಖಂಡ ಪರ ರಣಜಿ ಟ್ರೋಫಿಯಲ್ಲಿ ಉನ್ಮುತ್‌ ಆಡಿದ್ದರು. ಒಟ್ಟು 67 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಅವರು 8 ಶತಕ, 16 ಅರ್ಧಶತಕಗಳೊಂದಿಗೆ 3,379 ರನ್‌ ಕಲೆಹಾಕಿದ್ದಾರೆ.

Follow Us:
Download App:
  • android
  • ios