ಅಗ್ನಿ ಪರೀಕ್ಷೆಯಲ್ಲಿ ಗೆದ್ದ ಕೇರಳ ಬ್ಯಾಟರ್: ಇನ್ಮೇಲಾದ್ರೂ ಬದಲಾಗುತ್ತಾ ಸಂಜು ಸ್ಯಾಮ್ಸನ್ ಕ್ರಿಕೆಟ್ ಕರಿಯರ್..?
ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ನೆಲದಲ್ಲಿ ಏಕದಿನ ಸರಣಿ ಗೆದ್ದು ಇತಿಹಾಸ ನಿರ್ಮಿಸಿದೆ. ಇನ್ನು ಏಕದಿನ ವಿಶ್ವಕಪ್ ಸೋಲಿನ ನೋವನ್ನ ಈ ಗೆಲುವು, ಒಂದು ಲೆವೆಲ್ಗೆ ಮರೆಸಿದೆ ಅಂದ್ರೆ ತಪ್ಪಿಲ್ಲ. ಅದರಲ್ಲೂ ಕನ್ನಡಿಗ ಕೆ.ಎಲ್ ರಾಹುಲ್ ಅಂತೂ ಈ ಗೆಲುವಿನಿಂದ ಫುಲ್ ಖುಷ್ ಆಗಿದ್ದಾರೆ.
ಬೆಂಗಳೂರು(ಡಿ.24): ಯಾರ ಹಣೆಬರಹ ಯಾವಾಗ ಬದಲಾಗುತ್ತೆ ಅಂತ ಹೇಳೋಕೆ ಆಗಲ್ಲ. ಅದೃಷ್ಟ ಖುಲಾಯಿಸಿದ್ರೆ ಪಾತಾಳದಲ್ಲಿದ್ದವರು ಆಕಾಶಕ್ಕೇರಬಹುದು. ಅಷ್ಟಕ್ಕೂ ಏನ್ ವಿಷ್ಯಾ ಅಂತೀರಾ..? ನಾವು ಹೇಳ್ತಿರೋದು ಟೀಮ್ ಇಂಡಿಯಾ ಆಟಗಾರ ಸಂಜು ಸ್ಯಾಮ್ಸನ್ ಬಗ್ಗೆ. ಅಷ್ಟಕ್ಕೂ ಏನ್ ವಿಷ್ಯ ಅಂತೀರಾ.? ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ.
ಇನ್ಮೇಲೆ ಬದಲಾಗುತ್ತಾ ಸಂಜು ಕರಿಯರ್..?
ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ನೆಲದಲ್ಲಿ ಏಕದಿನ ಸರಣಿ ಗೆದ್ದು ಇತಿಹಾಸ ನಿರ್ಮಿಸಿದೆ. ಇನ್ನು ಏಕದಿನ ವಿಶ್ವಕಪ್ ಸೋಲಿನ ನೋವನ್ನ ಈ ಗೆಲುವು, ಒಂದು ಲೆವೆಲ್ಗೆ ಮರೆಸಿದೆ ಅಂದ್ರೆ ತಪ್ಪಿಲ್ಲ. ಅದರಲ್ಲೂ ಕನ್ನಡಿಗ ಕೆ.ಎಲ್ ರಾಹುಲ್ ಅಂತೂ ಈ ಗೆಲುವಿನಿಂದ ಫುಲ್ ಖುಷ್ ಆಗಿದ್ದಾರೆ. 2021ರಲ್ಲಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾದ ಕೈಗೊಂಡಿದ್ದಾಗ, ಏಕದಿನ ಸರಣಿಯಲ್ಲಿ ವೈಟ್ವಾಶ್ ಆಗಿತ್ತು. ಆಗ ರಾಹುಲ್ ತಂಡವನ್ನ ಮುನ್ನಡೆಸಿದ್ರು. ಆದ್ರೀಗ, ರಾಹುಲ್ ಎರಡು ವರ್ಷಗಳ ಹಿಂದಿನ ಸೋಲಿಗೆ ಸೇಡು ತೀರಿಸಿಕೊಂಡಿದ್ದಾರೆ. ಅಲ್ಲದೇ, ತಮ್ಮ ನಾಯಕತ್ವದ ಸಾಮರ್ಥ್ಯವನ್ನ ಪ್ರೂವ್ ಮಾಡಿದ್ದಾರೆ.
