*ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್*ಮಳೆಯಿಂದ ಅಂತಿಮ ದಿನದಾಟ ಒಂದು ಎಸೆತ ಕಾಣದೆ ರದ್ದು *ಗೆಲುವಿನ ಪಂದ್ಯ ಮಳೆಯಿಂದಾಗಿ ಡ್ರಾ, ಭಾರತಕ್ಕೆ ನಿರಾಸೆ

ನಾಟಿಂಗ್‌ಹ್ಯಾಮ್(ಆ.08): ಇಂಗ್ಲೆಂಡ್ ತಂಡದ ಪ್ರಾರ್ಥನೆ ಫಲಿಸಿದೆ. ಸೋಲಿನ ಸುಳಿಯಿಂದ ಪಾರಾಗಲು ಇಂಗ್ಲೆಂಡ್‌ಗೆ ಮಳೆ ಹೊರತು ಪಡಿಸಿದರೆ ಇನ್ಯಾವ ದಾರಿ ಉಳಿದಿರಲಿಲ್ಲ. ಇದರಂತೆ ಅಂತಿಮ ದಿನದಾಟ ಒಂದು ಎಸೆತವೂ ಕಾಣದೇ ರದ್ದಾಗಿದೆ. ಪರಿಣಾಣ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ.

ಮಳೆಯಿಂದ ಪಂದ್ಯ ವಿಳಂಬ; ಟೀಂ ಇಂಡಿಯಾ ಗೆಲುವಿಗೆ ಬೇಕು 157 ರನ್!

ಮೊದಲ ಟೆಸ್ಟ್ ಪಂದ್ಯದಲ್ಲಿ ದಿಟ್ಟ ಹೋರಾಟ ನೀಡಿದ್ದ ಟೀಂ ಇಂಡಿಯಾ ಗೆಲುವಿನ ಅರ್ಹ ತಂಡವಾಗಿತ್ತು. ಅಂತಿಮ ದಿನದಾಟದಲ್ಲಿ ಟೀಂ ಇಂಡಿಯಾ ಗೆಲುವಿಗೆ ಕೇವಲ 157 ರನ್‌ಗಳ ಅವಶ್ಯಕತೆ ಇತ್ತು. ನಾಲ್ಕನೇ ದಿನದಾಟದಲ್ಲಿ 1 ವಿಕೆಟ್ ಕಳೆದುಕೊಂಡಿದ್ದ ಟೀಂ ಇಂಡಿಯಾ 52 ರನ್ ಸಿಡಿಸಿತ್ತು. ಹೀಗಾಗಿ ಭಾರತಕ್ಕೆ ಗೆಲುವು ಬಹುತೇಕ ಖಚಿತಗೊಂಡಿತ್ತು. ಆದರೆ ಟೀಂ ಇಂಡಿಯಾ ಕನಸು ಸಾಕಾರಗೊಳ್ಳಲು ಮಳೆ ಅವಕಾಶ ನೀಡಲಿಲ್ಲ. ದಿನವಿಡಿ ಸುರಿದ ಮಳೆಯಿಂದ ಪಂದ್ಯ ಡ್ರಾ ಮಾಡಲಾಗಿದೆ.

ಗರಿಷ್ಠ ಟೆಸ್ಟ್‌ ವಿಕೆಟ್‌ ಸಾಧನೆ: ಕುಂಬ್ಳೆ ದಾಖಲೆ ಮರಿದ ಆ್ಯಂಡರ್‌ಸನ್‌, ಶಹಬ್ಬಾಶ್ ಎಂದ ಜಂಬೋ

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್:
ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಇಂಗ್ಲೆಂಡ್ 183 ರನ್ ಸಿಡಿಸಿ ಆಲೌಟ್ ಆಯಿತು. ಜೋ ರೂಟ್ ಸಿಡಿಸಿದ 64 ರನ್ ಹೊರತುಪಡಿಸಿದರೆ ಇನ್ಯಾರು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಲಿಲ್ಲ.

ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್
ಇಂಗ್ಲೆಂಡ್ ಇನ್ನಿಂಗ್ಸ್‌ಗೆ ಉತ್ತರವಾಗಿ ಟೀಂ ಇಂಡಿಯಾ ದಿಟ್ಟ ಹೋರಾಟ ನೀಡಿತ್ತು. ದಿಢೀರ್ ವಿಕೆಟ್ ಪತನದ ನಡುವೆ ಕೆಎಲ್ ರಾಹುಲ್ 84 ರನ್ ಹಾಗೂ ರವೀಂದ್ರ ಜಡೇಜಾ ಸಿಡಿಸಿದ 56 ರನ್ ನೆರವಿನಿಂದ 278 ರನ್ ಸಿಡಿಸಿತು. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ 95 ರನ್ ಮುನ್ನಡೆ ಕಾಯ್ದುಕೊಂಡಿತು.

ಇಂಗ್ಲೆಂಡ್ 2ನೇ ಇನ್ನಿಂಗ್ಸ್:
2ನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ದಿಟ್ಟ ಹೋರಾಟ ನೀಡಿತು. ನಾಯಕ ಡೋ ರೂಟ್ ಭರ್ಜರಿ ಶತಕ ಸಿಡಿಸಿ ಮಿಂಚಿದರು. ಇದರೊಂದಿಗೆ ಇಂಗ್ಲೆಂಡ್ 303 ರನ್ ಪೇರಿಸಿತು. ಆದರೆ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ಮುನ್ನಡೆ ಕಾರಣ ಭಾರತಕ್ಕೆ 209 ರನ್ ಗುರಿ ನೀಡಲಾಗಿತ್ತು