ಸಿಡ್ನಿ(ನ.23): ಇಲ್ಲಿನ ಒಲಿಂಪಿಕ್‌ ಪಾರ್ಕ್‌ನಲ್ಲಿ ಟೀಂ ಇಂಡಿಯಾ ಆಟಗಾರರು 14 ದಿನಗಳ ಕಾಲ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಭಾರತ ಟಿ20 ತಂಡದಲ್ಲಿ ಸ್ಥಾನ ಪಡೆದಿರುವ ಯುವ ವೇಗಿ ದೀಪಕ್‌ ಚಹರ್‌ ಕೂಡಾ ಕ್ವಾರಂಟೈನ್‌ನಲ್ಲಿದ್ದಾರೆ. 

ಅಭ್ಯಾಸ ನಡೆಸುವಾಗ ಭಾರತ ತಂಡದ ಇತರೆ ಆಟಗಾರರೊಂದಿಗೆ ವೇಗಿ ದೀಪಕ್ ಚಹರ್ ಕೂಡಾ ಅಭ್ಯಾಸದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆ ಬಳಿಕ ಕ್ವಾರಂಟೈನಲ್ಲಿ ಕಾಲ ಕಳೆಯಲು ಚಹರ್, ಗಿಟಾರ್ ಮೊರೆ ಹೋಗಿದ್ದಾರೆ. ಹೋಟೆಲ್ ಕೊಠಡಿಯಲ್ಲಿ ಕಾಲಕಳೆಯಲು ಚಹರ್ ಗಿಟಾರ್ ಬಾರಿಸುತ್ತಾ ಎಂಜಾಯ್ ಮಾಡುತ್ತಿದ್ದಾರೆ. ದೀಪಕ್ ಚಹರ್ ಸಂಗೀತ ಮತ್ತು ಧ್ಯಾನದ ಮೂಲಕ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ

ಆಸೀಸ್‌ ಎದುರು ವಿರಾಟ್ ಕೊಹ್ಲಿ ಅನುಪಸ್ಥಿತಿ ಟೀಂ ಇಂಡಿಯಾಗೆ ದೊಡ್ಡ ಹೊಡೆತ ನೀಡಲಿದೆ..!

ಬಾಲಿವುಡ್‌ ನಟ ಶಾರುಕ್‌ ಖಾನ್‌ ನಟನೆಯ ದಿಲ್‌ವಾಲೆ ದುಲಾನಿಯಾ ಲೇಜಾಯೆಂಗೆ ಚಿತ್ರದ ಹಾಡನ್ನು ಗಿಟಾರ್‌ನಲ್ಲಿ ನುಡಿಸಿದರು. ಚಹರ್‌ ಗಿಟಾರ್‌ ನುಡಿಸಿರುವ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ವಿಡಿಯೋ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಭಾರತ-ಆಸ್ಟ್ರೇಲಿಯಾ ನಡುವಿನ ಸೀಮಿತ ಓವರ್‌ಗಳ ಸರಣಿ ನವೆಂಬರ್ 27ರಿಂದ ಆರಂಭವಾಗಲಿದೆ. ಮೊದಲಿಗೆ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದ್ದು, ಆ ಬಳಿಕ ಅಂದರೆ ಡಿಸೆಂಬರ್ 04ರಿಂದ 3 ಪಂದ್ಯಗಳ ಟಿ20 ಸರಣಿ ಜರುಗಲಿದೆ. ಕೊನೆಯಲ್ಲಿ 4 ಪಂದ್ಯಗಳ ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿ ನಡೆಯಲಿದೆ.