ಹಿಮ್ಮಡಿ ನೋವಿನಿಂದ ಬಳಲುತ್ತಿರುವ ಪಾಂಡ್ಯ: ಯಾರಾಗ್ತಾರೆ ಮುಂಬೈ ಇಂಡಿಯನ್ಸ್ ನಾಯಕ..?
ಸಂಜುವಿನ ಶತಕದಾಟಕ್ಕೆ ಫ್ಯಾನ್ಸ್ ಫಿದಾ..!
ರಾಹುಲ್ಗಷ್ಟೇ ಅಲ್ಲ, ಸಂಜು ಸ್ಯಾಮ್ಸನ್ಗೂ ಈ ಸರಣಿ ಅಗ್ನಿ ಪರೀಕ್ಷೆಯಾಗಿತ್ತು. ಯಾಕಂದ್ರೆ, ಈಗಾಗ್ಲೇ T20 ತಂಡದ ದೂರವಾಗಿರೋ ಸಂಜು, ಏಕದಿನ ತಂಡದಲ್ಲಿ ಮಾತ್ರ ಕಾಣಿಸಿಕೊಳ್ತಿದ್ದಾರೆ. ಏಕದಿನ ತಂಡದಲ್ಲೂ ಸ್ಥಾನ ಫಿಕ್ಸ್ ಆಗಿಲ್ಲ. ಹೀಗಾಗಿ ಒನ್ಡೇ ಟೀಮಲ್ಲಿ ಸ್ಥಾನ ಭದ್ರಪಡಿಸಿ ಕೊಳ್ಳಬೇಕಾದ್ರೆ, ದಕ್ಷಿಣ ಆಫ್ರಿಕಾ ವಿರುದ್ಧ ಅಬ್ಬರಿಸಲೇಬೇಕಿತ್ತು. ಅದರಂತೆ ಸಂಜು ಅಬ್ಬರಿಸಿದ್ರು.
ಸಿರೀಸ್ ಡಿಸೈಡರ್ ಮ್ಯಾಚಲ್ಲಿ ಸಂಜುವಿನ ಆಟ ನಿಜಕ್ಕೂ ಅದ್ಭುತವಾಗಿತ್ತು. ಬೌಲರ್ಗಳಿಗೆ ಹೆಚ್ಚು ಅನುಕೂಲವಾಗಿದ್ದ ಪಿಚ್ನಲ್ಲಿ, ರನ್ಗಳಿಸೋದು ಕಷ್ಟ ಕಷ್ಟವಾಗಿತ್ತು. ಆದ್ರೆ, ಪಿಚ್ ಮರ್ಮ ಅರಿತು ಸಂಜು ಬ್ಯಾಟ್ ಬೀಸಿದ್ರು. ಸಂದರ್ಭಕ್ಕೆ ತಕ್ಕಂತೆ ಆಡಿ, ಶತಕ ಬಾರಿಸಿದ್ರು. ಒಂದು ವೇಳೆ ಸಂಜು ಆಡದೇ ಹೋಗಿದ್ರೆ, ಮಾರ್ಕ್ರಮ್ ಪಡೆಗೆ ಬಿಗ್ ಟಾರ್ಗೆಟ್ ನೀಡಲು ಸಾಧ್ಯ ವಾಗ್ತಿರಲಿಲ್ಲ.
ಇಷ್ಟು ದಿನ ಒಂದು ಲೆಕ್ಕ..ಇನ್ಮುಂದೆ ಒಂದು ಲೆಕ್ಕ..?
