Asianet Suvarna News Asianet Suvarna News

ಗಂಭೀರ್ ಕೋಚಿಂಗ್, ಸೂರ್ಯ ನಾಯಕತ್ವದಲ್ಲಿ ಭಾರತಕ್ಕೆ ಲಂಕಾ ವಿರುದ್ಧ ಸರಣಿ ಗೆಲುವು

ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಟೀಂ ಇಂಡಿಯಾ  ಇನ್ನೊಂದು ಪಂದ್ಯ ಬಾಕಿ ಇರುವಂತೆ ಸರಣಿ ಗೆಲುವು ದಾಖಲಿಸಿದೆ.  ಗೌತಮ್ ಗಂಭೀರ್ ಕೋಚಿಂಗ್, ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಇದೇ ಮೊದಲ ಬಾರಿ ಕಣಕ್ಕಿಳಿದ ಟೀಂ ಇಂಡಿಯಾ 2ನೇ ಪಂದ್ಯದಲ್ಲಿ ಲಂಕಾ ಮಣಿಸಿ ಸರಣಿ ಗೆದ್ದಕೊಂಡಿದೆ.
 

Team India thrash Sri lanka by 7 wicket first victory for Captain Suryakumar and coach Gambhir ckm
Author
First Published Jul 28, 2024, 11:24 PM IST | Last Updated Jul 29, 2024, 12:16 AM IST

ಪಲ್ಲಕೆಲೆ(ಜು.28) ಶ್ರೀಲಂಕಾ ವಿರುದ್ದದ ಟಿ20 ಟೂರ್ನಿಯಲ್ಲಿ ಟೀಂ ಇಂಡಿಯಾ ಸರಣಿ ಗೆಲುವಿನ ಆರಂಭ ಪಡೆದಿದೆ. ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಟಿ20  ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಸೂರ್ಯಕುಮಾರ್ ನಾಯಕತ್ವದಲ್ಲಿ ಟೀಂ ಇಂಡಿಯಾ ಕಣಕ್ಕಿಳಿದಿದೆ. ಇಷ್ಟೇ ಅಲ್ಲ ಗೌತಮ್ ಗಂಭೀರ್ ಟೀಂ ಇಂಡಿಯಾ ಕೋಚ್ ಆಗಿಯೂ ಇದು ಮೊದಲ ಸರಣಿ. ಮೊದಲ ಪ್ರಯತ್ನದಲ್ಲೇ ಗಂಭೀರ್ ಹಾಗೂ ಸೂರ್ಯಕುಮಾರ್ ಯಾದವ್ ಗೆಲುವಿನ ಸಿಹಿ ಕಂಡಿದ್ದಾರೆ. ಶ್ರೀಲಂಕಾ ವಿರುದ್ದದ 2ನೇ ಟಿ20 ಪಂದ್ಯಕ್ಕೆ  ಮಳೆಯಿಂದಾಗ ಡಕ್ ವರ್ತ್ ನಿಯಮ ಅನ್ವಯಿಸಲಾಗಿದೆ. ಹೀಗಾಗಿ 78 ರನ್ ಟಾರ್ಗೆಟ್ ಚೇಸ್ ಮಾಡಿದ ಟೀಂ ಇಂಡಿಯಾ 7 ವಿಕೆಟ್ ಗೆಲುವು ದಾಖಲಿಸಿದೆ.ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ ಇನ್ನೊಂದು ಪಂದ್ಯ ಬಾಕಿ ಇರುವಂತೆ 2-0 ಅಂತರದಲ್ಲಿ ಸರಣಿ ಗೆದ್ದುಕೊಂಡಿದೆ.

ಶ್ರೀಲಂಕಾ 161 ರನ್ ಸಿಡಿಸಿತ್ತು. ಆದರೆ ಮಳೆ ಕಾರಣ ಭಾರತ ಇನ್ನಿಂಗ್ಸ್ ಆರಂಭಿಸಲು ವಿಳಂಭಾಗಿತ್ತು. ಹೀಗಾಗಿ ಡಕ್ ವರ್ತ್ ನಿಯಮ ಅನ್ವಯಿಸಲಾಗಿತ್ತು. 8 ಓವರ್‌ನಲ್ಲಿ ಭಾರತಕ್ಕೆ 78 ರನ್ ಟಾರ್ಗೆಟ್ ನೀಡಲಾಗಿತ್ತು. ಆದರೆ ಸಂಜು ಸ್ಯಾಮ್ಸನ್ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ನಿರಾಸೆ ಅನುಭವಿಸಿದ್ದರು. 

