ನವದೆಹಲಿ(ಜೂ.22): ವಿಶ್ವ ಅಪ್ಪಂದಿರ ದಿನಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಜಾಲತಾಣಗಳಲ್ಲಿ ಭಾವನಾತ್ಮಕ ಸಂದೇಶ ಪೋಸ್ಟ್‌ ಮಾಡಿದ್ದಾರೆ. ಜೂನ್ 21ರಂದು ಜಗತ್ತಿನಾದ್ಯಂತ ಫಾರರ್ಸ್ ಡೇ ಅನ್ನಾಗಿ ಆಚರಿಸಲಾಗುತ್ತದೆ. 

‘ನಿಮ್ಮ ತಂದೆಯ ಪ್ರೀತಿ ಮತ್ತು ಬೆಂಬಲಕ್ಕೆ ಕೃತಜ್ಞರಾಗಿರಬೇಕು. ಜೀವನದಲ್ಲಿ ಮುಂದುವರಿಯಲು ನಿಮ್ಮದೇ ಆದ ಹಾದಿಯನ್ನು ಹುಡುಕಬೇಕು. ಅವರು ದೈಹಿಕವಾಗಿ ಇದ್ದಾರೋ, ಇಲ್ಲವೋ ಎಂದು ನೀವು ಎಂದಿಗೂ ಹಿಂದೆ ನೋಡಬೇಕಿಲ್ಲ. ಏಕೆಂದರೆ ಅವರು ಎಂದಿಗೂ ನಿಮ್ಮನ್ನು ನೋಡಿಕೊಳ್ಳುತ್ತಾ ಇರುತ್ತಾರೆ. ತಂದೆಯ ದಿನಾಚರಣೆಯ ಶುಭಾಶಯಗಳು ಎಂದು ಕೊಹ್ಲಿ ಅಪ್ಪನೊಂದಿಗಿರುವ ಫೋಟೋ ಜೊತೆ ಬರೆದುಕೊಂಡಿದ್ದಾರೆ. 

ಅಫ್ಘಾನಿಸ್ತಾನ ಕ್ರಿಕೆಟಿಗನ ಕಾರು ಅಪಘಾತ; ವಾಹನ ಪುಡಿ ಪುಡಿ!

ಸಾಮಾಜಿಕ ಜಾಲತಾಣಗಳಲ್ಲಿ ಕೊಹ್ಲಿ ಹಂಚಿಕೊಳ್ಳುತ್ತಿದ್ದಂತೆ ಅಭಿಮಾನಿಗಳು ಕಾಮೆಂಟ್‌ಗಳ ಹೊಳೆಯನ್ನೇ ಹರಿಸಿದ್ದಾರೆ. ನಿಮ್ಮ ಬಗ್ಗೆ ನಿಮ್ಮ ತಂದೆಗೆ ಎಂದೆಂದಿಗೂ ಹೆಮ್ಮೆಯಿರುತ್ತದೆ ಎಂದು ಅಭಿಮಾನಿಯೊಬ್ಬರು ಕಮೆಂಟ್ ಮಾಡಿದ್ದಾರೆ.

ವಿರಾಟ್ ಕೊಹ್ಲಿ 18 ವರ್ಷದವರಿದ್ದಾಗ ತಂದೆಯನ್ನು ಕಳೆದುಕೊಂಡಿದ್ದರು.ವಿರಾಟ್ ಕೊಹ್ಲಿ ಮಾತ್ರವಲ್ಲದೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಪಿನ್ನರ್ ಯುಜುವೇಂದ್ರ ಚಹಲ್ ಕೂಡಾ ತಮ್ಮ ತಂದೆಯ ಭಾವಚಿತ್ರವನ್ನು ಶೇರ್ ಮಾಡುವ ಮೂಲಕ ಫಾದರ್ಸ್ ಡೇಗೆ ಶುಭಕೂರಿದ್ದಾರೆ.