ಯೆಸ್, ತಂಡ ಸಂಕಷ್ಟದಲ್ಲಿದ್ದಾಗ ಸಿಡಿಸಿದ ಶತಕ, ಸಂಜು ಕರಿಯರ್ ಪಾಲಿಗೆ ಟರ್ನಿಂಗ್ ಪಾಯಿಂಗ್ ಆಗಲಿದೆ ಅನ್ನೋ ಮಾತುಗಳು ಕೇಳಿಬರ್ತಿವೆ. ಫ್ಯಾನ್ಸ್ ಮತ್ತು ಮಾಜಿ ಆಟಗಾರರು ಸಂಜು ಶತಕಕ್ಕೆ ಫಿದಾ ಆಗಿದ್ದಾರೆ. ಲೆಜೆಂಡ್ ಸುನಿಲ್ ಗವಾಸ್ಕರ್ ಕೂಡ ಸಂಜು ಆಟವನ್ನ ಹಾಡಿಹೊಗಳಿದ್ದಾರೆ.
ಹಿಂಗೆ ಆಡಿದ್ರೆ ವಿರಾಟ್ ಕೊಹ್ಲಿ ಸ್ಥಾನ ಫಿಕ್ಸ್..!
ಈ ಒಂದು ಶತಕ ಸಂಜು ಕರಿಯರ್ಗೆ ಬೂಸ್ಟ್ ನೀಡುತ್ತೆ ಅನ್ನೋದು ನಿಜ. ಆದ್ರೆ, ಸದ್ಯ ಟೀಮ್ ಇಂಡಿಯಾದಲ್ಲಿ ಒಂದೊಂದು ಸ್ಥಾನಕ್ಕೂ ಪೈಪೋಟಿ ನಡೀತಿದೆ. ಈ ಪೈಪೋಟಿಯಲ್ಲಿ ಸಂಜು ಗೆಲ್ತಾರಾ ಅನ್ನೋದೆ ಪ್ರಶ್ನೆಯಾಗಿದೆ. ಯಾಕಂದ್ರೆ ತಂಡದ ಬ್ಯಾಟಿಂಗ್ ಆರ್ಡರ್ನಲ್ಲಿ ಈ ಕೇರಳ ಬ್ಯಾಟರ್ಗೆ ಯಾವುದೇ ಸ್ಲಾಟ್ ಫಿಕ್ಸ ಆಗಿಲ್ಲ. ಆಡಿರೋ 15 ಪಂದ್ಯಗಳಲ್ಲಿ ಮೂರು ಬಾರಿ ಮೂರನೇ ಕ್ರಮಾಂಕದಲ್ಲಿ, 6 ಬಾರಿ 5ನೇ ಕ್ರಮಾಂಕದಲ್ಲಿ ಆಡಿದ್ರೆ, ನಂಬರ್ ಸಿಕ್ಸಲ್ಲಿ 4 ಬಾರಿ ಮತ್ತು ನಂಬರ್ ಫೋರಲ್ಲಿ 1 ಬಾರಿ ಬ್ಯಾಟ್ ಬೀಸಿದ್ದಾರೆ.
ದೇಶಿಯ ಕ್ರಿಕೆಟ್ನಲ್ಲಿ ಸಂಜು ಒನ್ಡೌನ್ಲ್ಲಿ ಆಡ್ತಾರೆ. ದಕ್ಷಿಣ ಆಫ್ರಿಕಾ ವಿರುದ್ಧವೂ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಶತಕ ಸಿಡಿಸಿದ್ದಾರೆ. ಆದ್ರೆ, ಏಕದಿನ ಕ್ರಿಕೆಟ್ನಲ್ಲಿ ಈ ಜಾಗ ಕೊಹ್ಲಿಗೆ ಫಿಕ್ಸ್ ಆಗಿದೆ. ಕೊಹ್ಲಿ ತಂಡದಲ್ಲಿದ್ರೆ ಸಂಜು ಬೇರೆ ಸ್ಥಾನ ನೋಡಿಕೊಳ್ಳಬೇಕು. ಆದ್ರೆ, ಕೊಹ್ಲಿ ಅನುಪಸ್ಥಿತಿಯಲ್ಲಿ ಇದೇ ರೀತಿ ಮಿಂಚಿದ್ರೆ, ಕೊಹ್ಲಿ ನಂತರ ಸಂಜುಗೆ ನಂಬರ್ 3 ಸ್ಲಾಟ್ ಸಂಜುಗೆ ಸಿಕ್ಕರೂ ಅಚ್ಚರಿ ಇಲ್ಲ.
ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್