ಪ್ಯಾರಿಸ್ ಒಲಿಂಪಿಕ್ಸ್ ಪದಕ ಬೇಟೆಯಾಡಿದ ಮನು ಭಾಕರ್ ಬಗ್ಗೆ ನಿಮಗೆ ಗೊತ್ತಿರದ ಇಂಟ್ರೆಸ್ಟಿಂಗ್ ಸಂಗತಿಗಳಿವು!

ಯಶಸ್ವಿ ಜೈಸ್ವಾಲ್ ಹಾಗೂ ನಾಯಕ ಸೂರ್ಯಕುಮಾರ್ ಯಾದವ್ ಜೊತೆಯಾಟ ಟೀಂ ಇಂಡಿಯಾ ಗೆಲುವಿನ ಹಾದಿ ಸುಗಮಗೊಳಿಸಿತು. ಜೈಸ್ವಾಲ್ 15 ಎಸೆತದಲ್ಲಿ 30 ರನ್ ಸಿಡಿಸಿದ್ದರು. ಇತ್ತ ಸೂರ್ಯಕುಮಾರ್ ಯಾದವ್ 12 ಎಸೆತದಲ್ಲಿ 26 ರನ್ ಸಿಡಿಸಿ ಔಟಾದರು. ಇತ್ತ ಹಾರ್ದಿಕ್ ಪಾಂಡ್ಯ ಸ್ಫೋಟಕ ಬ್ಯಾಟಿಂಗ್ ಟೀಂ ಇಂಡಿಯಾ ಗೆಲುವು ಖಚಿತಪಡಿಸಿತು. ಪಾಂಡ್ಯ ಕೇವಲ 9 ಎಸೆತದಲ್ಲಿ ಅಜೇಯ  22 ರನ್ ಸಿಡಿಸಿದರು. ರಿಷಬ್ ಪಂತ್ ಅಜೇಯ 2 ರನ್ ಸಿಡಿಸಿದರು. ಈ ಮೂಲಕ ಇನ್ನು 3 ಎಸೆತ ಬಾಕಿ ಇರುವಂತೆ ಭಾರತ 7 ವಿಕೆಟ್ ಗೆಲುವು ಸಾಧಿಸಿತು.

ಮಹಿಳಾ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಶ್ರೀಲಂಕಾ ಮುಖಾಮುಖಿಯಾಗಿತ್ತು. ಇಂದು ನಡೆದ ಈ ಪಂದ್ಯದಲ್ಲಿ ಭಾರತ ಮುಗ್ಗರಿಸಿತ್ತು. ಇದರ ಪರಿಣಾಮ ಶ್ರೀಲಂಕಾ ಚಾಂಪಿಯನ್ ಆದರೆ, ಭಾರತ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಈ ಸೋಲಿನ ನಿರಾಸೆ ಇದೀಗ ಭಾರತ ಪುರುಷರ ಗೆಲುವು ಸಮಾಧಾನ ತಂದಿದೆ. 

ಟಿ20 ವಿಶ್ವಕಪ್ ಗೆದ್ದು ಮುಂಬೈ ರಸ್ತೆಯಲ್ಲಿ ಬಿಂದಾಸ್ ಡ್ರೈವ್ ಮಾಡಿದ ರೋಹಿತ್ ಶರ್ಮಾ..! ಗಮನ ಸೆಳೆದ ಹಿಟ್‌ಮ್ಯಾನ್ ಕಾರ್ ನಂಬರ್‌

ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 161 ರನ್ ಸಿಡಿಸಿತ್ತು.ಕುಸಾಲ್ ಪರೇರ್ 53 ರನ್ ಸಿಡಿಸಿ ಮಿಂಚಿದರು . ಪಥುಮ್ ನಿಸಂಕಾ 32 ರನ್ ಸಿಡಿಸಿದರು.

 

Latest Videos
Follow Us:
Download App:
  • android
  • ios