ನವದೆಹಲಿ(ಫೆ.04): ಭಾರತ ತಂಡದ ಕ್ರಿಕೆಟಿಗ ಜಯದೇವ್‌ ಉನಾದ್ಕತ್‌, ಮಂಗಳವಾರ ರಿನ್ನಿ ಕಟಾರಿಯಾ ಅವರನ್ನು ಮದುವೆಯಾಗಿದ್ದಾರೆ. ಗುಜರಾತ್‌ನ ಆನಂದ್‌ ನಗರದ ಖಾಸಗಿ ರೆಸಾರ್ಟ್‌ನಲ್ಲಿ ವಿವಾಹ ಸಮಾರಂಭ ನಡೆಯಿತು.

ನಮ್ಮ ವಿವಾಹ ಫೆಬ್ರವರಿ 02ರಂದು ನಮ್ಮ ವಿವಾಹವಾಯಿತು. ನಮ್ಮ ಕುಟುಂಬಸ್ಥರು ಹಾಗೂ ಆತ್ಮೀಯ ಸ್ನೇಹಿತರು ಪಾಲ್ಗೊಂಡಿದ್ದರು. ನಮ್ಮ ಮೇಲೆ ನೀವು ತೋರಿದ ಪ್ರೀತಿಗೆ ನಾವು ಚಿರಋಣಿ. ನಮ್ಮ ಹೊಸ ಪಯಣಕ್ಕೆ ನಿಮ್ಮ ನಿಮ್ಮ ಪ್ರೀತಿಯ ಶುಭಹಾರೈಕೆಗಳನ್ನು ಎದುರು ನೋಡುತ್ತಿದ್ದೇವೆ ಎಂದು ಇನ್‌ಸ್ಟಾಗ್ರಾಂನಲ್ಲಿ ಉನಾದ್ಕತ್ ಬರೆದುಕೊಂಡಿದ್ದಾರೆ. 

ಖಾಸಗಿ ರೆಸಾರ್ಟ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಎರಡೂ ಕುಟುಂಬಗಳ ಆಪ್ತರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಮದುವೆ ಕಾರ‍್ಯಕ್ರಮವನ್ನು ನಡೆಸಲಾಗಿದೆ. ಬುಧವಾರ ರಿನ್ನಿ, ಮದುವೆ ಫೋಟೋಗಳನ್ನು ಸಾಮಾಜಿಕ ತಾಣಗಳಲ್ಲಿ ಪೋಸ್ಟ್‌ ಮಾಡಿ ವಿಷಯ ಬಹಿರಂಗ ಪಡಿಸಿದ್ದಾರೆ. ಕಳೆದ ವರ್ಷ ಮಾರ್ಚ್‌ 15 ರಂದು ಉನಾದ್ಕತ್‌ ಹಾಗೂ ರಿನ್ನಿ ಅವರ ನಿಶ್ಚಿತಾರ್ಥ ನೇರವೇರಿತ್ತು.

ಮಗಳಿಗೆ ಹೆಸರಿಟ್ಟ ವಿರುಷ್ಕಾ ದಂಪತಿ; ಮಗುವಿನ ಮೊದಲ ಫೋಟೋ ರಿವೀಲ್

ಇತ್ತೀಚೆಗಷ್ಟೇ ಮುಕ್ತಾಯವಾದ ಸಯ್ಯದ್ ಮುಷ್ತಾಕ್ ಅಲಿ ಕ್ರಿಕೆಟ್‌ ಟೂರ್ನಿಯಲ್ಲಿ ಜಯದೇವ್‌ ಉನಾದ್ಕತ್ 6 ವಿಕೆಟ್ ಕಬಳಿಸಿದ್ದರು. ಹೀಗಿದ್ದೂ ಸೌರಾಷ್ಟ್ರ ತಂಡವು ನಾಕೌಟ್ ಹಂತ ಪ್ರವೇಶಿಸಲು ವಿಫಲವಾಗಿತ್ತು. ಮುಂಬರುವ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಜಯದೇವ್ ಉನಾದ್ಕತ್ ರಾಜಸ್ಥಾನ ರಾಯಲ್ಸ್ ತಂಡದ ಪರ ಕಣಕ್ಕಿಳಿಯಲಿದ್ದಾರೆ.