ಕಳೆದ ವರ್ಷ ನ.19ರಂದು ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ, ರೋಹಿತ್ ಶರ್ಮಾ ಪಡೆ ಕಣ್ಣೀರಿಡುವಂತೆ ಮಾಡಿತ್ತು. ಇದೀಗ ಮತ್ತೊಂದು ವಿಶ್ವಕಪ್ ಫೈನಲ್‌ನಲ್ಲಿ ಭಾರತ-ಆಸೀಸ್ ಕಾದಾಡಲಿದ್ದು, ಉದಯ್ ಸಹರನ್ ಪಡೆ ಸೇಡಿಗೆ ಕಾಯುತ್ತಿದೆ. ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ಅಜೇಯವಾಗಿ ಫೈನಲ್‌ಗೇರಿರುವ ಭಾರತವೇ ಈ ಪಂದ್ಯದಲ್ಲೂ ಗೆಲ್ಲುವ ಫೇವರಿಟ್ ಎನಿಸಿದೆ.
ಬೆನೋನಿ (ಫೆ.11): 5 ಬಾರಿಯ ಚಾಂಪಿಯನ್ ಭಾರತ ಹಾಗೂ ಬಲಿಷ್ಠ ಆಸ್ಟ್ರೇಲಿಯಾ ಕ್ರಿಕೆಟ್ ತಂಡಗಳು ಇಂದು ಅಂಡರ್ 19 ವಿಶ್ವಕಪ್ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದು ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ವಿಲ್ಮೋರೆ ಪಾರ್ಕ್ ಮೈದಾನ ಆತಿಥ್ಯವನ್ನು ವಹಿಸಿದೆ.
ಕಳೆದ ವರ್ಷ ನ.19ರಂದು ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ, ರೋಹಿತ್ ಶರ್ಮಾ ಪಡೆ ಕಣ್ಣೀರಿಡುವಂತೆ ಮಾಡಿತ್ತು. ಇದೀಗ ಮತ್ತೊಂದು ವಿಶ್ವಕಪ್ ಫೈನಲ್‌ನಲ್ಲಿ ಭಾರತ-ಆಸೀಸ್ ಕಾದಾಡಲಿದ್ದು, ಉದಯ್ ಸಹರನ್ ಪಡೆ ಸೇಡಿಗೆ ಕಾಯುತ್ತಿದೆ. ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ಅಜೇಯವಾಗಿ ಫೈನಲ್‌ಗೇರಿರುವ ಭಾರತವೇ ಈ ಪಂದ್ಯದಲ್ಲೂ ಗೆಲ್ಲುವ ಫೇವರಿಟ್ ಎನಿಸಿದೆ.
ಸಚಿನ್ ಧಾಸ್, ಉದಯ್ ಸಹರನ್, ಮುಷೀರ್ ಖಾನ್, ಸೌಮಿಕುಮಾರ್ ಪಾಂಡೆ, ನಮನ್ ತಿವಾರಿ, ಲಾಜ್ ಲಿಂಬಾನಿ ಹೀಗೆ ಹಲವು ಹೀರೋಗಳು ಉದಯಿಸಿದ್ದು, ಫೈನಲ್‌ನಲ್ಲೂ ಅಬ್ಬರಿಸಲು ಸಜ್ಜಾಗಿದ್ದಾರೆ.
ಆಸ್ಟ್ರೇಲಿಯಾ ಕೂಡ ತನಗೆ ಎದುರಾದ ಎಲ್ಲಾ ಸವಾಲುಗಳನ್ನು ಮೀರಿ ಫೈನಲ್‌ಗೇರಿದೆ. ಹೀಗಾಗಿ, ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಪ್ರಶಸ್ತಿಗಾಗಿ ಭರ್ಜರಿ ಪೈಪೋಟಿ ಏರ್ಪಡಲಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.
ಸತತ 5ನೇ ಫೈನಲ್ ಆಡಲಿರುವ ಭಾರತ
2016ರಿಂದ ಭಾರತ ಸತತ 5 ಬಾರಿ ಫೈನಲ್ ಪ್ರವೇಶಿಸಿದೆ. 2018, 2022ರಲ್ಲಿ ಭಾರತ ಚಾಂಪಿಯನ್ ಆದರೆ, 2016 ಹಾಗೂ 2020ರಲ್ಲಿ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಈ ಬಾರಿ ಮತ್ತೊಮ್ಮೆ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ.
ಆಸ್ಟ್ರೇಲಿಯಾಗೆ 3ನೇ ಟ್ರೋಫಿ ಗೆಲ್ಲುವ ಗುರಿ
1988ರ ಉದ್ಘಾಟನಾ ಆವೃತ್ತಿಯಲ್ಲಿ ಚಾಂಪಿಯನ್ ಆಗಿದ್ದ ಆಸ್ಟ್ರೇಲಿಯಾ ಆ ಬಳಿಕ 2010ರಲ್ಲಿ 2ನೇ ಪ್ರಶಸ್ತಿ ಜಯಿಸಿತ್ತು. ಇದೀಗ 14 ವರ್ಷ ಬಳಿಕ ಮತ್ತೆ ಟ್ರೋಫಿ ಎತ್ತಿಹಿಡಿಯಲು ಕಾತರಿಸುತ್ತಿದೆ. 2012, 2018ರಲ್ಲಿ ಆಸೀಸ್ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.
ತಂಡಗಳು ಹೀಗಿವೆ ನೋಡಿ:
ಆಸ್ಟ್ರೇಲಿಯಾ: ಹ್ಯಾರಿ ಡಿಕ್ಸನ್, ಸ್ಯಾಮ್ ಕೊನಾಟ್ಸ್, ಹ್ಯೂ ವೈಯ್ಬನ್(ನಾಯಕ), ಹರ್ಜಸ್ ಸಿಂಗ್, ರಿಯಾಮ್ ಹಿಕ್ಸ್(ವಿಕೆಟ್ ಕೀಪರ್), ಓಲಿವರ್ ಪೀಕೆ, ರಫ್ ಮೆಕ್‌ಮಿಲನ್, ಚಾರ್ಲಿ ಆಂಡರ್‌ಸನ್, ಟಾಮ್ ಸ್ಟ್ರೇಕರ್, ಮಹಿಲ್ ಬೀಯರ್ಡ್‌ಮನ್, ಕಾಲಂ ವಿಲ್ಡರ್.
ಭಾರತ: ಆದರ್ಶ್ ಸಿಂಗ್, ಅರ್ಶಿನ್ ಕುಲ್ಕರ್ಣಿ, ಮುಶೀರ್ ಖಾನ್, ಉದಯ್ ಸಹರನ್(ನಾಯಕ), ಪ್ರಿಯಾನ್ಶು ಮೊಲಿಯಾ, ಸಚಿನ್ ಧಾಸ್, ಅರಾವೆಲ್ಲಿ ಅವಿನಾಶ್(ವಿಕೆಟ್ ಕೀಪರ್), ಮುರುಗನ್ ಅಭಿಷೇಕ್, ರಾಜ್ ಲಿಂಬಾನಿ, ನಮನ್ ತಿವಾರಿ, ಸೌಮ್ಯ ಪಾಂಡೆ.
ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
